ಇಂಟರ್ನೆಟ್​​ನಲ್ಲಿ ಸಂಚಲನ ಸೃಷ್ಟಿಸಿರುವ ಕಿಂಗ್ ಚಾರ್ಲ್ಸ್‌ನ ಈ ಅಂಗರಕ್ಷಕ ಯಾರು?

|

Updated on: May 06, 2023 | 7:21 PM

ಅನೇಕರು ಆ ವ್ಯಕ್ತಿಯನ್ನನು ಕಾಲಿನ್ ಫಿರ್ತ್‌ನ ಕಿಂಗ್ಸ್‌ಮನ್‌ನ ಹ್ಯಾರಿ ಹಾರ್ಟ್‌ಗೆ ಹೋಲಿಸಿದ್ದಾರೆ. ಅವನ ಛತ್ರಿಯನ್ನು 'ಗನ್‌ಬ್ರೆಲ್ಲಾ' ಎಂದು ಹೇಳುತ್ತಿದ್ದಾರೆ.

ಇಂಟರ್ನೆಟ್​​ನಲ್ಲಿ ಸಂಚಲನ ಸೃಷ್ಟಿಸಿರುವ ಕಿಂಗ್ ಚಾರ್ಲ್ಸ್‌ನ ಈ ಅಂಗರಕ್ಷಕ ಯಾರು?
ಕಿಂಗ್ ಚಾರ್ಲ್ಸ್ ಬಾಡಿಗಾರ್ಡ್
Follow us on

ಏಳು ದಶಕಗಳಲ್ಲಿ ವಿಧ್ಯುಕ್ತ ಸಮಾರಂಭದಲ್ಲಿ ಕಿಂಗ್ ಚಾರ್ಲ್ಸ್ III(King Charles III )ಇಂದು ಬ್ರಿಟನ್ ರಾಜನಾಗಿ ಪಟ್ಟಾಭಿಷಿಕ್ತರಾಗಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರ ತಾಯಿ ರಾಣಿ ಎಲಿಜಬೆತ್ IIರ (Queen Elizabeth II) ಮರಣದ ನಂತರ ಕಿಂಗ್ ಚಾರ್ಲ್ಸ್ ಯುಕೆ ಮತ್ತು 14 ಇತರ ರಾಜ್ಯಗಳ ರಾಜರಾದರು. ಕಿಂಗ್ ಚಾರ್ಲ್ಸ್ ಅವರು ತಮ್ಮ ತಾಯಿಯಿಂದ ಆನುವಂಶಿಕವಾಗಿ ಪಡೆದ ಭದ್ರತಾ ತಂಡದೊಂದಿಗೆ ಇರುತ್ತಾರೆ. ಈ ತಂಡದ ಒಬ್ಬ ಸದಸ್ಯ, ನಿರ್ದಿಷ್ಟವಾಗಿ, ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆದಿದ್ದಾರೆ. ಮೆಟ್ರೋ ವರದಿಯ ಪ್ರಕಾರ, ಅಧಿಕೃತವಾಗಿ ಹೆಸರಿಸದ ಗಡ್ಡವಿರುವ ಈ ಅಂಗರಕ್ಷಕನನ್ನು ಸೆಪ್ಟೆಂಬರ್ 8, 2022 ರಂದು ರಾಣಿಯ ಸಾವಿನ ಸಮಯದಲ್ಲಿ ಮೊದಲು ಗುರುತಿಸಲಾಯಿತು.

ಕಳೆದ ವರ್ಷ ಈ ಅಂಗರಕ್ಷಕ ರಾಜನ ವಿಡಿಯೊ ಚಿತ್ರೀಕರಿಸುತ್ತಿದ್ದ ಮಹಿಳೆಯ ಫೋನ್ ಅನ್ನು ಕೆಳಗೆ ತಳ್ಳುವುದು ಕಂಡುಬಂದಿದೆ. ಮಹಿಳೆಯಲ್ಲಿ, ಫೋನ್‌ ಕೆಳಗೆ ಇರಿಸಿ. ಈ ಕ್ಷಣವನ್ನು ಆನಂದಿಸಿ ಎಂದು ಹೇಳಿದ್ದಾರೆ ಇವರು.


ಅಂದಿನಿಂದ ಈ ಸೆಕ್ಯುರಿಟಿ ಗಾರ್ಡ್ ರಾಜನ ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಲ್ಲಿದ್ದಾನೆ. ಇತ್ತೀಚೆಗೆ, ಅವರು ಬಕಿಂಗ್ ಹ್ಯಾಮ್ ಅರಮನೆಯ ಒಳಗೆ ಮತ್ತು ಹೊರಗೆ ಅಲಂಕಾರಿಕ ಛತ್ರಿಯೊಂದಿಗೆ ನಡೆದುಕೊಂಡು ಹೋಗುತ್ತಿರುವ ಅನೇಕ ವೀಡಿಯೊಗಳು ಟಿಕ್ ಟಾಕ್ ನಲ್ಲಿ ಕಾಣಿಸಿವೆ.

ಅನೇಕರು ಆ ವ್ಯಕ್ತಿಯನ್ನನು ಕಾಲಿನ್ ಫಿರ್ತ್‌ನ ಕಿಂಗ್ಸ್‌ಮನ್‌ನ ಹ್ಯಾರಿ ಹಾರ್ಟ್‌ಗೆ ಹೋಲಿಸಿದ್ದಾರೆ. ಅವನ ಛತ್ರಿಯನ್ನು ‘ಗನ್‌ಬ್ರೆಲ್ಲಾ’ ಎಂದು ಹೇಳುತ್ತಿದ್ದಾರೆ.ಆತ ಛತ್ರಿಯಲ್ಲಿ ಗನ್ ಇಟ್ಟುಕೊಂಡಿದ್ದಾರೆ ಎಂದು ಕೆಲವರು ಅನುಮಾನಿಸಿದ್ದಾರೆ.ಅವರು ರಹಸ್ಯ ದಳದ ವ್ಯಕ್ತಿ ಎಂದು ಕೆಲವರು ಹೇಳಿದರೆ,ಇನ್ನು ಕೆಲವರು ಅವರ ಲುಕ್ ಗೆ ಫಿದಾ ಆಗಿದ್ದಾರೆ.

ಇದನ್ನೂ ಓದಿ: King Charles IIIs coronation: ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಪಟ್ಟಾಭಿಷೇಕ; ಕಿಂಗ್ ಚಾರ್ಲ್ಸ್ III ಬ್ರಿಟನ್‌ನ ರಾಜ

ನಾನು ಅವನನ್ನು ಪ್ರೀತಿಸುತ್ತೇನೆ, ಅವನು ಮುಂದಿನ ಜೇಮ್ಸ್ ಬಾಂಡ್ ಆಗಿರಬೇಕು. ಅಂತಹ ಅದ್ಭುತ ವ್ಯಕ್ತಿ ಎಂದು ಅವರು ಒಬ್ಬರು ಕಾಮೆಂಟಿಸಿದ್ದು, ಇನ್ನೊಬ್ಬರು ಅವರು ತುಂಬಾ ಸುಂದರವಾಗಿದ್ದಾರೆ! ಕಂಪ್ಲೀಟ್ ಜೆಂಟಲ್ ಮೆನ್ ಎಂದಿದ್ದಾರೆ. ಮೂರನೆಯವರೊಬ್ಬರು,ಅವರು ಗಡ್ಡ ನಿರ್ವಹಣೆ ಸಲಹೆಗಳನ್ನು ನೀಡುತ್ತಾರೆಯೇ? ಎಂದು ಕೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:18 pm, Sat, 6 May 23