AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರೌನ್ ಬಾಯ್ ಎಂದು ಕರೀತಿದ್ರು, ಜೆಪಿ ಮೋರ್ಗನ್ ಹಿರಿಯ ಮಹಿಳಾ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

ಜೆಪಿ ಮೋರ್ಗನ್ ಚೇಸ್ ಬ್ಯಾಂಕ್ ಮತ್ತೆ ವಿವಾದದಲ್ಲಿ ಸಿಲುಕಿದೆ. ಕಾರ್ಯನಿರ್ವಾಹಕ ನಿರ್ದೇಶಕಿ ಲೋರ್ನಾ ಹಜ್ದಿನಿ ವಿರುದ್ಧ ಕಿರಿಯ ಸಹೋದ್ಯೋಗಿ ಲೈಂಗಿಕ ಕಿರುಕುಳ, ಜನಾಂಗೀಯ ನಿಂದನೆ ಮತ್ತು ಅಧಿಕಾರ ದುರ್ಬಳಕೆ ಆರೋಪ ಹೊರಿಸಿ ನ್ಯೂಯಾರ್ಕ್ ಸುಪ್ರೀಂ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. ಬಡ್ತಿಗಾಗಿ ಒತ್ತಡ, ಕೆಲಸ ಕಳೆದುಕೊಳ್ಳುವ ಬೆದರಿಕೆಗಳೂ ಸೇರಿವೆ. ಕಾರ್ಪೊರೇಟ್ ವಲಯದಲ್ಲಿನ ಅಧಿಕಾರ ದುರ್ಬಳಕೆ ಮತ್ತು ಉದ್ಯೋಗಿ ಸುರಕ್ಷತೆಯ ಬಗ್ಗೆ ಈ ಪ್ರಕರಣ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬ್ರೌನ್ ಬಾಯ್ ಎಂದು ಕರೀತಿದ್ರು, ಜೆಪಿ ಮೋರ್ಗನ್ ಹಿರಿಯ ಮಹಿಳಾ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ
ಲೋರ್ನಾImage Credit source: NDTV
ನಯನಾ ರಾಜೀವ್
|

Updated on: May 01, 2026 | 12:29 PM

Share

ನ್ಯಾಯಾರ್ಕ್​, ಮೇ 01: ವಿಶ್ವದ ಅತಿದೊಡ್ಡ ಬ್ಯಾಂಕಿಂಗ್ ಸಮೂಹವಾದ ಜೆಪಿ ಮಾರ್ಗನ್ ಚೇಸ್ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದೆ. ಕಾರ್ಯನಿರ್ವಾಹಕ ನಿರ್ದೇಶಕಿ ಲೋರ್ನಾ ಹಜ್ದಿನಿ ಅವರು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಕಿರಿಯ ಸಹೋದ್ಯೋಗಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಮೇಲೆ ನ್ಯೂಯಾರ್ಕ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. 37 ವರ್ಷದ ಲೋರ್ನಾ ಹಜ್ದಿನಿ ಅವರು ಬ್ಯಾಂಕಿನ ಲಿವರೇಜ್ಡ್ ಫೈನಾನ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಸಹೋದ್ಯೋಗಿಯೊಬ್ಬರು ನೀಡಿರುವ ದೂರಿನಲ್ಲಿ ಈ ಕೆಳಗಿನ ಗಂಭೀರ ಅಂಶಗಳನ್ನು ಉಲ್ಲೇಖಿಸಲಾಗಿದೆ.

ತಿಂಗಳುಗಳ ಕಾಲ ತಾವು ಲೈಂಗಿಕ ದೌರ್ಜನ್ಯ ಮತ್ತು ಮಾನಸಿಕ ಕಿರುಕುಳವನ್ನು ಅನುಭವಿಸಿದ್ದಾಗಿ ದೂರುದಾರರು ಆರೋಪಿಸಿದ್ದಾರೆ. ಬಡ್ತಿ ಮತ್ತು ವೃತ್ತಿಜೀವನದ ಬೆಳವಣಿಗೆಗೆ ಬದಲಾಗಿ ಲೋರ್ನಾ ಅವರು ಹಲವಾರು ಅವಿವೇಕದ ಬೇಡಿಕೆಗಳನ್ನು ಮುಂದಿಟ್ಟು ಒತ್ತಡ ಹೇರುತ್ತಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ದೂರುದಾರರು ಜನಾಂಗೀಯ ನಿಂದನೆ ಮತ್ತು ಅವಹೇಳನಕಾರಿ ಮಾತುಗಳನ್ನು ಎದುರಿಸಬೇಕಾಯಿತು ಎಂದು ದೂರಿನಲ್ಲಿ ಹೇಳಿದ್ದಾರೆ.

