Kannada News World ಕೊರೊನಾ ಮದ್ದಿಗೆ ‘ಲಕ್ಷ್ಮಿ’ ಕಟಾಕ್ಷ! 30 ಕೋಟಿ ದೇಣಿಗೆ ನೀಡಿದ ಸ್ಟೀಲ್ ಉದ್ಯಮಿ
ಕೊರೊನಾ ಮದ್ದಿಗೆ ‘ಲಕ್ಷ್ಮಿ’ ಕಟಾಕ್ಷ! 30 ಕೋಟಿ ದೇಣಿಗೆ ನೀಡಿದ ಸ್ಟೀಲ್ ಉದ್ಯಮಿ
ಕೊರೊನಾವನ್ನ ಹತ್ತಿಕ್ಕುವ ಮದ್ದನ್ನು ಕಂಡುಹಿಡಿಯಲು ಹಲವಾರು ದೇಶಗಳು ಹಗಲುರಾತ್ರಿ ಎನ್ನದೆ ಶ್ರಮಿಸುತ್ತಿವೆ. ಅದರಲ್ಲಿ, ಇಂಗ್ಲೆಂಡ್ ಸಹ ಒಂದು. ಇಂಗ್ಲೆಂಡ್ನ ಆಕ್ಸ್‌ಫರ್ಡ್ ಜೆನ್ನರ್ ಸಂಸ್ಥೆ ಕೊರೊನಾ ವ್ಯಾಕ್ಸಿನ್ ಸಂಶೋಧನೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ತಾನು ಅಭಿವೃದ್ಧಿಪಡಿಸಿರುವ ಲಸಿಕೆ ಇದೀಗ ಮಾನವ ಪ್ರಯೋಗಕ್ಕೆ ಸಜ್ಜಾಗಿದೆ. ಈ ನಡುವೆ ಸಂಸ್ಥೆಯ ಪರಿಶ್ರಮಕ್ಕೆ ಮತ್ತಷ್ಟು ಆರ್ಥಿಕ ನೆರವು ನೀಡಲು ಭಾರತ ಸಂಜಾತ ಸ್ಟೀಲ್ ಉದ್ಯಮಿ ಲಕ್ಷ್ಮಿ ಮಿತ್ತಲ್ ಮುಂದಾಗಿದ್ದಾರೆ. ಕೊರೊನಾ ವ್ಯಾಕ್ಸಿನ್ ಸಂಶೋಧನೆಗೆ ಲಕ್ಷ್ಮಿ ಮಿತ್ತಲ್ ಬರೋಬ್ಬರಿ 3.2 ಮಿಲಿಯನ್ ಪೌಂಡ್ (30 ಕೋಟಿ […]
Follow us on
ಕೊರೊನಾವನ್ನ ಹತ್ತಿಕ್ಕುವ ಮದ್ದನ್ನು ಕಂಡುಹಿಡಿಯಲು ಹಲವಾರು ದೇಶಗಳು ಹಗಲುರಾತ್ರಿ ಎನ್ನದೆ ಶ್ರಮಿಸುತ್ತಿವೆ. ಅದರಲ್ಲಿ, ಇಂಗ್ಲೆಂಡ್ ಸಹ ಒಂದು. ಇಂಗ್ಲೆಂಡ್ನ ಆಕ್ಸ್‌ಫರ್ಡ್ ಜೆನ್ನರ್ ಸಂಸ್ಥೆ ಕೊರೊನಾ ವ್ಯಾಕ್ಸಿನ್ ಸಂಶೋಧನೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ತಾನು ಅಭಿವೃದ್ಧಿಪಡಿಸಿರುವ ಲಸಿಕೆ ಇದೀಗ ಮಾನವ ಪ್ರಯೋಗಕ್ಕೆ ಸಜ್ಜಾಗಿದೆ.
ಈ ನಡುವೆ ಸಂಸ್ಥೆಯ ಪರಿಶ್ರಮಕ್ಕೆ ಮತ್ತಷ್ಟು ಆರ್ಥಿಕ ನೆರವು ನೀಡಲು ಭಾರತ ಸಂಜಾತ ಸ್ಟೀಲ್ ಉದ್ಯಮಿ ಲಕ್ಷ್ಮಿ ಮಿತ್ತಲ್ ಮುಂದಾಗಿದ್ದಾರೆ. ಕೊರೊನಾ ವ್ಯಾಕ್ಸಿನ್ ಸಂಶೋಧನೆಗೆ ಲಕ್ಷ್ಮಿ ಮಿತ್ತಲ್ ಬರೋಬ್ಬರಿ 3.2 ಮಿಲಿಯನ್ ಪೌಂಡ್ (30 ಕೋಟಿ ರೂ.) ದೇಣಿಗೆ ನೀಡಿದ್ದಾರೆ. ಈ ಮೂಲಕ ಕೊರೊನಾ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿರುವ ಆಕ್ಸ್‌ಫರ್ಡ್ ಜೆನ್ನರ್ ಸಂಸ್ಥೆಗೆ ನೆರವಾಗಿದ್ದಾರೆ.