ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕೊರಿಯ ನಾಯಕ ಕಿಮ್ ಜಾಂಗ್-ಉನ್ ನಡುವೆ ಸ್ನೇಹಕ್ಕೂ ಮಿಗಿಲಾದ ಸಂಬಂಧವಿತ್ತೇ?

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 11, 2022 | 12:12 AM

2018ರ ವರ್ಜಿನಿಯಾ ಱಲಿಯಲ್ಲಿ ಡೊನಾಲ್ಡ್ ಟ್ರಂಪ್ ಅವರು ತನ್ನ ಮತ್ತು ಕಿಮ್ ನಡುವಿನ ಅತಿರಂಜಿತ ಮತ್ತು ಚರ್ಚಿತ ಸ್ನೇಹದ ಬಗ್ಗೆ ಹೀಗೆ ಹೇಳಿದ್ದರು: ‘ನಾವು ಪ್ರೇಮಪಾಶದಲ್ಲಿ ಸಿಲುಕಿದ್ದೇವೆ. ನನ್ನನ್ನು ಅಪಾರ್ಥ ಮಾಡಿಕೊಳ್ಳಬೇಡಿ. ಅವರು ನನಗೆ ನಲ್ಮೆಯ ಪತ್ರಗಳನ್ನು ಬರೆದಿದ್ದಾರೆ.’

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕೊರಿಯ ನಾಯಕ ಕಿಮ್ ಜಾಂಗ್-ಉನ್ ನಡುವೆ ಸ್ನೇಹಕ್ಕೂ ಮಿಗಿಲಾದ ಸಂಬಂಧವಿತ್ತೇ?
ಕಿಮ್ ಜಾಂಗ್-ಉನ್ ಮತ್ತು ಡೊನಾಲ್ಡ್​ ಟ್ರಂಪ್
Follow us on

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ (Kim Jang-Un) ನಡುವೆ ಎಂಥ ಸಂಬಂಧವಿತ್ತು ಮಾರಾಯ್ರೇ? ಅಮೆರಿಕ ನ್ಯಾಷನಲ್ ಆರ್ಖೈವ್ (US National Archive) ಇಲಾಖೆಗೆ ವ್ಹೈಟ್ ಹೌಸ್ನಿಂದ ಅನುಚಿತವಾದ ರೀತಿಯಲ್ಲಿ ತೆಗೆದುಹಾಕಲಾದ ಡೊನಾಲ್ಡ್ ಟ್ರಂಪ್ ಅವರ ಮಾರ್-ಲಗೋ ರೆಸಾರ್ಟ್ ನಿಂದ ಕಿಮ್ ಬರೆದಿರುವ ‘ಪ್ರೇಮ ಪತ್ರಗಳು’ ಸೇರಿದಂತೆ ಹಲವಾರು ದಾಖಲೆಗಳು ಲಭ್ಯವಾಗಿವೆ ಅಂತ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯೊಂದರ ಮೂಲಕ ಸೋಮವಾರ ಗೊತ್ತಾಗಿದೆ. ಕಿಮ್ ಕೇವಲ ಅಮೆರಿಕ ಮಾತ್ರವಲ್ಲ ವಿಶ್ವದ ಎಲ್ಲ ದೇಶಗಳಿಗೆ ತಲೆನೋವಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ಉಪಟಳ ಕಮ್ಮಿಯಾಗಿದೆಯಾದರೂ ನ್ಯೂಕ್ಲಿಯರ್ ಬಾಂಬ್ ಗಳ ಮೂಲಕ ಅಮೆರಿಕವನ್ನೇ ನಾಶ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಭೂಪ ಅವರು.

