ಟೆಲ್ಅವೀವ್: ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಕೊವಿಡ್-19 ಲಸಿಕೆ ಹಾಕಿಸಿಕೊಂಡಿದ್ದಾರೆ. ಆ ಮೂಲಕ ಕೊರೊನಾ ವಿರುದ್ಧ ಲಸಿಕೆ ಚುಚ್ಚಿಸಿಕೊಂಡ ಇಸ್ರೇಲ್ನ ಮೊದಲ ಪ್ರಜೆ ಅನಿಸಿಕೊಂಡಿದ್ದಾರೆ. ದೇಶವ್ಯಾಪಿ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ರಮಾತ್ ಗಾನ್ನಲ್ಲಿರುವ ಶೆಬಾ ವೈದ್ಯಕೀಯ ಕೇಂದ್ರದಲ್ಲಿ ಪ್ರಧಾನಿ ನೆತನ್ಯಾಹು ಮತ್ತು ಇಸ್ರೇಲ್ ಆರೋಗ್ಯ ಸಚಿವ ಯುಲಿ ಎಡೆಲ್ಸ್ಟಿನ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ನಾನು ವೈಯಕ್ತಿಕ ಉದಾಹರಣೆಯಾಗಿದ್ದೇನೆ ಮತ್ತು ನಿಮ್ಮನ್ನೂ ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸುತ್ತೇನೆ ಎಂದು ನೆತನ್ಯಾಹು ಹೇಳಿದ್ದಾರೆ.
ಈ ತಿಂಗಳ ಅಂತ್ಯದೊಳಗಾಗಿ ಹತ್ತು ಲಕ್ಷದಷ್ಟು ಕೊವಿಡ್-19 ಲಸಿಕೆಗಳು ಲಭ್ಯವಾಗಲಿವೆ ಎಂಬ ಮಾಹಿತಿಯನ್ನೂ ಪ್ರಧಾನಿ ನೀಡಿದ್ದಾರೆ. ಶನಿವಾರ ನಡೆದ ಕಾರ್ಯಕ್ರಮ ಟಿವಿಯಲ್ಲೂ ಪ್ರಧಾನಿ ಲಸಿಕೆ ಹಾಕಿಸಿಕೊಳ್ಳುವ ದೃಶ್ಯ ನೇರಪ್ರಸಾರವಾಗಿದೆ.
ಫೆಬ್ರವರಿಯಲ್ಲಿ ಮೊದಲ ಕೋವಿಡ್-19 ಪ್ರಕರಣ ಎದುರಿಸಿದ ಇಸ್ರೇಲ್, ಇದುವರೆಗೆ 3 ಲಕ್ಷದ 72 ಸಾವಿರದಷ್ಟು ಕೊವಿಡ್ ಪ್ರಕರಣಗಳನ್ನು ದಾಖಲಿಸಿದೆ. 3,070 ಮಂದಿ ಕೊರೊನಾ ವೈರಾಣು ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೀಗ, ಇಸ್ರೇಲ್ ಫೈಝರ್-ಬಯೊಎನ್ಟೆಕ್ ಲಸಿಕೆಯನ್ನು ಜನರಿಗೆ ಹಾಕುವ ಪ್ರಕ್ರಿಯೆ ಆರಂಭಿಸಿದೆ.
ಅಮೆರಿಕಾ, ರಷ್ಯಾ, ಬ್ರಿಟನ್ ಕೂಡ ಲಸಿಕೆ ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಅಮೆರಿಕಾ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಪತ್ನಿ ಕೂಡ ಸೋಮವಾರ ಕೊವಿಡ್-19 ವಿರುದ್ಧದ ಫೈಝರ್ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ.
Joe Biden, wife to receive Pfizer COVID-19 vaccine on Monday
Read @ANI Story | https://t.co/CAWEXdBzSs pic.twitter.com/QVwYz88iF3
— ANI Digital (@ani_digital) December 19, 2020
Published On - 12:55 pm, Sun, 20 December 20