Key Players: ಕ್ಲೀನ್ ಬೋಲ್ಡ್; ಇಮ್ರಾನ್ ಖಾನ್​ ಪದಚ್ಯುತಿಗೆ ಪ್ಲಾನ್ ಮಾಡಿದ ಪಾಕ್ ರಾಜಕಾರಣಿಗಳಿವರು

ಪಾಕಿಸ್ತಾನದಲ್ಲಿ ಅಧಿಕಾರ ನಡೆಸುತ್ತಿದ್ದ ಪಿಟಿಐ ನೇತೃತ್ವದ ಮೈತ್ರಿಯನ್ನು ಒಡೆಯಲು ವಿರೋಧ ಪಕ್ಷಗಳು ಸಾಕಷ್ಟು ಪ್ರಯತ್ನ ನಡೆಸಿದವು. ಈ ಬೆಳವಣಿಗೆಗಳ ಬೆನ್ನಿಗಿದ್ದು, ಇಮ್ರಾನ್​ ಅಧಿಕಾರ ಚ್ಯುತಿಗೆ ಕಾರಣರಾದ ಪ್ರಮುಖ ವ್ಯಕ್ತಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

Key Players: ಕ್ಲೀನ್ ಬೋಲ್ಡ್; ಇಮ್ರಾನ್ ಖಾನ್​ ಪದಚ್ಯುತಿಗೆ ಪ್ಲಾನ್ ಮಾಡಿದ ಪಾಕ್ ರಾಜಕಾರಣಿಗಳಿವರು
ಪಾಕ್ ಪ್ರಧಾನಿ ಹುದ್ದೆಯ ಆಕಾಂಕ್ಷಿ ಶೆಹಬಾಜ್ ಷರೀಫ್ ಮತ್ತು ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 10, 2022 | 8:06 AM

ಇಸ್ಲಾಮಾಬಾದ್: ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾದ ಪಾಕಿಸ್ತಾನದ (Pakistan Politics) ಪ್ರಧಾನಿ ಇಮ್ರಾನ್ ಖಾನ್ (Ex PM Imran Khan) ಭಾನುವಾರ ನಸುಕಿನಲ್ಲಿ (ಏಪ್ರಿಲ್ 10) ಅಧಿಕಾರ ಕಳೆದುಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಪಾಕಿಸ್ತಾನದಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ಪಾಕಿಸ್ತಾನದ ಆಡಳಿತಾರೂಢ ತೆಹ್ರೀಕ್-ಎ-ಇನ್​ಸಾಫ್ (ಪಿಟಿಐ) ಪಕ್ಷದ ಜೊತೆಗೆ 2018ರಲ್ಲಿ ರೂಪುಗೊಂಡಿದ್ದ ಮೈತ್ರಿಯನ್ನು ಒಡೆಯಲು ವಿರೋಧ ಪಕ್ಷಗಳು ಸಾಕಷ್ಟು ಪ್ರಯತ್ನ ನಡೆಸಿದವು. ಈ ಬೆಳವಣಿಗೆಗಳ ಬೆನ್ನಿಗಿದ್ದು, ಇಮ್ರಾನ್​ ಅಧಿಕಾರ ಚ್ಯುತಿಗೆ ಕಾರಣರಾದ ಪ್ರಮುಖ ವ್ಯಕ್ತಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

