
ಜೆರುಸಲೇಂ, ಜೂನ್ 19: ಇಸ್ರೇಲ್‌ನ (Israel) ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಸೊರೊಕಾ ವೈದ್ಯಕೀಯ ಕೇಂದ್ರವನ್ನು (Soroka Hospital) ಇರಾನ್ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದು ಎರಡೂ ದೇಶಗಳ ನಡುವಿನ ಉದ್ವಿಗ್ನತೆ ವಿಪರೀತ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ಇಸ್ರೇಲ್ ಮತ್ತು ಇರಾನ್ (Iran) ನಡುವಿನ ಮಿಲಿಟರಿ ಸಂಘರ್ಷವು ಇಂದು (ಗುರುವಾರ) ಏಳನೇ ದಿನಕ್ಕೆ ಕಾಲಿಟ್ಟಿತು. ಈ ಎರಡೂ ದೇಶಗಳು ಪರಸ್ಪರ ದೇಶಗಳ ಪ್ರದೇಶದ ಮೇಲೆ ದಾಳಿಗಳನ್ನು ಮುಂದುವರೆಸಿವೆ. ಇಂದು ಮುಂಜಾನೆ, ಇರಾನಿನ ಕ್ಷಿಪಣಿ ದಕ್ಷಿಣ ಇಸ್ರೇಲ್‌ನ ಸೊರೊಕಾ ವೈದ್ಯಕೀಯ ಕೇಂದ್ರದ ಮೇಲೆ ಅಪ್ಪಳಿಸಿತು. ಇದು ವ್ಯಾಪಕ ಹಾನಿಯನ್ನುಂಟುಮಾಡಿದೆ ಎಂದು ಇಸ್ರೇಲ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಇರಾನ್ ಹೊಸ ದಾಳಿಯನ್ನು ಪ್ರಾರಂಭಿಸಿದಾಗ ಇಂದು (ಗುರುವಾರ) ಬೆಳಗ್ಗೆ ಕ್ಷಿಪಣಿ ಅಪ್ಪಳಿಸಿದ ನಂತರ ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆಯಿಂದ ದಟ್ಟವಾದ ಹೊಗೆ ಹೊರಹೊಮ್ಮಿತು. ದಕ್ಷಿಣ ಇಸ್ರೇಲ್ ನಗರವಾದ ಬೀರ್‌ಶೆಬಾದಲ್ಲಿರುವ ಸೊರೊಕಾ ಆಸ್ಪತ್ರೆ ಬ್ಯಾಲಿಸ್ಟಿಕ್ ಕ್ಷಿಪಣಿಗೆ ಡಿಕ್ಕಿ ಹೊಡೆದಿದೆ. ಇರಾನಿನ ಈ ಕ್ಷಿಪಣಿ ದಾಳಿಯ ಪರಿಣಾಮವಾಗಿ ಇಸ್ರೇಲ್‌ನಾದ್ಯಂತ 47 ಜನರು ಗಾಯಗೊಂಡಿದ್ದಾರೆ ಎಂದು ಗುರುವಾರ ಹಲವಾರು ಪೀಡಿತ ಸ್ಥಳಗಳಿಗೆ ರಕ್ಷಣಾ ತಂಡಗಳು ಪ್ರತಿಕ್ರಿಯಿಸುತ್ತಿರುವುದನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
The Iranian regime targeted Soroka Hospital in Beersheba with a ballistic missile—hitting a major medical center.
We will not stand by. We will continue doing what must be done to defend our people. pic.twitter.com/4ldeTQhATW
— Israel ישראל (@Israel) June 19, 2025
ದೇಶಾದ್ಯಂತ ಇರಾನಿನ ದಾಳಿಗಳಿಂದ ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆಯಾದ ಸೊರೊಕಾ ವೈದ್ಯಕೀಯ ಕೇಂದ್ರವು ಹಾನಿಗೊಳಗಾಗಿದೆ. ಇದರ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಸೊರೊಕಾ ಆಸ್ಪತ್ರೆಯ ಕಟ್ಟಡದೊಳಗೆ ಭೀತಿ ಹರಡುತ್ತಿದ್ದಂತೆ ಆಸ್ಪತ್ರೆಯಿಂದ ಒಡೆದ ಕಿಟಕಿಗಳು ಮತ್ತು ದಟ್ಟವಾದ ಕಪ್ಪು ಹೊಗೆ ಹೊರಬರುತ್ತಿರುವ ದೃಶ್ಯಗಳನ್ನು ಇಸ್ರೇಲಿ ಮಾಧ್ಯಮ ಪ್ರಸಾರ ಮಾಡಿತು. ಈ ಆಸ್ಪತ್ರೆಯೊಳಗಿನ ದಾಳಿಯ ಪರಿಣಾಮಗಳನ್ನು ಸೆರೆಹಿಡಿಯುವ ವೀಡಿಯೊವನ್ನು ಇಸ್ರೇಲ್ ವಿದೇಶಾಂಗ ಸಚಿವ ಶಾರೆನ್ ಹ್ಯಾಸ್ಕೆಲ್ ಹಂಚಿಕೊಂಡಿದ್ದಾರೆ.