ನ್ಯಾಷನಲ್ ಆರ್ಖೈವ್ ಇಲಾಖೆಗೆ ಲಭ್ಯವಾಗಿರುವ ದಾಖಲೆ ಮತ್ತು ಮತ್ತು ಸ್ಮರಣಿಕೆಗಳಲ್ಲಿ ಅಮೆರಿಕದ ಇನ್ನೊಬ್ಬ ಮಾಜಿ ಅಧ್ಯಕ್ಷ ಅಧ್ಯಕ್ಷ ಬರಾಕ್ ಒಬಾಮಾ ನಡೆಸಿದ ಪತ್ರವ್ಯವಹಾರವನ್ನು ಸಹ ಒಳಗೊಂಡಿದೆ. ಅಧ್ಯಕ್ಷೀಯ ದಾಖಲೆಗಳ ಕಾಯಿದೆ ಅನ್ವಯ ಒಬಾಮಾ ಅವರ ಅಧಿಕಾರಾವಧಿ ಮುಕ್ತಾಯಗೊಂಡ ಬಳಿಕ ಆ ದಾಖಲೆಗಳು, ಪತ್ರ ವ್ಯವಹಾರ ಟ್ರಂಪ್ ಅವರ ಸುಪರ್ದಿಗೆ ಬಂದಿರುತ್ತವೆ.

ಆದರೆ ಹೆಸರಿಸದ ಮೂಲಗಳನ್ನು ಉಲ್ಲೇಖಿಸಿ ದಿ ವಾಷಿಂಗ್ಟನ್ ಪೋಸ್ಟ್ ಮಾಡಿರುವ ವರದಿಯ ಪ್ರಕಾರ ಪ್ರಕಾರ, ಇಲಾಖೆಗೆ ಕಳೆದ ತಿಂಗಳವರೆಗೆ ಸದರಿ ದಾಖಲೆ ಮತ್ತು ಇನ್ನಿತರ ಪತ್ರ ವ್ಯವಹಾರಕ್ಕೆ ಸಂಬಂಧಿಸಿದ ಕಾಗದಗಳು ಸಿಕ್ಕಿರಲಿಲ್ಲ. ಟ್ರಂಪ್ ಅವರು ಯಾವುದಾದರೂ ಕ್ರಿಮಿನಲ್ ಉದ್ದೇಶದಿಂದ ಮಾಡಿರುವುದಿಲ್ಲ ಎಂದು ಅವರ ಆಪ್ತ ಸಹಾಯಕರೊಬ್ಬರು ಹೇಳಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2018ರ ವರ್ಜಿನಿಯಾ ಱಲಿಯಲ್ಲಿ ಡೊನಾಲ್ಡ್ ಟ್ರಂಪ್ ಅವರು ತನ್ನ ಮತ್ತು ಕಿಮ್ ನಡುವಿನ ಅತಿರಂಜಿತ ಮತ್ತು ಚರ್ಚಿತ ಸ್ನೇಹದ ಬಗ್ಗೆ ಹೀಗೆ ಹೇಳಿದ್ದರು: ‘ನಾವು ಪ್ರೇಮಪಾಶದಲ್ಲಿ ಸಿಲುಕಿದ್ದೇವೆ. ನನ್ನನ್ನು ಅಪಾರ್ಥ ಮಾಡಿಕೊಳ್ಳಬೇಡಿ. ಅವರು ನನಗೆ ನಲ್ಮೆಯ ಪತ್ರಗಳನ್ನು ಬರೆದಿದ್ದಾರೆ.’

ಟ್ರಂಪ್ ಆಗ ಮಾಡಿದ ಕಾಮೆಂಟ್ ಆಧಾರದಲ್ಲೇ ಟ್ರಂಪ್ ಬೆಂಬಲಿಗರ ಮತ್ತು ವಿರೋಧಿಗಳಿಗೆ ಅವರ ಮತ್ತು ಕಿಮ್ ನಡುವೆ ನಡೆದ ಅಸ್ವಾಭಾವಿಕ ಪತ್ರ ವ್ಯವಹಾರಹನ್ನು ‘ಪ್ರೇಮ ಪತ್ರಗಳ ವಿನಿಮಯ’ ಎಂದು ಭಾವಿಸುವ ಸನ್ನಿವೇಶವನ್ನು ಸೃಷ್ಟಿಸಿದೆ.

ಬಾಕ್ಸ್‌ಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿರುವುದು, 1970 ರ ವಾಟರ್‌ಗೇಟ್ ಹಗರಣದ ನಂತರ ಜಾರಿಗೆ ತಂದ ಅಧ್ಯಕ್ಷೀಯ ದಾಖಲೆಗಳ ಕಾನೂನುಗಳಿಗೆ ಟ್ರಂಪ್ ಅವರ ಬದ್ಧತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಡಳಿತಾತ್ಮಕ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಓವಲ್ ಕಚೇರಿ ಸಿಬ್ಬಂದಿ ಸಂರಕ್ಷಿಸಬೇಕಾಗುತ್ತದೆ.