  1. ಬಿಗಿ ಆಡಳಿತದ ಶೆಹಬಾಜ್ ಷರೀಫ್ ಪಾಕಿಸ್ತಾನದಲ್ಲಿ ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಸೋದರ ಶೆಹಬಾಜ್ ಷರೀಫ್ ಇದೀಗ ಪಾಕಿಸ್ತಾನದ ಪ್ರಧಾನಿ ಹುದ್ದೆಗೆ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. 70ರ ಹರೆಯದ ಶೆಹಬಾಜ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದವರು. ಉಕ್ಕು ಉದ್ಯಮದ ಒಡೆಯರಾಗಿ ಸಾಕಷ್ಟು ಶ್ರೀಮಂತಿಕೆ ಗಳಿಸಿದವರು. ಪಾಕಿಸ್ತಾನ್ ಮುಸ್ಲಿಂ ಲೀಗ್-ಎನ್ (PML-N) ಅಧ್ಯಕ್ಷರಾಗಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ದಣಿವಿಲ್ಲದೆ ಕೆಲಸ ಮಾಡುವ ಬಿಗಿ ಆಡಳಿತಗಾರ ಎಂದು ಹೆಸರುವಾಸಿಯಾಗಿದ್ದಾರೆ. ಲಂಡನ್ ಮತ್ತು ದುಬೈನಲ್ಲಿ ಐಷಾರಾಮಿ ಬಂಗಲೆ ಹೊಂದಿರುವ ಬಗ್ಗೆ ಹಾಗೂ ಹತ್ತಾರು ಮದುವೆ ಆಗಿರುವ ಬಗ್ಗೆ ಪಾಕಿಸ್ತಾನದ ಪತ್ರಿಕೆಗಳು ಸಾಕಷ್ಟು ಬಾರಿ ಬರೆದಿದ್ದರೂ ಶೆಹಬಾಜ್​ರ ಜನಪ್ರಿಯತೆ ಕಡಿಮೆಯಾಗಿಲ್ಲ. ಅತಿಯಾದ ಭಾವುಕತೆಯಿಂದ ಮಾತನಾಡುವ ಶೆಹಬಾಜ್ ಸಾರ್ವಜನಿಕ ಭಾಷಣಗಳಲ್ಲಿ ಸಂಯಮ ಕಳೆದುಕೊಂಡು ರೇಗಾಡಿದ್ದು ಸಹ ಹಲವು ಬಾರಿ ಸುದ್ದಿಯಾಗಿತ್ತು. ತಮ್ಮ ಭಾಷಣಗಳಲ್ಲಿ ಕ್ರಾಂತಿಕಾರಿ ಗೀತೆಗಳ ಸಾಲುಗಳನ್ನು ಉಲ್ಲೇಖಿಸಿ, ಜನರಿಗೆ ಭಾವನೆಗಳನ್ನು ದಾಟಿಸಲು ಯತ್ನಿಸುವುದು ಇವರು ಜನಪ್ರಿಯರಾಗಲು ಕಾರಣವಾದ ಅಂಶಗಳಲ್ಲಿ ಒಂದು. ಇಮ್ರಾನ್ ಖಾನ್ ಪದಚ್ಯುತಿಯಿಂದ ತೆರವಾಗಿರುವ ಪ್ರಧಾನಿ ಹುದ್ದೆಗೆ ಇವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
  2. ‘ಮಿಸ್ಟರ್ ಟೆನ್ ಪರ್ಸೆಂಟ್’ ಆಸಿಫ್ ಅಲಿ ಝರ್ದಾರಿ ಸಿಂಧ್ ಪ್ರಾಂತ್ಯದ ಶ್ರೀಮಂತ ಕುಟುಂಬದಿಂದ ಬಂದಿರುವ ಆಸಿಫ್ ಅಲಿ ಝರ್ದಾರಿ, ಬಿಂದಾಸ್ ಬದುಕಿಗೆ ಹೆಸರಾದವರು. ಪ್ರಧಾನಿಯಾಗುವ ಕೆಲವೇ ದಿನಗಳ ಮೊದಲು ಬೆನಜಿರ್ ಭುಟ್ಟೊ ಇವರನ್ನು ಮದುವೆಯಾಗಿದ್ದರು. ಬುಟ್ಟೊ ಅವರನ್ನು ಮದುವೆಯಾದ ನಂತರ ಆಸಿಫ್ ಅಲಿ ಝರ್ದಾರಿ ಸದಾ ಸುದ್ದಿಯಲ್ಲಿ ಇರುತ್ತಿದ್ದರು. ‘ಮಿಸ್ಟರ್ ಟೆನ್ ಪರ್ಸೆಂಟ್’ ಎನ್ನುವ ಅಡ್ಡ ಹೆಸರು ಇವರಿಗಿತ್ತು. ಸರ್ಕಾರದ ಗುತ್ತಿಗೆಗಳನ್ನು ವಹಿಸಿಕೊಡುವಾಗ 10 ಪರ್ಸೆಂಟ್ ಕಿಕ್​ಬ್ಯಾಕ್ ಪಡೆಯುತ್ತಿದ್ದರು ಎಂದು ಮಾಧ್ಯಮಗಳು ಹಲವು ಬಾರಿ ವರದಿ ಮಾಡಿದ್ದವು. ಭ್ರಷ್ಟಾಚಾರ, ಮಾದಕದ್ರವ್ಯ ಕಳ್ಳಸಾಗಣೆ ಮತ್ತು ಕೊಲೆ ಆರೋಪದ ಮೇಲೆ ಎರಡು ಬಾರಿ ಜೈಲಿಗೆ ಹೋಗಿದ್ದರು. 2007ರಲ್ಲಿ ಬೆನಜಿರ್ ಬುಟ್ಟೊ ಹತ್ಯೆಯ ನಂತರ ಝರ್ದಾರಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷರಾದರು. ಪಿಎಂಎಲ್-ಎನ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಾಕಿಸ್ತಾನದ ಅಧ್ಯಕ್ಷರೂ ಆಗಿದ್ದರು.
  3. ‘ಯುವಜನರ ಕಣ್ಮಣಿ’ ಬಿಲಾವಲ್ ಭುಟ್ಟೊ ಝರ್ದಾರಿ ಬೆನಜಿರ್ ಭುಟ್ಟೊ ಮತ್ತು ಆಸಿಫ್ ಝರ್ದಾರಿ ಮಗ ಬಿಲಾವಲ್ ಭುಟ್ಟೊಗೆ ಪ್ರಭಾವಿ ರಾಜಕಾರಿಣಿಗಳ ಕುಟುಂಬದ ಉತ್ತರಾಧಿಕಾರಿಯಾಗಿಯೇ ಜನಿಸಿದವರು. ಕೇವಲ 19ರ ಹರೆಯಲ್ಲಿದ್ದಾಗ ತಾಯಿ ಬೆನಜಿರ್​ರ ಕೊಲೆ ನಡೆಯಿತು. ಅದಾದ ತಕ್ಷಣ ಬಿಲಾವಲ್ ಪಿಪಿಪಿ ಪಕ್ಷದ ಅಧ್ಯಕ್ಷರಾದರು. ಇದೀಗ 33ರ ಹರೆಯದಲ್ಲಿರುವ ಬಿಲಾವಲ್, ಆಕ್ಸ್​ಫರ್ಡ್​ನಲ್ಲಿ ಶಿಕ್ಷಣ ಪಡೆದವರು. ತನ್ನ ತಂದೆಯ ಮೇಲಿರುವ ಕಳಂಕಗಳು ತಮ್ಮನ್ನು ತಾಕದಂತೆ ಎಚ್ಚರದಿಂದ ಜೀವನ ಸಾಗಿಸಿದವರು. ಅದೇ ಹೊತ್ತಿಗೆ ತಮ್ಮ ತಾಯಿ ಬೆನಜಿರ್​ಗೆ ಇದ್ದ ಸುಧಾರಣಾವಾದಿ ಎನ್ನುವ ಚಹರೆ ತಮ್ಮ ಮೇಲೆಯೂ ಆವರಿಸುವಂತೆ ಜಾಣತನದ ನಡೆ ನಿರ್ವಹಿಸಿದವರು. ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಸದ್ಯ ಪಾಕಿಸ್ತಾನದ ಅರ್ಧದಷ್ಟು ಜನರು 22 ವರ್ಷಕ್ಕೂ ಕಡಿಮೆ ವಯಸ್ಸಿನವರು. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಭುಟ್ಟೊ ಯುವಜನರ ನಡುವೆ ಜನಪ್ರಿಯ ನಾಯಕ. ಪಾಕಿಸ್ತಾನದ ರಾಷ್ಟ್ರೀಯ ಭಾಷೆ ಉರ್ದುವಿನಲ್ಲಿಯೂ ಬಿಲಾವಲ್​ಗೆ ಉತ್ತಮ ಹಿಡಿತವಿದೆ.
