
ಸಿಯೋಲ್: ಅಮೆರಿಕಾ ಜೊತೆಗಿನ ಶೀತಲಸಮರದ ನಡುವೆಯೇ ಉತ್ತರ ಕೊರಿಯಾ ದೂರಗಾಮಿ ಕ್ರೂಸ್ ಕ್ಷಿಪಣಿಗಳನ್ನು ಪ್ರಯೋಗಾರ್ಥವಾಗಿ ಉಡಾಯಿಸಿದೆ. ಇದರಿಂದ ಉತ್ತರ ಕೊರಿಯಾದ ಸೇನೆಗೆ ಆನೆ ಬಲ ಬಂದಿದೆ ಎಂದು ಆ ರಾಷ್ಟ್ರದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಎದೆಯುಬ್ಬಿಸಿ ಹೇಳಿದ್ದಾರೆ.
ಅಮೆರಿಕಾ ಜೊತೆಗೆ ಅಣ್ವಸ್ತ್ರ ಮತ್ತು ಖಂಡಾಂತರ ಕ್ಷಿಪಣಿಗಳನ್ನು ಉತ್ತರ ಕೊರಿಯಾದ (North Korea) ಸೇನಾ ಬತ್ತಳಿಕೆಯಲ್ಲಿ ತುಂಬಿಸುತ್ತಾ ಬಂದಿರುವ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (Kim Jong Un) ಇತ್ತೀಚೆಗೆ ಸೇನಾ ಚಟುವಟಿಕೆ ವಿಷಯದಲ್ಲಿ ಸ್ವಲ್ಪಮಟ್ಟಿಗೆ ಸೈಲೆಂಟ್ ಮೋಡ್ಗೆ ಹೋಗಿದ್ದರು. ಇದಕ್ಕೆ ಅವರ ಆರೋಗ್ಯವೂ ಕಾರಣವಾಗಿತ್ತು ಎನ್ನಲಾಗಿದೆ.
ಆದರೆ ಈಗ ದಿಢೀರನೆ ಪುಟಿದೆದ್ದಿರುವ ಉತ್ತರ ಕೊರಿಯಾದ ಸೇನೆಯು ಶನಿವಾರ ಮತ್ತು ಭಾನುವಾರದ ನಡುವೆ ನಡೆಸಿರುವ ದೂರಗಾಮಿ ಕ್ರೂಸ್ ಕ್ಷಿಪಣಿಗಳನ್ನು (long-range cruise missiles) ಪರೀಕ್ಷಿಸಿದ್ದು, ಜಗತ್ತಿಗೆ ಸಡ್ಡುಹೊಡೆದಿದೆ. ಈ ದೂರಗಾಮಿ ಕ್ರೂಸ್ ಕ್ಷಿಪಣಿಗಳು 1,500 ಕಿಮೀ ದೂರದ (932 miles) ಶತ್ರು ನೆಲೆಗಳನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡಬಲ್ಲದು ಎಂದು ಕೊರಿಯಾದ ವಾರ್ತಾ ಸಂಸ್ಥೆಗಳು ವರದಿ ಮಾಡಿವೆ.
ಇದನ್ನೂ ಓದಿ:
ಕಿಮ್ ಜಾಂಗ್ ಉನ್ ಆರೋಗ್ಯಕ್ಕೇನಾಯಿತು? ಮತ್ತೊಂದಿಷ್ಟು ಅನುಮಾನ ಹುಟ್ಟಿಸಿದ ಸರ್ವಾಧಿಕಾರಿಯ ತಲೆ
(Kim Jong Un North Korea says it tested long-range cruise missiles amid stalemate with US)
Published On - 8:44 am, Mon, 13 September 21