AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆ ಔಷಧಿ ಆರ್ಡರ್ ಮಾಡಿದ್ರೆ ಬಾಕ್ಸ್​​ನಲ್ಲಿ ಬಂದಿದ್ದು ಮಾನವನ ದೇಹದ ಅಂಗಗಳು

ಔಷಧಿಗೆಂದು ಕಾಯುತ್ತಿದ್ದ ಮಹಿಳೆ ಬಾಕ್ಸ್​ ನೋಡಿ ಹೌಹಾರಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಮಹಿಳೆ ಔಷಧಿಗಳನ್ನು ಆರ್ಡರ್ ಮಾಡಿದ್ದರು. ಮನೆಗೆ ಬಾಕ್ಸ್ ಬಂದ ಕೂಡಲೇ ತೆರೆದು ನೋಡಿದಾಗ ಅದರಲ್ಲಿ ಔಷಧಿಗಳಲ್ಲ ಬದಲಾಗಿ ಮನುಷ್ಯದ ದೇಹದ ಭಾಗಗಳಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಅದರಲ್ಲಿ ಮನುಷ್ಯನ ತೋಳುಗಳು ಹಾಗೂ ಬೆರಳುಗಳನ್ನು ಐಸ್​​ ಜತೆಗೆ ಇಟ್ಟಿರುವುದು ಕಂಡುಬಂದಿದೆ.

ಮಹಿಳೆ ಔಷಧಿ ಆರ್ಡರ್ ಮಾಡಿದ್ರೆ ಬಾಕ್ಸ್​​ನಲ್ಲಿ ಬಂದಿದ್ದು ಮಾನವನ ದೇಹದ ಅಂಗಗಳು
ಪಾರ್ಸೆಲ್
ನಯನಾ ರಾಜೀವ್
|

Updated on: Nov 04, 2025 | 1:23 PM

Share

ವಾಷಿಂಗ್ಟನ್, ನವೆಂಬರ್ 04: ಔಷಧಿಗೆಂದು ಕಾಯುತ್ತಿದ್ದ ಮಹಿಳೆ ಬಾಕ್ಸ್ನೋಡಿ ಹೌಹಾರಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಮಹಿಳೆ ಔಷಧಿಗಳನ್ನು ಆರ್ಡರ್ ಮಾಡಿದ್ದರು. ಮನೆಗೆ ಬಾಕ್ಸ್ ಬಂದ ಕೂಡಲೇ ತೆರೆದು ನೋಡಿದಾಗ ಅದರಲ್ಲಿ ಔಷಧಿಗಳಲ್ಲ ಬದಲಾಗಿ ಮನುಷ್ಯದ ದೇಹದ ಅಂಗಗಳಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ

ಅದರಲ್ಲಿ ಮನುಷ್ಯನ ತೋಳುಗಳು ಹಾಗೂ ಬೆರಳುಗಳನ್ನು ಐಸ್​​ ಜತೆಗೆ ಇಟ್ಟಿರುವುದು ಕಂಡುಬಂದಿದೆ. ಕೆಂಟುಕಿಯ ಹಾಪ್ಕಿನ್ಸ್‌ವಿಲ್ಲೆಯಲ್ಲಿರುವ ತನ್ನ ಮನೆಯಲ್ಲಿ ಬುಧವಾರ ಪಾರ್ಸೆಲ್ ಪಡೆದ ನಂತರ, ಪೊಲೀಸರಿಗೆ ಕರೆ ಮಾಡಿದ್ದಾರೆ. ನಾವು ತುರ್ತು ಔಷಧಿಗಳನ್ನು ನಿರೀಕ್ಷಿಸುತ್ತಿದ್ದೆವು ಅವರು ಎರಡು ಬಾಕ್ಸ್ಗಳನ್ನು ನೀಡಿದ್ದರು.

