Sign In

By signing in or creating an account, you agree with Associated Broadcasting Company's Terms & Conditions and Privacy Policy.

Balochistan Bomb Blast:ಬಲೂಚಿಸ್ತಾನದ ಮಸೀದಿ ಬಳಿ ಬಾಂಬ್ ಸ್ಫೋಟ, 20ಕ್ಕೂ ಅಧಿಕ ಮಂದಿ ಸಾವು, ಹಲವರಿಗೆ ಗಾಯ

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಕೆಲ ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ. ಇನ್ನೂ ಹಲವು ಮಂದಿ ಗಾಯಗೊಂಡಿದ್ದಾರೆ. ಈ ಮಾಹಿತಿಯನ್ನು ಬಿಬಿಸಿ ಉರ್ದು ನೀಡಿದೆ. ಬಲೂಚಿಸ್ತಾನದ ಮಸ್ತುಂಗ್‌ನ ಅಲ್ ಫಲಾಹ್ ರಸ್ತೆಯಲ್ಲಿರುವ ಮದೀನಾ ಮಸೀದಿ ಬಳಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಬಿಬಿಸಿ ಉರ್ದು ವರದಿ ಮಾಡಿದೆ.

Balochistan Bomb Blast:ಬಲೂಚಿಸ್ತಾನದ ಮಸೀದಿ ಬಳಿ ಬಾಂಬ್ ಸ್ಫೋಟ, 20ಕ್ಕೂ ಅಧಿಕ ಮಂದಿ ಸಾವು, ಹಲವರಿಗೆ ಗಾಯ
ಬಾಂಬ್ ಸ್ಫೋಟImage Credit source: ABP Live
Follow us
ನಯನಾ ರಾಜೀವ್
|

Updated on:Sep 29, 2023 | 1:45 PM

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 20ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಕೆಲ ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ. ಇನ್ನೂ ಹಲವು ಮಂದಿ ಗಾಯಗೊಂಡಿದ್ದಾರೆ. ಈ ಮಾಹಿತಿಯನ್ನು ಬಿಬಿಸಿ ಉರ್ದು ನೀಡಿದೆ. ಬಲೂಚಿಸ್ತಾನದ ಮಸ್ತುಂಗ್‌ನ ಅಲ್ ಫಲಾಹ್ ರಸ್ತೆಯಲ್ಲಿರುವ ಮದೀನಾ ಮಸೀದಿ ಬಳಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಬಿಬಿಸಿ ಉರ್ದು ವರದಿ ಮಾಡಿದೆ. ಈದ್ ಮಿಲಾದ್-ಉನ್-ನಬಿ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಲು ಜನರು ಅಲ್ಲಿ ಸೇರುತ್ತಿದ್ದಾಗ ಇದು ಸಂಭವಿಸಿದೆ.

ಸ್ಫೋಟದಲ್ಲಿ 20 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಜನರು ಗಾಯಗೊಂಡಿದ್ದಾರೆ ಎಂದು ಮಸ್ತುಂಗ್ ಎಸ್‌ಎಸ್‌ಪಿ ಶೋಯೆಬ್ ಮಸೂದ್ ಹೇಳಿಕೆಯನ್ನು ಬಿಬಿಸಿ ಉರ್ದು ಉಲ್ಲೇಖಿಸಿದೆ.

ಅವರ ಪ್ರಕಾರ, ಪ್ರಸ್ತುತ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯಾ ಬಾಂಬರ್‌ನಿಂದ ಸ್ಫೋಟ ನಡೆದಿರುವ ಸಾಧ್ಯತೆಯನ್ನು ಶೋಯೆಬ್ ಮಸೂದ್ ವ್ಯಕ್ತಪಡಿಸಿದ್ದಾರೆ. ಆದರೆ, ಈವರೆಗೆ ಯಾರೂ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಅಲ್ಫಲಾಹ್ ರಸ್ತೆಯಲ್ಲಿರುವ ಮದೀನಾ ಮಸೀದಿ ಬಳಿ ಈದ್ ಮಿಲಾದುನ್ ನಬಿ (PBUH) ಮೆರವಣಿಗೆಗಾಗಿ ಜನರು ಸೇರುತ್ತಿದ್ದಾಗ ಸ್ಫೋಟ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶತ್ರುಗಳು ಬಲೂಚಿಸ್ತಾನದಲ್ಲಿ ಧಾರ್ಮಿಕ ಸಹಿಷ್ಣುತೆ ಮತ್ತು ಶಾಂತಿಯನ್ನು ನಾಶಮಾಡಲು ಬಯಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಮತ್ತಷ್ಟು ಓದಿ: ಪಾಕಿಸ್ತಾನದಲ್ಲಿ ನೆಲ ಬಾಂಬ್ ಸ್ಫೋಟ, 7 ಮಂದಿ ಸಾವು

ಪಿಟಿಐ ನಾಯಕ ಇಮ್ರಾನ್ ಇಸ್ಮಾಯಿಲ್ ಸ್ಫೋಟವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಮಾಯಕರ ಬದುಕನ್ನು ಕೊನೆಗಾಣಿಸುವವರು ದಬ್ಬಾಳಿಕೆಗಾರರು ಮತ್ತು ಭಯೋತ್ಪಾದಕರು ಎಂದು ಕರೆದಿದ್ದಾರೆ.

ಮಸ್ತಂಗ್‌ನ ಮದೀನಾ ಮಸೀದಿ ಬಳಿ ನಡೆದ ಸ್ಫೋಟವನ್ನು ಆಂತರಿಕ ಸಚಿವ ಸರ್ಫರಾಜ್ ಅಹ್ಮದ್ ಬುಗ್ತಿ ಬಲವಾಗಿ ಖಂಡಿಸಿದ್ದಾರೆ. ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುವ ಬಗ್ಗೆ ತೀವ್ರ ದುಃಖ ಮತ್ತು ವಿಷಾದ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:35 pm, Fri, 29 September 23