2021 ರ ಯುಎಸ್ ಕ್ಯಾಪಿಟಲ್ ಗಲಭೆಯನ್ನು ತನಿಖೆ ಮಾಡುವ ಹೌಸ್ ಸಮಿತಿಗೆ ಆರ್ಕೈವ್ಸ್ ಡೈರಿಗಳು, ಸಂದರ್ಶಕರ ದಾಖಲೆಗಳು, ಭಾಷಣ ಕರಡುಗಳು ಮತ್ತು ಇತರ ಶ್ವೇತಭವನದ ದಾಖಲೆಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸುವಂತೆ ಮಾಡುವ ಪ್ರಯತ್ನದಲ್ಲಿದ್ದ ಟ್ರಂಪ್ ಕಳೆದ ತಿಂಗಳು ತಮ್ಮ ದಾವೆಯಲ್ಲಿ ಅಸಫಲರಾದರು.

ಹಸ್ತಾಂತರಿಸಿದ ದಾಖಲೆಗಳ ಪೈಕಿ ಕೆಲವನ್ನು ‘ಮಾಜಿ ಅಧ್ಯಕ್ಷ ಹರಿದು ಪುನಃ ಅವುಗಳನ್ನು ಜೋಡಿಸಿದ್ದಾರೆ,’ ಎಂದು ಹೇಳಿರುವ ಆರ್ಖೈವ್ಸ್ ಇಲಾಖೆಯು ಹರಿದು ಚೂರು ಮಾಡಲಾಗಿರುವ ತುಂಡುಗಳೂ ದೊರೆಕಿವೆ ಎಂದಿದೆ.

ಅಧ್ಯಕ್ಷ ಸ್ಥಾನದ ಹುದ್ದೆಯನ್ನು ಟ್ರಂಪ್ ಹೇಗೆ ಪರಿಗಣಿಸುತ್ತಿದ್ದರು ಅಂತ ಸೂಚಿಸುವುದಕ್ಕೆ ಇದು ಜ್ವಲಂತ ನಿದರ್ಶನವಾಗಿದೆ. ಈ ಹುದ್ದೆ ಒದಗಿಸುತ್ತಿದ್ದ ಅನಿರ್ವಚನೀಯ ಅಧಿಕಾರ, ಈ ದಾಖಲೆಗಳಲ್ಲಿ ಅಡಗಿರುವ ಸತ್ಯ ತನಗೆ ಮಾತ್ರ ಅಮೆರಿಕ ಜನತೆಗೆ ಅಲ್ಲ ಅಂತ ಅವರು ಭಾವಿಸಿದ್ದರು’ ಎಂದು ಯುಎಸ್ ಮಾಜಿ ಡೆಪ್ಯೂಟಿ ಅಟಾರ್ನಿ ಜನರಲ್ ಹ್ಯಾರಿ ಲಿಟ್‌ಮನ್ ತನ್ನ ಟ್ವಿಟರ್‌ ಖಾತೆಯಲ್ಲಿ ಹೇಳಿದ್ದಾರೆ.

ಈ ಸುದ್ದಿ ಬಹಿರಂಗ ಕೂಡಲೇ ಎ ಎಫ್ ಪಿ ಸುದ್ದಿಸಂಸ್ಥೆಯು ನ್ಯಾಷನಲ್ ಆರ್ಖೈವ್ಸ್ ಇಲಾಖೆ ಮತ್ತು ಟ್ರಂಪ್ ಅವರು ಕಚೇರಿಯನ್ನು ಸಂಪರ್ಕಿಸಲು ಪ್ರಯತ್ನಿಸಿತಾದರೂ ಎರಡು ಕಡೆಗಳಿಂದ ಕೂಡಲೇ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.

ಇದನ್ನೂ ಓದಿ:   ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​ರನ್ನು ಕೊಂದೇಬಿಡುತ್ತೇನೆ ಎಂದು 2020ರಿಂದ ಬೆನ್ನತ್ತಿದ್ದ 72ವರ್ಷದ ವೃದ್ಧ ಅರೆಸ್ಟ್ !

Published On - 9:25 am, Thu, 10 February 22