  4. ಮೌಲಾನಾ ಫಝ್ಲೂರ್ ರೆಹಮಾನ್ ಬೆಂಕಿಯುಗುಳುವ ಇಸ್ಲಾಮ್ ಮೂಲಭೂತವಾದಿ ನಾಯಕ ಎಂದೇ ಹೆಸರಾಗಿದ್ದ ಮೌಲಾನಾ ಫಝ್ಲೂರ್ ರೆಹಮಾನ್ ಇತ್ತೀಚೆಗೆ ಸಾಕಷ್ಟು ಸುಧಾರಿಸಿದ್ದರೆ. ಕಟ್ಟಾ ಸಂಪ್ರದಾಯವಾದಿ ಎನ್ನುವ ಇಮೇಜ್​ನಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಾ ಹಲವು ಸೆಕ್ಯುಲರ್ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಮದರಸಾಗಳಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳನ್ನು ಸಮಾವೇಶಗಳಿಗೆ ಸೆಳೆಯುವ ಶಕ್ತಿಯಿರುವ ಪಾಕಿಸ್ತಾನದ ಏಕೈಕ ಪಕ್ಷವೆನಿಸಿದ ಉಮೇಮಾ-ಎ-ಇಸ್ಲಾಮ್ (ಎಫ್) ಪಕ್ಷದ ನೇತಾರ ಈತ. ಆದರೆ ಈವರೆಗೆ ಎಂದಿಗೂ ಈ ಪಕ್ಷವು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವಷ್ಟು ಸ್ಥಾನಗಳಲ್ಲಿ ಜಯಗಳಿಸಿಲ್ಲ. ಆದರೆ ಪಾಕಿಸ್ತಾನದ ಅಧಿಕಾರ ರಾಜಕಾರಣದಲ್ಲಿ, ಮೈತ್ರಿ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾದಾಗ ಮೌಲಾನಾ ಮುಖ್ಯಪಾತ್ರ ನಿರ್ವಹಿಸುತ್ತಾರೆ. ಇಮ್ರಾನ್​ಗೂ ಫಝ್ಲೂರ್ ರೆಹಮಾನ್​ಗೂ ಎಣ್ಣೆ-ಸೀಗೆಕಾಯಿ ಸಂಬಂಧ. ಬ್ರಿಟನ್ ಜಮಿಮಾ ಗೋಲ್ಡ್​ಸ್ಮಿತ್​ರನ್ನು ಮದುವೆಯಾಗಿದ್ದ ಇಮ್ರಾನ್ ಖಾನ್​ರನ್ನು ‘ಯಹೂದಿ’ ಎಂದು ಕರೆದು ವಿವಾದ ಸೃಷ್ಟಿಸಿದ್ದರು. ಇದಕ್ಕೆ ತಿರುಗೇಟು ನೀಡುವ ಭರದಲ್ಲಿ ಮೌಲಾನಾರನ್ನು ‘ಮುಲ್ಲಾ ಡೀಸೆಲ್’ ಎಂದು ಇಮ್ರಾನ್ ಖಾನ್ ಜರಿದಿದ್ದರು. ಪಾಕಿಸ್ತಾನದಲ್ಲಿ ಪೆಟ್ರೋಲ್ ಬಂಕ್ ಲೈಸೆನ್ಸ್​ ಹಗರಣದಲ್ಲಿ ಮೌಲಾನಾ ಹೆಸರು ಕೇಳಿಬಂದಿತ್ತು.

ಇದನ್ನೂ ಓದಿ: Imran Khan: ವಿಶ್ವಾಸಮತ ಸಾಬೀತುಪಡಿಸಲು ಇಮ್ರಾನ್ ಖಾನ್ ವಿಫಲ: ಪ್ರಧಾನಿ ಹುದ್ದೆಯಿಂದ ವಜಾ

ಇದನ್ನೂ ಓದಿ: 45 ನಿಮಿಷಗಳ ಭಾಷಣದಲ್ಲಿ ‘ನಾನು, ನನಗೆ ನನ್ನ’ ಎಂದು 213 ಬಾರಿ ಹೇಳಿದ ಇಮ್ರಾನ್ ಖಾನ್; ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್

Published On - 8:05 am, Sun, 10 April 22

ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