When lsraeI bombed the first hospital in Gaza, the world wouldn’t believe it and Israel blamed a misfired rocket from Hamas.
lsraeI has now destroyed all 36 hospitals in Gaza including its largest, the al-Shifa Hospital.
They have no right to complain.
pic.twitter.com/JZHhDeaPCk— ADAM (@AdameMedia) June 19, 2025
ಆಸ್ಪತ್ರೆ ಸಿಬ್ಬಂದಿ ಮತ್ತು ನಾಗರಿಕರು ಹೊಗೆ ತುಂಬಿದ ಕಾರಿಡಾರ್‌ಗಳ ಮೂಲಕ ಓಡುತ್ತಿರುವುದನ್ನು ಕಾಣಬಹುದು. ಕಿಟಕಿಯ ಗಾಜಿನ ಚೂರುಗಳು ಮಹಡಿಗಳಲ್ಲಿ ಹರಡಿಕೊಂಡಿವೆ. ಮುರಿದ ಕಿಟಕಿಗಳು, ಬೆಂಚುಗಳು ಮತ್ತು ಕುರ್ಚಿಗಳ ಅವಶೇಷಗಳು ಆಸ್ಪತ್ರೆಯಾದ್ಯಂತ ಹರಡಿಕೊಂಡಿವೆ. “ಇರಾನಿನ ಆಡಳಿತವು ಬೀರ್‌ಶೆಬಾದ ಸೊರೊಕಾ ಆಸ್ಪತ್ರೆಯನ್ನು ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ಗುರಿಯಾಗಿಸಿಕೊಂಡಿತು. ನಮ್ಮ ದೇಶದ ಪ್ರಮುಖ ವೈದ್ಯಕೀಯ ಕೇಂದ್ರದ ಮೇಲೆ ದಾಳಿಯಾಗಿದೆ. ನಾವು ಸುಮ್ಮನಿರುವುದಿಲ್ಲ. ನಮ್ಮ ಜನರನ್ನು ರಕ್ಷಿಸಲು ನಾವು ಏನು ಮಾಡಬೇಕೋ ಅದನ್ನು ಮುಂದುವರಿಸುತ್ತೇವೆ”ಎಂದು ವಿದೇಶಾಂಗ ಸಚಿವಾಲಯ ನಿರ್ವಹಿಸುವ ಅಧಿಕೃತ ‘ಸ್ಟೇಟ್ ಆಫ್ ಇಸ್ರೇಲ್’ ಖಾತೆ ತಿಳಿಸಿದೆ.
Iran just hit an hospital in Israel.
Let the world fucking know.
We are at war with demons on Earth.
— Vivid.🇮🇱 (@VividProwess) June 19, 2025
ಇದನ್ನೂ ಓದಿ: ಇಸ್ರೇಲ್ ಇರಾನ್ ಯುದ್ಧಕ್ಕೂ ಅಮೆರಿಕದಲ್ಲಿ ಪಿಜ್ಜಾ ಆರ್ಡರ್ ಹೆಚ್ಚಳಕ್ಕೂ ಏನು ಸಂಬಂಧ? ಇಲ್ಲಿದೆ ಅಸಲಿ ವಿಚಾರ
ಇರಾನ್ ಗುರಿಯಾಗಿಸಿಕೊಂಡಿರುವ ಸೊರೊಕಾ ವೈದ್ಯಕೀಯ ಕೇಂದ್ರವು ಇಸ್ರೇಲ್‌ನ ದಕ್ಷಿಣದಲ್ಲಿರುವ ಪ್ರಮುಖ ಆಸ್ಪತ್ರೆಯಾಗಿದ್ದು, 1,000ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿದೆ. ಇದು ಈತು ಪ್ರದೇಶದ ಸುಮಾರು 1 ಮಿಲಿಯನ್ ನಿವಾಸಿಗಳಿಗೆ ಸೇವೆಗಳನ್ನು ಒದಗಿಸುತ್ತದೆ. ಈ ಹೊಸ ದಾಳಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು, “ಇಂದು ಬೆಳಿಗ್ಗೆ, ಇರಾನ್‌ನ ಭಯೋತ್ಪಾದಕ ನಿರಂಕುಶಾಧಿಕಾರಿಗಳು ಬೀರ್ ಶೆಬಾದ ಸೊರೊಕಾ ಆಸ್ಪತ್ರೆಯಲ್ಲಿ ಮತ್ತು ಮಧ್ಯ ಇಸ್ರೇಲ್‌ನ ನಾಗರಿಕರ ಮೇಲೆ ಕ್ಷಿಪಣಿಗಳನ್ನು ಹಾರಿಸಿದರು. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