ನವದೆಹಲಿ: ಎರಡು ವರ್ಷಗಳಿಂದ ಜಗತ್ತನ್ನೇ ಕಂಗೆಡಿಸಿರುವ ಕೊರೊನಾವೈರಸ್ (Coronavirus) ರೂಪಾಂತರಗೊಳ್ಳುತ್ತಾ ಮತ್ತಷ್ಟು ಆತಂಕ ಹೆಚ್ಚಿಸಿತ್ತು. ಈಗಾಗಲೇ ಅನೇಕ ರೂಪಾಂತರಗಳನ್ನು ಪಡೆದಿರುವ ಕೊವಿಡ್-19ನಿಂದ ಪಾರಾಗಲು ವಿಶ್ವಾದ್ಯಂತ ಕೊರೊನಾ ಲಸಿಕೆಗಳನ್ನು (Covid Vaccine) ನೀಡಲಾಗುತ್ತಿದೆ. ಹೀಗಾಗಿ, ಕೊವಿಡ್ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿರುವುದರಿಂದ ಅನೇಕ ದೇಶಗಳಲ್ಲಿ ಜನಜೀವನ ಸುಧಾರಿಸಿದೆ. ಆದರೆ, ಪ್ರಪಂಚಕ್ಕೆ ತಿಳಿದಿಲ್ಲದ ಹೊಸ ಕೊವಿಡ್ ರೂಪಾಂತರಿಯ 2 ಪ್ರಕರಣಗಳು ಇಸ್ರೇಲ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಇಸ್ರೇಲ್‌ನ ಆರೋಗ್ಯ ಸಚಿವಾಲಯವು ದಾಖಲಾದ ಹೊಸ ಕೊವಿಡ್ ರೂಪಾಂತರಿಯ ಎರಡು ಪ್ರಕರಣಗಳು COVID-BA.1 ಮತ್ತು BA.2ನ ಓಮಿಕ್ರಾನ್ ಆವೃತ್ತಿಯ ಎರಡು ಉಪ-ವ್ಯತ್ಯಯಗಳ ಸಂಯೋಜನೆಯಾಗಿದೆ ಎಂದು ಹೇಳಿದೆ. ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರಿಗೆ ಕೊವಿಡ್ ಪರೀಕ್ಷೆ ಮಾಡಿದಾಗ ಈ ಹೊಸ ಸ್ಟ್ರೈನ್ ತಗುಲಿರುವುದು ಪತ್ತೆಯಾಗಿದೆ. ಈ ಹೊಸ ಕೊವಿಡ್ ರೂಪಾಂತರಿಯ ಬಗ್ಗೆ ಬೇರೆ ದೇಶಗಳೂ ಎಚ್ಚರಿಕೆಯಿಂದಿರಲು ಇಸ್ರೇಲ್ ತಿಳಿಸಿದೆ.
ಇಸ್ರೇಲ್ನಲ್ಲಿ ಹೊಸ COVID ರೂಪಾಂತರ ಸೋಂಕಿಗೆ ಒಳಗಾದ ಇಬ್ಬರು ರೋಗಿಗಳು ಜ್ವರ, ತಲೆನೋವು ಮತ್ತು ಸ್ನಾಯು ಡಿಸ್ಟ್ರೋಫಿಯಗಳಿಂದ ಬಳಲುತ್ತಿದ್ದರು. ಈ ರೂಪಾಂತರವು ಪ್ರಪಂಚದಾದ್ಯಂತ ಇನ್ನೂ ತಿಳಿದಿಲ್ಲ. ಕೊರೊನಾ ರೂಪಾಂತರಿಯ 2 ಪ್ರಕರಣಗಳು ಇಲ್ಲಿಯವರೆಗೆ ಪತ್ತೆಯಾಗಿವೆ, ಜ್ವರ, ತಲೆನೋವು ಮತ್ತು ಸ್ನಾಯು ಡಿಸ್ಟ್ರೋಫಿಯದಿಂದ ಅವರು ಬಳಲುತ್ತಿದ್ದರು. ಇದಕ್ಕೆ ವಿಶೇಷ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಇಸ್ರೇಲ್‌ನ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Covid Vaccine: 12ರಿಂದ 15 ವರ್ಷದ ಮಕ್ಕಳಿಗೆ ಇಂದಿನಿಂದ ಕೊವಿಡ್ ನಿರೋಧಕ ಲಸಿಕೆ
12-14 ವರ್ಷ ವಯಸ್ಸಿನ ಮಕ್ಕಳಿಗೆ ಕೊವಿಡ್ ಲಸಿಕೆ: ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