ರಿಯಾಸಿ ಬಸ್ ದಾಳಿಯ ರೂವಾರಿ, ಹಫೀಜ್ ಸಯೀದ್ ಆಪ್ತ, ಉಗ್ರ ಅಬು ಕತಾಲ್ ಹತ್ಯೆ
ಲಷ್ಕರ್-ಎ-ತೊಯ್ಬಾದ ಮೋಸ್ಟ್ ವಾಂಡೆಟ್ ಉಗ್ರ ಅಬು ಕತಾಲ್ನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಂಜಾಬ್ ಜಿಲ್ಲೆಯಲ್ಲಿ ಅಪರಿಚಿತ ಹಲ್ಲೆಕೋರರು ಆತನನ್ನು ಹತ್ಯೆ ಮಾಡಿದ್ದಾರೆ. ಅಬು ಕತಾಲ್ 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಆಪ್ತನಾಗಿದ್ದ. ಕತಾಲ್ ಎಲ್‌ಇಟಿಯ ಪ್ರಮುಖ ಸದಸ್ಯನಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ದಾಳಿಗಳನ್ನು ನಡೆಸಿದ್ದ.

ಇಸ್ಲಾಮಾಬಾದ್, ಮಾರ್ಚ್ 16: ಲಷ್ಕರ್-ಎ-ತೊಯ್ಬಾದ ಮೋಸ್ಟ್ ವಾಂಡೆಟ್ ಉಗ್ರ ಅಬು ಕತಾಲ್ನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಂಜಾಬ್ ಜಿಲ್ಲೆಯಲ್ಲಿ ಅಪರಿಚಿತ ಹಲ್ಲೆಕೋರರು ಆತನನ್ನು ಹತ್ಯೆ ಮಾಡಿದ್ದಾರೆ. ಅಬು ಕತಾಲ್ 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಆಪ್ತನಾಗಿದ್ದ. ಕತಾಲ್ ಎಲ್‌ಇಟಿಯ ಪ್ರಮುಖ ಸದಸ್ಯನಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ದಾಳಿಗಳನ್ನು ನಡೆಸಿದ್ದ.
ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವಖೋಡಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ದಾಳಿಯಲ್ಲಿ ಕತಾಲ್ ಕೂಡ ಭಾಗಿಯಾಗಿದ್ದ. ಇದರಲ್ಲಿ 10 ಜನರು ಪ್ರಾಣ ಕಳೆದುಕೊಂಡಿದ್ದರು.
2023 ರ ರಾಜೌರಿ ದಾಳಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ ಆರೋಪಪಟ್ಟಿಯಲ್ಲಿ ಅಬು ಕತಾಲ್ನನ್ನು ಹೆಸರಿಸಿತ್ತು. ಜನವರಿ 1, 2023 ರಂದು, ರಾಜೌರಿ ಜಿಲ್ಲೆಯ ಧಂಗ್ರಿ ಗ್ರಾಮದಲ್ಲಿ ನಾಗರಿಕರ ಮೇಲೆ ಭಯೋತ್ಪಾದಕ ದಾಳಿ ನಡೆಸಲಾಯಿತು. ಮರುದಿನ, ಐಇಡಿ ಸ್ಫೋಟವೂ ಸಂಭವಿಸಿತು. ಈ ದಾಳಿಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದರು, ಹಲವರು ಗಂಭೀರವಾಗಿ ಗಾಯಗೊಂಡರು.
ಈ ಪ್ರಕರಣದಲ್ಲಿ ಲಷ್ಕರ್-ಎ-ತೈಬಾದ ಇನ್ನೂ ಮೂವರು ಭಯೋತ್ಪಾದಕರು ಸೇರಿದಂತೆ ಐದು ಆರೋಪಿಗಳ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು. ಅಬು ಕತಾಲ್ ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಲ್ಲದೆ, ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಮುಖ್ಯಸ್ಥ ಹಫೀಜ್ ಸಯೀದ್‌ನ ವಿಶ್ವಾಸಾರ್ಹ ಸಹಾಯಕನಾಗಿದ್ದ.
ಮತ್ತಷ್ಟು ಓದಿ: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್: ಓರ್ವ ಉಗ್ರನ ಹತ್ಯೆ
ಸಯೀದ್ ಕತಾಲ್ನನ್ನು ಎಲ್‌ಇಟಿಯ ಮುಖ್ಯ ಕಾರ್ಯಾಚರಣೆ ಕಮಾಂಡರ್ ಆಗಿ ನೇಮಿಸಿದ್ದ, ಭಾರತದಲ್ಲಿ, ವಿಶೇಷವಾಗಿ ಕಾಶ್ಮೀರದಲ್ಲಿ ಪ್ರಮುಖ ಭಯೋತ್ಪಾದಕ ದಾಳಿಗಳನ್ನು ಯೋಜಿಸುವ ಮತ್ತು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಅವನಿಗೆ ನೀಡಿದ್ದ.
ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಎಲ್‌ಇಟಿ ಭಯೋತ್ಪಾದಕರ ನೇಮಕಾತಿ ಮತ್ತು ಚಲನೆಯಲ್ಲಿ ಕತಾಲ್ ನೇರವಾಗಿ ಭಾಗಿಯಾಗಿದ್ದಾನೆ ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:43 am, Sun, 16 March 25