ರಷ್ಯಾ ಹಾಗೂ ಉಕ್ರೇನ್ ಬಿಕ್ಕಟ್ಟು (Russia Ukraine Conflict) ಮುಂದುವರೆದಿರುವಂತೆಯೇ ಉಕ್ರೇನಿಯನ್ನರು ವಿವಿಧ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಪ್ರಸ್ತುತ ಯುರೇಪಿಯನ್ ಒಕ್ಕೂಟದ ಭಾಗವಾಗಿರುವ ಉಕ್ರೇನ್ಗೆ ಹಲವು ದೇಶಗಳು ಆಶ್ರಯ ನೀಡಿವೆ. ಅರ್ಥಾತ್ ತಾತ್ಕಾಲಿಕವಾಗಿ ಉಕ್ರೇನ್ ಪ್ರಜೆಗಳಿಗೆ ತಮ್ಮ ದೇಶಗಳಿಗೆ ಪ್ರವೇಶ ಕಲ್ಪಿಸಿವೆ. ಈ ಬೆಳವಣಿಗೆಗಳಲ್ಲಿ ಮೊದಲಿನಿಂದಲೂ ಅಮೇರಿಕಾ ಉಕ್ರೇನ್ ರ ನಿಂತಿದೆ. ನೇರವಾಗಿ ಯುದ್ಧದಲ್ಲಿ ಪಾಲ್ಗೊಳ್ಳದೇ, ಉಕ್ರೇನ್ಗೆ ಬೇಕಾದ ಸಹಾಯಗಳನ್ನು ಅಮೇರಿಕಾ ನೀಡುತ್ತಿದೆ. ಆದರೆ ಇದೀಗ ಅಮೇರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಸಂವಾದವೊಂದರಲ್ಲಿ ಉತ್ತರಿಸಿದ ರೀತಿ ತೀವ್ರ ಟೀಕೆಗೆ ಗುರಿಯಾಗಿದೆ. ಉಕ್ರೇನ್ ನಿರಾಶ್ರಿತರನ್ನು ಅಮೇರಿಕಾ ತನ್ನ ದೇಶಕ್ಕೆ ಸೇರಿಸಿಕೊಳ್ಳುತ್ತದೆಯೇ ಎಂಬ ಪ್ರಶ್ನೆಯನ್ನು ಕಮಲಾ ಹ್ಯಾರಿಸ್ಗೆ ಕೇಳಲಾಗಿತ್ತು. ಇದಕ್ಕೆ ಕಮಲಾ ಹ್ಯಾರಿಸ್ ನಕ್ಕಿದ್ದಾರೆ. ಉನ್ನತ ಸ್ಥಾನದಲ್ಲಿರುವ ಅವರ ಪ್ರತಿಕ್ರಿಯೆ ಅಸೂಕ್ಷ್ಮವಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದು, ಸಾಮಾಜಿಕ ಜಾಳತಾಣಗಳಲ್ಲಿ ಕಮಲಾ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ವಾರ್ಸಾದಲ್ಲಿ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪೋಲಿಷ್ ಅಧ್ಯಕ್ಷ ಆಂಡ್ರೆಜ್ ದುಡಾ ಅವರೊಂದಿಗೆ ಕಮಲಾ ಹ್ಯಾರಿಸ್ ವೇದಿಕೆ ಹಂಚಿಕೊಂಡಿದ್ದರು. ಅದರಲ್ಲಿ ಅವರು ಪೂರ್ವ ಮಿತ್ರರಾಷ್ಟ್ರಗಳಿಗೆ ನ್ಯಾಟೋ ಹಾಗೂ ಯುಎಸ್ ಬೆಂಬಲದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ‘ಉಕ್ರೇನ್ ನಿರಾಶ್ರಿತರಿಗೆ ಅಮೇರಿಕಾ ಆಶ್ರಯ ನೀಡಲಿದೆಯೇ?’ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದರು. ಅಲ್ಲದೇ ಮುಂದುವರೆದು, ಪೋಲಿಷ್ ಅಧ್ಯಕ್ಷರಿಗೆ ಈ ಕುರಿತು ನೀವು ಅಮೇರಿಕಾಗೆ ನಿರಾಶ್ರಿತರನ್ನು ಸ್ವೀಕರಿಸುವಂತೆ ಹೇಳಿದ್ದೀರಾ ಎಂದು ಪತ್ರಕರ್ತರು ಕೇಳಿದರು.
ಈ ಪ್ರಶ್ನೆಗಳಿಗೆ ಉತ್ತರಿಸುವ ಮುನ್ನ ಈರ್ವರು ನಾಯಕರು ಜೋರಾಗಿ ನಕ್ಕಿದ್ದಾರೆ. ನಂತರ ಕಮಲಾ ಹ್ಯಾರಿಸ್ ‘‘ಅಗತ್ಯವಿರುವ ಸ್ನೇಹಿತ, ನಿಜವಾಗಿಯೂ ಸ್ನೇಹಿತ’ ಎಂದು ಉತ್ತರಿಸಿದ್ದಾರೆ. ಪೋಲಿಷ್ ಅಧ್ಯಕ್ಷರು ನಂತರ ಮಾತನಾಡಿ, ಈ ಕುರಿತು ಕಮಲಾ ಹ್ಯಾರಿಸ್ ಅವರೊಂದಿಗೆ ಚರ್ಚಿಸಿದ್ದಾಗಿ ತಿಳಿಸಿದ್ದಾರೆ.
