AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jupiter Planet: 70 ವರ್ಷಗಳ ನಂತರ ಭೂಮಿಗೆ ಸಮೀಪಿಸುತ್ತಿರುವ ಅತ್ಯಂತ ದೊಡ್ಡ ಗ್ರಹ ಗುರು

ಸೌರವ್ಯೂಹದಲ್ಲಿ ನಡೆಯುವ ಮತ್ತೊಂದು ಅದ್ಭುತವನ್ನು ಕಾಣಲು ಸಜ್ಜಾಗಿದೆ. ಏಕೆಂದರೆ ಸೆ.21ರಂದು ಸೌರವ್ಯೂಹದ ಅತಿದೊಡ್ಡ ಗ್ರಹವಾದ ಗುರು 70 ವರ್ಷಗಳ ನಂತರ ಭೂಮಿಗೆ ಹತ್ತಿರ ಬರಲಿದೆ.

Jupiter Planet: 70 ವರ್ಷಗಳ ನಂತರ ಭೂಮಿಗೆ ಸಮೀಪಿಸುತ್ತಿರುವ ಅತ್ಯಂತ ದೊಡ್ಡ ಗ್ರಹ ಗುರು
70 ವರ್ಷಗಳ ನಂತರ ಭೂಮಿಗೆ ಸಮೀಪಿಸುತ್ತಿರುವ ಅತ್ಯಂತ ದೊಡ್ಡ ಗ್ರಹ ಗುರು (ಸಾಂದರ್ಭಿಕ ಚಿತ್ರ)Image Credit source: NASA
TV9 Web
| Updated By: Rakesh Nayak Manchi|

Updated on: Sep 19, 2022 | 12:40 PM

Share

ಸೌರವ್ಯೂಹದಲ್ಲಿ ನಡೆಯುವ ಮತ್ತೊಂದು ಅದ್ಭುತವನ್ನು ಜನರು ನೋಡಬಹುದಾಗಿದೆ. ಸೌರವ್ಯೂಹದ ಅತಿದೊಡ್ಡ ಗ್ರಹವಾದ ಗುರು (Jupiter Planet) 70 ವರ್ಷಗಳ ನಂತರ ಭೂಮಿಗೆ ಹತ್ತಿರ ಬರಲಿದೆ. ಸೆಪ್ಟೆಂಬರ್ 26 ರಂದು ರಾತ್ರಿ ಭೂಮಿಗೆ ಸಮೀಪವಾಗಲಿದೆ ಎಂದು ನಾಸಾ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. ಭೂಮಿಯ ಮೇಲ್ಮೈಯಿಂದ ನೋಡಿದರೆ, ಯಾವುದೇ ಆಕಾಶ ವಸ್ತು ಅಥವಾ ಯಾವುದೇ ಗ್ರಹವು ಪೂರ್ವದಲ್ಲಿ ಉದಯಿಸಿದಾಗ ವಿರುದ್ಧ ದಿಕ್ಕಿನಲ್ಲಿ ಬರುತ್ತದೆ ಎಂದು ನಾಸಾ ಹೇಳುತ್ತದೆ. ಇಂತಹ ಸಂದರ್ಭದಲ್ಲಿ ಪೂರ್ವದಲ್ಲಿ ಬಂದ ಯಾವುದೇ ಆಕಾಶ ವಸ್ತು ಅಥವಾ ಗ್ರಹವು ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಕಾಣಿಸಿಕೊಳ್ಳುತ್ತದೆ.

ಅದೇ ರೀತಿ, ಗುರುಗ್ರಹ ಪ್ರತಿ 13 ತಿಂಗಳಿಗೊಮ್ಮೆ ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಬರುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ ಗ್ರಹವು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣುತ್ತದೆ. ಆದರೆ, ಈ ಬಾರಿಯ ಘಟನೆ ವಿಭಿನ್ನವಾಗಿದೆ. ಏಕೆಂದರೆ ಗುರುವು ವಿರುದ್ಧ ದಿಕ್ಕಿನಲ್ಲಿ ಮಾತ್ರವಲ್ಲದೆ ಅದು ಭೂಮಿಗೆ ಹತ್ತಿರದಲ್ಲಿರಲಿದೆ. ಇದು 70 ವರ್ಷಗಳ ನಂತರ ಸಂಭವಿಸುತ್ತಿದೆ.

