ದೋಣಿ ಹೋಗಲು ತೆರೆದಿದ್ದ ಲಂಡನ್​ನ ಐಕಾನಿಕ್ ಟವರ್​ನ​ ಸೇತುವೆ ಮುಚ್ಚಲೇ ಇಲ್ಲ, ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್

|

Updated on: Sep 29, 2023 | 12:16 PM

ಹಲವು ದೇಶಗಳಲ್ಲಿ ದೋಣಿ, ಹಡಗು, ರೈಲು, ಬಸ್​ ಹಾಗೂ ಇತರೆ ವಾಹನಗಳ ಸಂಚಾರಕ್ಕೆ ಒಂದೇ ಮಾರ್ಗವಿರುತ್ತದೆ. ಹಡಗುಗಳು ಓಡಾಡುವಾಗ ಬೇರೆ ಮಾರ್ಗಗಳು ಬಂದ್ ಆಗಿರುತ್ತವೆ, ರೈಲು, ಇತರೆ ವಾಹನಗಳು ಹೋಗುವಾಗ ಈ ಮಾರ್ಗಗಳು ಮುಚ್ಚಿರುತ್ತವೆ. ಆದರೆ ಲಂಡನ್​ನ ಐಕಾನಿಕ್ ಟವರ್ ಬ್ರಿಡ್ಜ್​ನಲ್ಲಿ ದೋಣಿ ಹೋಗುವಾಗ ತೆರದಿದ್ದ ಸೇತುವೆಯು ಅರ್ಧ ಗಂಟೆಗಳ ಕಾಲ ಮುಚ್ಚದೇ ಇದ್ದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

ದೋಣಿ ಹೋಗಲು ತೆರೆದಿದ್ದ ಲಂಡನ್​ನ ಐಕಾನಿಕ್ ಟವರ್​ನ​ ಸೇತುವೆ ಮುಚ್ಚಲೇ ಇಲ್ಲ, ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್
ಐಕಾನಿಕ್ ಬ್ರಿಡ್ಜ್​
Image Credit source: NDTV
Follow us on

ಹಲವು ದೇಶಗಳಲ್ಲಿ ದೋಣಿ, ಹಡಗು, ರೈಲು, ಬಸ್​ ಹಾಗೂ ಇತರೆ ವಾಹನಗಳ ಸಂಚಾರಕ್ಕೆ ಒಂದೇ ಮಾರ್ಗವಿರುತ್ತದೆ. ಹಡಗುಗಳು ಓಡಾಡುವಾಗ ಬೇರೆ ಮಾರ್ಗಗಳು ಬಂದ್ ಆಗಿರುತ್ತವೆ, ರೈಲು, ಇತರೆ ವಾಹನಗಳು ಹೋಗುವಾಗ ಈ ಮಾರ್ಗಗಳು ಮುಚ್ಚಿರುತ್ತವೆ. ಆದರೆ ಲಂಡನ್​ನ ಐಕಾನಿಕ್ ಟವರ್ ಬ್ರಿಡ್ಜ್​ನಲ್ಲಿ ದೋಣಿ ಹೋಗುವಾಗ ತೆರದಿದ್ದ ಸೇತುವೆಯು ಅರ್ಧ ಗಂಟೆಗಳ ಕಾಲ ಮುಚ್ಚದೇ ಇದ್ದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಬಾರ್ಜ್ ಬೋಟ್ ಸೇತುವೆಯ ಕೆಳಗೆ ಹಾದುಹೋಗಬೇಕಾಗಿತ್ತು, ಹೀಗಾಗಿ ಸೇತುವೆಯನ್ನು ತೆರೆಯಲಾಗಿತ್ತು, ನಂತರ ಸೇತುವೆ ಮುಚ್ಚದ ಕಾರಣ ಈ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ತೆರೆದ ಸೇತುವೆಯನ್ನು ನೋಡಿದರೆ ಸಂತೋಷವಾಗುತ್ತದೆ ಆದರೆ ಜನರ ದೃಷ್ಟಿಕೋನದಿಂದ ನೋಡಿದರೆ ಆಗ ಕಷ್ಟದ ಅರಿವಾಗುತ್ತದೆ, ಅಲ್ಲಿ ಪ್ರವಾಸಿ ಬಸ್​ಗಳು ಕೂಡ ಸಿಲುಕಿಕೊಂಡಿದ್ದವು.

ಬಹಳ ಹೊತ್ತಿನ ನಂತರ ಸೇತುವೆಯನ್ನು ಮುಚ್ಚಲಾಯಿತು, ಆಗ ಅಲ್ಲಿದ್ದವರು ಕುಣಿದು ಕುಪ್ಪಳಿಸಿದ್ದಾರೆ. ಸೇತುವೆಯನ್ನು ಮುಚ್ಚಿದ ನಂತರ, ಮೊದಲು ಬೈಕ್‌ಗಳನ್ನು ಅಲ್ಲಿಗೆ ಹೋಗಲು ಅನುಮತಿಸಲಾಯಿತು ಮತ್ತು ನಂತರ ಸ್ವಲ್ಪ ಸಮಯದೊಳಗೆ ಸಂಚಾರ ಪ್ರಾರಂಭವಾಯಿತು. ನನಗೂ ಈ ದೃಶ್ಯ ನೋಡಿ ತುಂಬಾ ಖುಷಿಯಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಮತ್ತಷ್ಟು ಓದಿ: ಹಿಂದೂಮಹಾಸಾಗರಕ್ಕೆ ಬಂದ ಚೀನಾ ಹಡಗು, ಬಲ ಹೆಚ್ಚಿಸಿಕೊಳ್ಳಲು ಸರ್ಕಾರದ ಬಳಿ ಕೆಲವು ಬೇಡಿಕೆ ಇಟ್ಟ ಭಾರತೀಯ ನೌಕಾಪಡೆ

ಸೌತ್ವಾರ್ಕ್ ಬೀಚ್ ಅನ್ನು ಥೇಮ್ಸ್ ನದಿಯ ಮೇಲೆ ನಿರ್ಮಿಸಲಾಗಿದೆ. ಈ ಸೇತುವೆಯನ್ನು 1894 ರಲ್ಲಿ ನಿರ್ಮಿಸಲಾಯಿತು. ಇದು 240 ಮೀಟರ್ (800 ಅಡಿ) ಉದ್ದ ಮತ್ತು 76 ಮೀಟರ್ (250 ಅಡಿ) ಅಗಲವಿದೆ.