ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಜೊತೆಗೆ ಜೋರಾಗೇ ಕೇಳಿ ಬರುತ್ತಿರುವ ಹೆಸರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರದು. ಕಮಲಾ ಭಾರತೀಯ ಮೂಲದವರು, ಅವರ ತಾಯಿ ಶ್ಯಾಮಲಾ ಗೋಪಾಲನ್ ತಮಿಳುನಾಡಿನವರು ಎಂಬುದು ಹಲವರು ತಿಳಿದಿರಬಹುದಾದ ವಿಚಾರ. ಕಮಲಾ ಕುರಿತು ಭಾರತೀಯರು ತಿಳಿದುಕೊಳ್ಳಬೇಕಾದ ಮತ್ತಷ್ಟು ವಿಷಯಗಳಿವೆ. ಅದರಲ್ಲಿ ಪ್ರಮುಖವಾದದ್ದು ಕಮಲಾ ತಾತ ಪಿ.ವಿ. ಗೋಪಾಲನ್ ಅವರು ಭಾರತಕ್ಕೆ ಸೇವೆ ಸಲ್ಲಿಸಿರುವ ವಿಚಾರಗಳು.
ಕಮಲಾ ಹ್ಯಾರಿಸ್ ತಾತ ಪೈಂಗನಾಡು ವೆಂಕಟರಮಣ್ ಗೋಪಾಲನ್ ಅವರು 1911ರಲ್ಲಿ ಬ್ರಿಟೀಷ್ ಭಾರತದ, ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಜನಿಸಿದರು. ಬ್ರಿಟೀಷ್ ಆಳ್ವಿಕೆಯ ಸಂದರ್ಭ ಇಂಪೀರಿಯಲ್ ಸೆಕ್ರೆಟರಿಯೆಟ್ ಸರ್ವೀಸ್ ನಲ್ಲಿ ಸೇವೆ ಸಲ್ಲಿಸಿದ ಬಳಿಕ ಸೆಂಟ್ರಲ್ ಸೆಕ್ರೆಟರಿಯೆಟ್ ಸರ್ವೀಸ್ ನಲ್ಲಿ ತೊಡಗಿಸಿಕೊಂಡಿದ್ದ ಅವರು, 1950ರಲ್ಲಿ ಭಾರತ ಸರ್ಕಾರದ ಭೂ ಸಾರಿಗೆ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದರು.
ಈಗ ಅಮೆರಿಕದ ಉಪಾಧ್ಯಕ್ಷೆಯಾಗಲಿರುವ ಕಮಲಾ ಹ್ಯಾರಿಸ್, ಇದೇ ಪಿ.ವಿ. ಗೋಪಾಲನ್ ಅವರ ಹಿರಿಯ ಪುತ್ರಿ ಶ್ಯಾಮಲಾ ಗೋಪಾಲನ್ ಮಗಳು. ಈ ಹಿನ್ನೆಲೆಯಲ್ಲಿ ತವರಿನ ನಂಟು ಕಮಲಾಗೆ ಇರುವುದು ಭಾರತಕ್ಕೆ ಧನಾತ್ಮಕ ಅಂಶವಾಗಿ ಕಾಣಿಸಿಕೊಂಡಿದೆ.
ಬಾಲ್ಯದಲ್ಲಿ ಹಿಂದೂ ದೇವಾಲಯಕ್ಕೂ ಹೋಗುತ್ತಿದ್ದರಂತೆ ಕಮಲಾ ಹ್ಯಾರಿಸ್!