ಒಂದು ಪೆಟ್ಟಿಗೆಯಲ್ಲಿ ಕಸಿಗೆ ಬೇಕಾದ ಮಾನವ ದೇಹದ ಬಿಡಿ ಭಾಗಗಳಿದ್ದವು. ಅದು ಎಲ್ಲಿಗೆ ಹೋಗಬೇಕಿತ್ತು ಎಂಬ ಅರಿವಿಲ್ಲ.ಕ್ರಿಶ್ಚಿಯನ್ ಕೌಂಟಿ ಕರೋನರ್ ಸ್ಕಾಟ್ ಡೇನಿಯಲ್ ಸ್ಥಳಕ್ಕೆ ಬಂದು ಅವಶೇಷಗಳನ್ನು ವಶಪಡಿಸಿಕೊಂಡರು. ಡೇನಿಯಲ್ ಆ ಪ್ಯಾಕೇಜ್ ಅನ್ನು ಸ್ಥಳೀಯ ಶವಾಗಾರಕ್ಕೆ ತೆಗೆದುಕೊಂಡು ಹೋದರು, ಅಲ್ಲಿ ಮರುದಿನ ಬೆಳಗ್ಗೆ ಕೊರಿಯರ್ ಮೂಲಕ ಅದನ್ನು ಮರಳಿ ಪಡೆಯಲಾಯಿತು.

ಮತ್ತಷ್ಟು ಓದಿ:  ಮೆದುಳು ಮಾತ್ರವಲ್ಲ ದೇಹದ ಬೇರೆ ಭಾಗಗಳೂ ನೆನಪುಗಳನ್ನು ಸಂಗ್ರಹಿಸುತ್ತವೆ: ಹೊಸ ಸಂಶೋಧನೆ

ದೇಹದ ಭಾಗಗಳು ನಾಲ್ಕು ವಿಭಿನ್ನ ದಾನಿಗಳಿಂದ ಬಂದಿದ್ದವು. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸಿದ್ದಕ್ಕಾಗಿ ಡೇನಿಯಲ್ ಆ ಮಹಿಳೆಯನ್ನು ಹೊಗಳಿದ್ದಾರೆ.

