‘ಕಾಬೂಲ್​ನ ಐಷಾರಾಮಿ ಹೋಟೆಲ್​​ಗಳಿಂದ ತಕ್ಷಣ ಹೊರಡಿ’-ತಮ್ಮ ನಾಗರಿಕರಿಗೆ ಎಚ್ಚರಿಕೆ ನೀಡಿದ ಯುಎಸ್​, ಯುಕೆ

‘ಕಾಬೂಲ್​ನ ಐಷಾರಾಮಿ ಹೋಟೆಲ್​​ಗಳಿಂದ ತಕ್ಷಣ ಹೊರಡಿ’-ತಮ್ಮ  ನಾಗರಿಕರಿಗೆ ಎಚ್ಚರಿಕೆ ನೀಡಿದ ಯುಎಸ್​, ಯುಕೆ
ಕಾಬೂಲ್​​ನ ಸೆರೆನಾ ಹೊಟೆಲ್​ ಚಿತ್ರ

ಆಗಸ್ಟ್​ 15ರಂದು ಅಫ್ಘಾನಿಸ್ತಾವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ, ಅಮೆರಿಕ, ಇಂಗ್ಲೆಂಡ್​ ಸೇರಿ ಬಹುತೇಕ ಎಲ್ಲ ದೇಶಗಳ ನಾಗರಿಕರೂ ಅಲ್ಲಿಂದ ತಮ್ಮ ದೇಶಗಳಿಗೆ ತೆರಳಿದ್ದಾರೆ.

TV9kannada Web Team

| Edited By: Lakshmi Hegde

Oct 11, 2021 | 6:24 PM

ಅಫ್ಘಾನಿಸ್ತಾನ (Afghanistan)ದ ಐಷಾರಾಮಿ ಹೋಟೆಲ್​ಗಳು ಮತ್ತು ಅದರ ಸುತ್ತಮುತ್ತದ ಪ್ರದೇಶಗಳಲ್ಲಿ ತಂಗಿರುವ ತಮ್ಮ ದೇಶಗಳ ನಾಗರಿಕರಿಗೆ ಯುಎಸ್ ಹಾಗೂ ಇಂಗ್ಲೆಂಡ್ (US and UK)​ ದೇಶಗಳು ಎಚ್ಚರಿಕೆಯೊಂದನ್ನು ನೀಡಿವೆ. ಅದರಲ್ಲೂ ಅಫ್ಘಾನ್​ನ ಕಾಬೂಲ್ (Kabul Hotels)​​ನಲ್ಲಿರುವ ಸೆರೆನಾ ಹೋಟೆಲ್​​ ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ತಂಗಿದ್ದರೆ, ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡಿ ಎಂದು ಎರಡೂ ದೇಶಗಳು ತಮ್ಮ ನಾಗರಿಕರಿಗೆ ತಿಳಿಸಿವೆ. ಹಾಗೇ, ಹೊಸದಾದ ಟ್ರಾವೆಲ್​ ಅಡ್ವೈಸರಿಯನ್ನು​​ ಬಿಡುಗಡೆ ಮಾಡಿವೆ. ಸೆರೆನಾ ಹೋಟೆಲ್​ ಮೇಲೆ ಈ ಹಿಂದೆ ಕೂಡ ತಾಲಿಬಾನ್​ ದಾಳಿ ಮಾಡಿತ್ತು. ಈಗಲೂ ಕೂಡ ಐಷಾರಾಮಿ ಹೋಟೆಲ್​ ಮತ್ತು ಅದರ ಸುತ್ತಲಿನ ಪ್ರದೇಶಗಳ ಭದ್ರತೆಗೆ ಹೆಚ್ಚಿನ ಅಪಾಯ ಇದೆ. ಅದರಲ್ಲೂ ಈ ಬಾರಿ ಅಪಾಯ ಇರುವುದು ಐಸಿಸ್​ ಉಗ್ರರಿಂದ ಎಂದು ಯುಕೆ ಮತ್ತು ಯುಎಸ್​ಗಳು ಹೇಳಿವೆ.