ಇದಲ್ಲದೆ, ಗುರುವು ವಿರುದ್ಧ ದಿಕ್ಕಿನಲ್ಲಿರುವುದರಿಂದ ಮತ್ತು ಭೂಮಿಗೆ ಹತ್ತಿರವಾಗಿರುವುದರಿಂದ ಎರಡೂ ಘಟನೆಗಳು ಏಕಕಾಲದಲ್ಲಿ ಸಂಭವಿಸುವುದಿಲ್ಲ ಎಂದು ಹೇಳಲಾಗಿದೆ. ಏಕೆಂದರೆ ಭೂಮಿ ಮತ್ತು ಗುರು ಎರಡೂ ಗ್ರಹಗಳು ಅಂತಹ ಕಕ್ಷೆಯಲ್ಲಿ ಸುತ್ತುತ್ತವೆ. ಇದರರ್ಥ ವರ್ಷವಿಡೀ ಈ ಎರಡು ಗ್ರಹಗಳು ಪರಸ್ಪರ ವಿಭಿನ್ನ ದೂರದಲ್ಲಿ ಹಾದು ಹೋಗುತ್ತವೆ. ಈ ಬಾರಿ ಸಂಭವಿಸಲಿರುವ ಘಟನೆ ಗುರುವು ಭೂಮಿಗೆ ಸಮೀಪಿಸಲಿದೆ. ಆ ಸಮಯದಲ್ಲಿ ಭೂಮಿ ಮತ್ತು ಗುರುಗಳ ನಡುವಿನ ಅಂತರವು 365 ಮಿಲಿಯನ್ ಮೈಲುಗಳು ಅಂದರೆ ಸುಮಾರು 587 ಮಿಲಿಯನ್ ಕಿ.ಮೀ. ಆಗಿರುತ್ತದೆ. ಇವೆರಡರ ನಡುವಿನ ಗರಿಷ್ಠ ಅಂತರವನ್ನು ನೋಡಿದರೆ ಅದು ಭೂಮಿಯಿಂದ ಸುಮಾರು 965 ಮಿಲಿಯನ್ ಕಿ.ಮೀ. ದೂರದಲ್ಲಿ ಹಾದುಹೋಗುತ್ತದೆ.

ಗುರುಗ್ರಹದಲ್ಲಿ 53 ಚಂದ್ರಗಳಿವೆ ಎಂದು ಹೇಳಲಾಗುತ್ತದೆ, ಆದರೆ ವಿಜ್ಞಾನಿಗಳು ಒಟ್ಟು 79 ಚಂದ್ರಗಳನ್ನು ಕಂಡುಹಿಡಿಯಲಾಗಿದೆ ಎಂದು ನಂಬುತ್ತಾರೆ. ಇದರ ಅತಿ ದೊಡ್ಡ ನಾಲ್ಕು ಉಪಗ್ರಹಗಳಾದ ಅಯೋ, ಯುರೋಪಾ, ಗ್ಯಾನಿಮೀಡ್ ಮತ್ತು ಕ್ಯಾಲಿಸ್ಟೊಗಳನ್ನು ಗೆಲಿಲಿಯನ್ ಉಪಗ್ರಹಗಳು ಎಂದು ಕರೆಯಲಾಗುತ್ತದೆ. ಗೆಲಿಲಿಯೋ ಗೆಲಿಲಿ 1610 ರಲ್ಲಿ ಮೊದಲು ಅವುಗಳನ್ನು ವೀಕ್ಷಿಸಿದ್ದರು. ಅಂದಿನಿಂದ ಅವುಗಳನ್ನು ಗೆಲಿಲಿಯನ್ ಉಪಗ್ರಹಗಳು ಎಂದು ಕರೆಯಲಾಗುತ್ತದೆ. ಗುರುಗ್ರಹದ ಬಗ್ಗೆ ಅಧ್ಯಯನ ಮಾಡುವ ಮೂಲಕ ಸೌರವ್ಯೂಹದ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ಮಾಡಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