ಅಧಿಕಾರಿಗಳನ್ನು ಕರೆಯುವ ಮೂಲಕ ಸರಿಯಾದ ಕೆಲಸ ಮಾಡಿದ್ದಾರೆಂದು ಹೇಳಿದ್ದಾರೆ. ಯಾರದ್ದೋ ಶಸ್ತ್ರಚಿಕಿತ್ಸೆಗೆಂದು ಕಳುಹಿಸಲಾಗಿದ್ದ ದೇಹದ ಅಂಗಾಂಗಗಳು ಮಹಿಳೆಗೆ ತಲುಪಿದ್ದವು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Daily Devotional: ವಿವಿಧ ರೀತಿಯ ಲಿಂಗಗಳ ಪೂಜೆಯ ಫಲ ಹೇಗಿರುತ್ತೆ
Daily Devotional: ವಿವಿಧ ರೀತಿಯ ಲಿಂಗಗಳ ಪೂಜೆಯ ಫಲ ಹೇಗಿರುತ್ತೆ
ಈ ರಾಶಿಯವರು ಎಲ್ಲವನ್ನು ನಕಾರಾತ್ಮಕವಾಗಿ ನೋಡುವರು
ಈ ರಾಶಿಯವರು ಎಲ್ಲವನ್ನು ನಕಾರಾತ್ಮಕವಾಗಿ ನೋಡುವರು
ದೆಹಲಿ ಕಾರು ಸ್ಫೋಟ ಘಟನೆಗೆ ಪುಲ್ವಾಮಾ ನಂಟು: ಕೃತ್ಯದ ಹಿಂದೆ ಉಗ್ರ ಕೈವಾಡ?
ದೆಹಲಿ ಕಾರು ಸ್ಫೋಟ ಘಟನೆಗೆ ಪುಲ್ವಾಮಾ ನಂಟು: ಕೃತ್ಯದ ಹಿಂದೆ ಉಗ್ರ ಕೈವಾಡ?
ದೆಹಲಿ ನಿಗೂಢ ಸ್ಫೋಟ: ಘಟನೆಗೆ ಕಾರಣವಾದ ಕಾರಿನ ಸ್ಥಿತಿ ಹೇಗಾಗಿದೆ ನೋಡಿ
ದೆಹಲಿ ನಿಗೂಢ ಸ್ಫೋಟ: ಘಟನೆಗೆ ಕಾರಣವಾದ ಕಾರಿನ ಸ್ಥಿತಿ ಹೇಗಾಗಿದೆ ನೋಡಿ
ದೆಹಲಿ ಸ್ಫೋಟ ಬೆನ್ನಲ್ಲೇ ಕರ್ನಾಟಕದಲ್ಲೂ ಹೈಅಲರ್ಟ್​: ಸಿಎಂ ಹೇಳಿದ್ದಿಷ್ಟು
ದೆಹಲಿ ಸ್ಫೋಟ ಬೆನ್ನಲ್ಲೇ ಕರ್ನಾಟಕದಲ್ಲೂ ಹೈಅಲರ್ಟ್​: ಸಿಎಂ ಹೇಳಿದ್ದಿಷ್ಟು
ದೆಹಲಿಯ ಆಸ್ಪತ್ರೆಗೆ ತೆರಳಿ ಸ್ಫೋಟದ ಗಾಯಾಳುಗಳನ್ನು ಭೇಟಿಯಾದ ಅಮಿತ್ ಶಾ
ದೆಹಲಿಯ ಆಸ್ಪತ್ರೆಗೆ ತೆರಳಿ ಸ್ಫೋಟದ ಗಾಯಾಳುಗಳನ್ನು ಭೇಟಿಯಾದ ಅಮಿತ್ ಶಾ
ದೆಹಲಿ ಸ್ಫೋಟ: ಸಾವಿನ ಸಂಖ್ಯೆ 10ಕ್ಕೆ ಏರಿಕೆ, ಓರ್ವ ಶಂಕಿತ ಪೊಲೀಸ್ ವಶಕ್ಕೆ
ದೆಹಲಿ ಸ್ಫೋಟ: ಸಾವಿನ ಸಂಖ್ಯೆ 10ಕ್ಕೆ ಏರಿಕೆ, ಓರ್ವ ಶಂಕಿತ ಪೊಲೀಸ್ ವಶಕ್ಕೆ
ಕೆಂಪುಕೋಟೆ ಬಳಿಯೇ ಸ್ಫೋಟ: ಒಂದೊಂದು ದೃಶ್ಯವೂ ಭಯಾನಕ!
ಕೆಂಪುಕೋಟೆ ಬಳಿಯೇ ಸ್ಫೋಟ: ಒಂದೊಂದು ದೃಶ್ಯವೂ ಭಯಾನಕ!
ಬ್ರ್ಯಾಟ್ ಸಿನಿಮಾ ನೋಡಿ ಸಿಕ್ಕಾಪಟ್ಟೆ ಮೆಚ್ಚಿಕೊಂಡ ರಿಯಲ್ ಸ್ಟಾರ್ ಉಪೇಂದ್ರ
ಬ್ರ್ಯಾಟ್ ಸಿನಿಮಾ ನೋಡಿ ಸಿಕ್ಕಾಪಟ್ಟೆ ಮೆಚ್ಚಿಕೊಂಡ ರಿಯಲ್ ಸ್ಟಾರ್ ಉಪೇಂದ್ರ
ದಿಲ್ಲಿ ಕೆಂಪುಕೋಟೆ ಬಳಿ ಸ್ಫೋಟ: ಕನಿಷ್ಠ 9 ಜನ ಸಾವು, ಎಲ್ಲೆಡೆ ಹೈಅಲರ್ಟ್​
ದಿಲ್ಲಿ ಕೆಂಪುಕೋಟೆ ಬಳಿ ಸ್ಫೋಟ: ಕನಿಷ್ಠ 9 ಜನ ಸಾವು, ಎಲ್ಲೆಡೆ ಹೈಅಲರ್ಟ್​