ಬೇಡಿಕೆಗಳನ್ನು ವಿರೋಧಿಸಿದರೆ ವೃತ್ತಿಜೀವನವನ್ನು ಕೊನೆಗೊಳಿಸುವ ಮತ್ತು ಕೆಲಸದಿಂದ ವಜಾಗೊಳಿಸುವ ಬೆದರಿಕೆಗಳನ್ನು ಹಾಕಲಾಗಿತ್ತು. ಪದೇ ಪದೇ ನಿರಾಕರಿಸಿದರೂ ಮಾನಸಿಕ ಒತ್ತಡ ಮುಂದುವರಿದ ಹಿನ್ನೆಲೆಯಲ್ಲಿ, ದೂರುದಾರರು ಬ್ಯಾಂಕ್ ತೊರೆದು ಬೇರೆಡೆ ಕೆಲಸ ಹುಡುಕಲು ಪ್ರಯತ್ನಿಸಿದ್ದರು. ಆದರೆ, ಆ ಸಂದರ್ಭದಲ್ಲಿಯೂ ಹೊಸ ಉದ್ಯೋಗ ದೊರೆಯದಂತೆ ಅಡ್ಡಿಪಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: ರಸ್ತೆ ಬದಿ ನಡೆದು ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ: ಇಬ್ಬರು ಡೆಲಿವರಿ ಬಾಯ್ಸ್ ಅರೆಸ್ಟ್​​

ಈ ಎಲ್ಲಾ ಆರೋಪಗಳನ್ನು ಜೆಪಿ ಮೋರ್ಗನ್ ಚೇಸ್ ಸಾರಾಸಗಟಾಗಿ ನಿರಾಕರಿಸಿದೆ. ತನಿಖೆಗೆ ಹಲವಾರು ಉದ್ಯೋಗಿಗಳು ಸಹಕರಿಸಿದರೂ, ದೂರುದಾರರು ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಕಂಪನಿ ಹೇಳಿದೆ.

ದೂರುದಾರರು ತಮಗೆ ಉಂಟಾದ ಮಾನಸಿಕ ಯಾತನೆ, ಆರ್ಥಿಕ ನಷ್ಟ ಮತ್ತು ಖ್ಯಾತಿಗೆ ಆದ ಹಾನಿಗಾಗಿ ದಂಡನಾತ್ಮಕ ಪರಿಹಾರವನ್ನು (Punitive Damages) ಕೋರಿದ್ದಾರೆ. ಜೊತೆಗೆ, ಇಂತಹ ಘಟನೆಗಳು ಮರುಕಳಿಸದಂತೆ ಕೆಲಸದ ಸ್ಥಳದ ನೀತಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಕಾರ್ಪೊರೇಟ್ ವಲಯದಲ್ಲಿ ಉನ್ನತ ಸ್ಥಾನದಲ್ಲಿರುವವರು ತಮ್ಮ ಅಧಿಕಾರವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಬಹುದು ಎಂಬ ಚರ್ಚೆಗೆ ಈ ಪ್ರಕರಣವು ಹೊಸ ಆಯಾಮ ನೀಡಿದೆ. ಸಂಸ್ಥೆಯ ಪಾರದರ್ಶಕತೆ ಮತ್ತು ಉದ್ಯೋಗಿಗಳ ಸುರಕ್ಷತೆಯ ಬಗ್ಗೆ ಈಗ ಜಾಗತಿಕ ಮಟ್ಟದಲ್ಲಿ ಪ್ರಶ್ನೆಗಳು ಎದ್ದಿವೆ. ಇತ್ತೀಚೆಗಷ್ಟೇ ಭಾರತದದ ಟಿಸಿಎಸ್​ ಕಂಪನಿಯಲ್ಲೂ ಕೂಡ ಇಂಥದ್ದೇ ಪ್ರರಕಣ ದಾಖಲಾಗಿತ್ತು. ಹಲವು ಜನರನ್ನು ಮತಾಂತರಗೊಳಿಸಲು ಪ್ರಯತ್ನಿಸಿದ್ದರು, ಇನ್ನೊಂದಷ್ಟು ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us