King Charles III’s coronation: ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಪಟ್ಟಾಭಿಷೇಕ; ಕಿಂಗ್ ಚಾರ್ಲ್ಸ್ III ಬ್ರಿಟನ್‌ನ ರಾಜ

ಸೆಪ್ಟೆಂಬರ್ 2022 ರಲ್ಲಿ ರಾಣಿ ಎಲಿಜಬೆತ್ II ರ ಮರಣದ ನಂತರ ಕಾನೂನುಬದ್ಧವಾಗಿ ರಾಜನಾದ ಚಾರ್ಲ್ಸ್, ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿನಡೆದ ಧಾರ್ಮಿಕ ಸಮಾರಂಭದಲ್ಲಿ ಔಪಚಾರಿಕವಾಗಿ ಸೇಂಟ್ ಎಡ್ವರ್ಡ್ಸ್ ಕ್ರೌನ್ ಸ್ವೀಕರಿಸಿದ್ದಾರೆ.

King Charles III's coronation: ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಪಟ್ಟಾಭಿಷೇಕ; ಕಿಂಗ್ ಚಾರ್ಲ್ಸ್ III ಬ್ರಿಟನ್‌ನ ರಾಜ
ಕಿಂಗ್ ಚಾರ್ಲ್ಸ್ III
Follow us
ರಶ್ಮಿ ಕಲ್ಲಕಟ್ಟ
|

Updated on:May 06, 2023 | 5:25 PM

ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಕಿಂಗ್ ಚಾರ್ಲ್ಸ್‌ನ (King Charles III) ಪಟ್ಟಾಭಿಷೇಕ (coronation) ಸಮಾರಂಭ ನಡೆದಿದೆ. ಆರ್ಚ್​​​ಬಿಷಪ್ (archbishop) ರಾಜನ ತಲೆಯ ಮೇಲೆ ಸೇಂಟ್ ಎಡ್ವರ್ಡ್ಸ್ ಕಿರೀಟವನ್ನು ಇರಿಸಿದ್ದು, ಬ್ರಿಟನ್‌ನ ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ ನಡೆದಿದೆ. ಸೆಪ್ಟೆಂಬರ್ 2022 ರಲ್ಲಿ ರಾಣಿ ಎಲಿಜಬೆತ್ II ರ ಮರಣದ ನಂತರ ಕಾನೂನುಬದ್ಧವಾಗಿ ರಾಜನಾದ ಚಾರ್ಲ್ಸ್, ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಔಪಚಾರಿಕವಾಗಿ ಸೇಂಟ್ ಎಡ್ವರ್ಡ್ಸ್ ಕ್ರೌನ್ ಸ್ವೀಕರಿಸಿದ್ದಾರೆ.

God save the King! ಎರಡು ಗಂಟೆಗಳ ಅವಧಿಯ ಸಮಾರಂಭಗಳ ನಂತರ, ಕಿಂಗ್ ಚಾರ್ಲ್ಸ್ ಬ್ರಿಟನ್‌ನ ಹೊಸ ರಾಜನಾಗಿ ಪಟ್ಟಾಭಿಷಿಕ್ತರಾಗಿದ್ದಾರೆ. ಇವರ ತಾಯಿ ರಾಣಿ ಎಲಿಜಬೆತ್ II ರ ಮರಣದ ನಂತರ, ಕಳೆದ ವರ್ಷ ಚಾರ್ಲ್ಸ್ ಸಿಂಹಾಸನವನ್ನು ಏರಿದರು. ಇಂದು ಸಂಪ್ರದಾಯ, ವೈಭವ ಮತ್ತು ಶತಮಾನಗಳ-ಹಳೆಯ ಪದ್ಧತಿಗಳ ಪ್ರಕಾರ ರಾಜ ಕಿರೀಟವನ್ನು ಚಾರ್ಲ್ಸ್ ಮುಡಿಗೇರಿಸಲಾಯಿತು. ಈ ಕಿರೀಟಧಾರಣೆ, ಅಧಿಕೃತವಾಗಿ ಅವರ ಆಳ್ವಿಕೆಯ ಆರಂಭವನ್ನು ಸೂಚಿಸುತ್ತದೆ.

ಇದನ್ನೂ ಓದಿ: King Charles III: ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ, ಭಾರತದ ಉಪರಾಷ್ಟ್ರಪತಿ ಭಾಗಿ, ಕಾರ್ಯಕ್ರಮದ ನಿರೂಪಣೆಗೆ ನಟಿ ಸೋನಮ್ ಕಪೂರ್

ಕಿಂಗ್ ಚಾರ್ಲ್ಸ್ ಕಿರೀಟಧಾರಣೆ ವೇಳೆ ಟ್ರಂಪೆಟ್ಸ್ ಮತ್ತು “ಗಾಡ್ ಸೇವ್ ದ ಕಿಂಗ್” ಎಂಬ ಕೋರಸ್ ಮೊಳಗಿದ್ದು, ಕ್ಯಾಂಟರ್ಬರಿಯ ಆರ್ಚ್​​​ಬಿಷಪ್ ರಾಜನ ತಲೆಯ ಮೇಲೆ ಸೇಂಟ್ ಎಡ್ವರ್ಡ್ಸ್ ಕಿರೀಟವನ್ನಿರಿಸಿದ್ದಾರೆ.

ಚಾರ್ಲ್ಸ್ III ಯುನೈಟೆಡ್ ಕಿಂಗ್‌ಡಮ್ ಮತ್ತು 14 ಇತರ ಕಾಮನ್‌ವೆಲ್ತ್ ಸಾಮ್ರಾಜ್ಯಗಳ ರಾಜರಾಗಿದ್ದಾರೆ. ಕಿರೀಟಧಾರಣೆಗೆ ಮುನ್ನ ಆರ್ಚ್​​​ಬಿಷಪ್ ಜಸ್ಟಿನ್ ವೆಲ್ಬಿ ಧರ್ಮೋಪದೇಶ ಮಾಡಿದ್ದಾರೆ. ನಾವು ರಾಜನನ್ನು ಪಟ್ಟಾಭಿಷೇಕ ಮಾಡಲು ಇಲ್ಲಿದ್ದೇವೆ. ಸೇವೆ ಮಾಡಲು ನಾವು ರಾಜನನ್ನು ಪಟ್ಟಾಭಿಷೇಕ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದ ಕಿಂಗ್ ಚಾರ್ಲ್ಸ್

ನಾನು, ಚಾರ್ಲ್ಸ್ ದೇವರ ಸಮ್ಮುಖದಲ್ಲಿ ಪ್ರಾಮಾಣಿಕವಾಗಿ ನಾನು ನಂಬಿಗಸ್ತ ಪ್ರೊಟೆಸ್ಟೆಂಟ್ ಎಂದು ಘೋಷಿಸುತ್ತೇನೆ. ಪ್ರೊಟೆಸ್ಟಂಟ್ ಉತ್ತರಾಧಿಕಾರವನ್ನು ಭದ್ರಪಡಿಸುವ ಶಾಸನಗಳ ನಿಜವಾದ ಉದ್ದೇಶದ ಪ್ರಕಾರ ನಾನು ನಿಲ್ಲುತ್ತೇನೆ. ಸಿಂಹಾಸನಾರೋಹಣ ಮಾಡಿ ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Sat, 6 May 23

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್