ಕಮಲಾ ಹ್ಯಾರಿಸ್ ಮಾತುಕತೆಯ ವಿಡಿಯೋ:
ಟೀಕೆಗೆ ಗುರಿಯಾದ ಕಮಲಾ ಹ್ಯಾರಿಸ್ ವಿಚಿತ್ರ ನಗು:
ನಾಯಕರು ಪತ್ರಕರ್ತರ ಪ್ರಶ್ನೆಗೆ ನೀಡಿದ ಉತ್ತರಕ್ಕಿಂತ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಈರ್ವರ ಮೊದಲ ಪ್ರತಿಕ್ರಿಯೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಸಂವೇದನಾ ರಹಿತ ನಗುವಿಗಾಗಿ ಕಮಲಾ ಹ್ಯಾರಿಸ್ ಟೀಕೆಗೆ ಗುರಿಯಾಗಿದ್ದಾರೆ. ನೆಟ್ಟಿಗರೋರ್ವರು ಈ ಕುರಿತು ಪ್ರತಿಕ್ರಿಯಿಸಿ, ಜಾಗತಿಕ ಮಟ್ಟದ ಚರ್ಚೆಯ ಸಭೆಗೆ ತಯಾರಿಯಿಲ್ಲದೇ ಕಮಲಾ ಹ್ಯಾರಿಸ್ ಭಾಗವಹಿಸಿದ್ದಾರೆ. ಇದು ಎಚ್ಚರಿಕೆಯ ಕರೆಗಂಟೆ ಎಂದಿದ್ದಾರೆ. ಮತ್ತೋರ್ವರು ಕಮಲಾ ಹ್ಯಾರಿಸ್ ತಮ್ಮ ಹಿಂದಿನ ನಡವಳಿಕೆ ಮುಂದುವರೆಸಿದ್ದಾರೆ ಎಂದು ಟೀಕಿಸಿದ್ದಾರೆ. ಇದು ತಮಾಷೆಯ ವಿಷಯ ಅಲ್ಲವೇ ಎಲ್ಲ ಎಂದು ಮತ್ತೋರ್ವರು ಬರೆದಿದ್ದಾರೆ. ಮತ್ತಷ್ಟು ಜನರು ಕಮಲಾ ಹ್ಯಾರಿಸ್ ಈ ಹಿಂದೆ ಯೂ ಇದೇ ಮಾದರಿಯಲ್ಲಿ ಉತ್ತರ ನೀಡಿದ್ದನ್ನು ಉಲ್ಲೇಖಿಸಿ, ಎಂದಿನಂತೆ ಅವರು ಉತ್ತರಿಸುವ ಬದಲು ನಕ್ಕಿದ್ದಾರೆ ಎಂದಿದ್ದಾರೆ.
ನೆಟ್ಟಿಗರ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ:
Kamala Harris has been very consistent during her live remarks with Poland’s leader. She is awkwardly laughing. Again.
— George Papadopoulos (@GeorgePapa19) March 10, 2022
Kamala Harris’ lack of preparation for high-level discussions is alarming. https://t.co/BXx3yQOixQ
— Dan K. Eberhart (@DanKEberhart) March 10, 2022
Nothing about any of this is funny. https://t.co/2AFDgQFTLo
— Janice Dean (@JaniceDean) March 10, 2022
Because our politicians have no idea what they are doing in Europe right now.
She looked to him so she could avoid answering a question that she can’t answer. As always. https://t.co/F6VWxOG8bc
— Celine Boumitry (@CBoumitry) March 11, 2022
[huh? Laughing? I suppose it is a nervous laugh…but really..] Kamala Harris Laughs When Asked About Ukrainian Refugee Crisis https://t.co/9Mpti3WWjU via @YouTube
— Greta Van Susteren (@greta) March 10, 2022
There’s some context missing here. 15 minutes before this clip, the Poland pres used the “friend in need is a friend indeed” line, causing everyone to chuckle. VP Harris’s comment was a callback to that. You can still argue she should’ve been more somber, but that’s the context. https://t.co/0cCIGKnWF4 pic.twitter.com/BI0CfhslI9
— Aaron Rupar (@atrupar) March 10, 2022
Only Kamala Harris would find it appropriate to laugh when talking about the topic of Ukrainian Refugees.
— Benny (@bennyjohnson) March 10, 2022
ಇದನ್ನೂ ಓದಿ:
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಜೈವಿಕ ಆಸ್ತ್ರ ಬಳಕೆ ಆತಂಕ: ನಿಲುವು ಪ್ರಕಟಿಸಿದ ಭಾರತ