ಆಗಸ್ಟ್​ 15ರಂದು ಅಫ್ಘಾನಿಸ್ತಾವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ, ಅಮೆರಿಕ, ಇಂಗ್ಲೆಂಡ್​ ಸೇರಿ ಬಹುತೇಕ ಎಲ್ಲ ದೇಶಗಳ ನಾಗರಿಕರೂ ಅಲ್ಲಿಂದ ತಮ್ಮ ದೇಶಗಳಿಗೆ ತೆರಳಿದ್ದಾರೆ. ಆಯಾ ವಿದೇಶೀ ಸರ್ಕಾರಗಳೇ ಖುದ್ದಾಗಿ ತಮ್ಮ ನಾಗರಿಕರನ್ನು ಅಫ್ಘಾನ್​​ನಿಂದ ಕರೆಸಿಕೊಂಡಿವೆ. ಆದರೂ ಯುಎಸ್​, ಯುಕೆಯ ಕೆಲ ಪತ್ರಕರ್ತರು, ಇನ್ನಿತರ ಬೆರಳೆಣಿಕೆಯಷ್ಟು ಜನರು ತಮ್ಮ ಕೆಲಸಕ್ಕಾಗಿ, ಅನಿವಾರ್ಯ ಕಾರಣಗಳಿಂದ ಇಲ್ಲಿಯೇ ಉಳಿದಿದ್ದಾರೆ. ಅವರಲ್ಲಿ ಹೀಗೆ ಐಷಾರಾಮಿ ಹೋಟೆಲ್​ಗಳಲ್ಲಿ ಉಳಿದುಕೊಂಡವರೂ ಇದ್ದಾರೆ. ಅಂಥವರನ್ನು ಇದೀಗ ಎಚ್ಚರಿಸಲಾಗಿದೆ.

ಅಫ್ಘಾನಿಸ್ತಾನದ ಕುಂಡುಜ್​ ನಗರದ ಮಸೀದಿಯೊಂದರಲ್ಲಿ ಕೆಲವೇ ದಿನಗಳ ಹಿಂದೆ ಭೀಕರ ಸ್ಫೋಟವಾಗಿದೆ. ಸ್ಫೋಟವಾದ ಸಮಯದಲ್ಲಿ ಮಸೀದಿಯಲ್ಲಿ 300 ಮಂದಿ ಇದ್ದರು. ಅದರಲ್ಲಿ 100 ಜನ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಈ ದುರಂತದ ಬೆನ್ನಲ್ಲೇ ಯುಎಸ್​, ಯುಕೆಗಳು ಮತ್ತೊಮ್ಮೆ ತಮ್ಮ ನಾಗರಿಕರನ್ನು ಎಚ್ಚರಿಸಿವೆ.  ಹೀಗೆ ಸ್ಫೋಟಗೊಂಡ ಮಸೀದಿ ಶಿಯಾ ಸಮುದಾಯಕ್ಕೆ ಸೇರಿದ್ದಾಗಿದೆ. ಈ ದುರಂತವನ್ನು ವಿಶ್ವದಾದ್ಯಂತ ಖಂಡಿಸಲಾಗಿದೆ.

ಇದನ್ನೂ ಓದಿ: ‘ಕೋಟಿಗೊಬ್ಬ 3’ ರಿಲೀಸ್​ ಸಂದರ್ಭದಲ್ಲೇ ಕಿಚ್ಚನ ಪುತ್ಥಳಿ; ಉದ್ಘಾಟನೆಗೆ ಆಗಮಿಸಲಿದ್ದಾರೆ ಸುದೀಪ್​

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಿತು ರಾಜ್ ಅವಸ್ಥಿ ಪ್ರಮಾಣ ವಚನ ಸ್ವೀಕಾರ

Follow us on

Related Stories

Most Read Stories

Click on your DTH Provider to Add TV9 Kannada