Heart Attack: ದಕ್ಷಿಣ ಕೊರಿಯಾದಲ್ಲಿ ಸಾಮೂಹಿಕ ಹೃದಯಾಘಾತ, 80 ಜನ ಆಸ್ಪತ್ರೆಗೆ ದಾಖಲು

ಹ್ಯಾಲೋವೀನ್ ಹಬ್ಬದಲ್ಲಿ ಭಾಗಿಯಾದವರಿಗೆ ಸಾಮೂಹಿಕ ಹೃದಯಾಘಾತ ನಡೆದಿರುವ ದಕ್ಷಿಣ ಕೊರಿಯಾದಲ್ಲಿ ನಡೆದಿದೆ. 50ಕ್ಕೂ ಹೆಚ್ಚು ಮಂದಿಗೆ ಹೃದಯ ಸ್ಥಂಬನವಾಗಿದೆ ಎಂದು ವರದಿಯಾಗಿದೆ.

Heart Attack: ದಕ್ಷಿಣ ಕೊರಿಯಾದಲ್ಲಿ ಸಾಮೂಹಿಕ ಹೃದಯಾಘಾತ, 80 ಜನ ಆಸ್ಪತ್ರೆಗೆ ದಾಖಲು
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 29, 2022 | 11:00 PM

ಸಿಯೋಲ್: ಹ್ಯಾಲೋವೀನ್ ಹಬ್ಬದಲ್ಲಿ ಭಾಗಿಯಾದವರಿಗೆ ಸಾಮೂಹಿಕ ಹೃದಯಾಘಾತ ನಡೆದಿರುವ ದಕ್ಷಿಣ ಕೊರಿಯಾದಲ್ಲಿ ನಡೆದಿದೆ. 50ಕ್ಕೂ ಹೆಚ್ಚು ಮಂದಿಗೆ ಹೃದಯ ಸ್ಥಂಬನವಾಗಿದೆ ಎಂದು ವರದಿಯಾಗಿದೆ. ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ನಡೆಯುತ್ತಿದ್ದ ಹಬ್ಬದಲ್ಲಿ 80ಕ್ಕೂ ಹೆಚ್ಚು ಮಂದಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ. ಘಟನೆಯ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ದಕ್ಷಿಣ ಕೊರಿಯಾ ಸ್ಥಳೀಯ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪಾರ್ಟಿಯಲ್ಲಿ ಭಾಗಿ ಆಗಿದ್ದ 50ಕ್ಕೂ ಹೆಚ್ಚು ಜನರಿಗೆ ಹೃದಯಾಘಾತ ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ನೂಕುನುಗ್ಗಲಿನಿಂದ ಅವಘಡ ನಡೆದಿದೆ.  ಇಟಾವಾನ್‌ನಲ್ಲಿ ಆಯೋಜಿಸಿದ್ದ ಹ್ಯಾಲೋವೀನ್ ಪಾರ್ಟಿಯಲ್ಲಿ ಘಟನೆ ಅಸ್ವಸ್ಥಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳೀಯ ಪೋಲೀಸ್ ಅಧಿಕಾರಿಯೊಬ್ಬರು, ಹ್ಯಾಲೋವೀನ್ ಹಬ್ಬದಲ್ಲಿ ಜನಸಂದಣಿಯು ನೆರೆದಿದ್ದ ಇಟಾವೊನ್‌ನ ಬೀದಿಗಳಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿಸಲಾಗಿದೆ. ಘಟನೆಯ ವಿವರಗಳು ಇನ್ನೂ ತನಿಖೆಯಲ್ಲಿವೆ ಎಂದು ಅಧಿಕಾರಿಯು ಹೇಳಿದ್ದಾರೆ.

ಅಪರಿಚಿತ ಸೆಲೆಬ್ರಿಟಿಯೊಬ್ಬರು ಅಲ್ಲಿಗೆ ಭೇಟಿ ನೀಡಿರುವುದನ್ನು ಕೇಳಿದ ನಂತರ ಹೆಚ್ಚಿನ ಸಂಖ್ಯೆಯ ಜನರು ಇಟಾವಾನ್ ಬಾರ್‌ಗೆ ಧಾವಿಸಿದ ನಂತರ ಈ ಘಟನೆ ಸಂಭವಿಸಿದೆ ಎಂದು ಕೆಲವು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ಅಘಾತಗೊಂಡವರಿಗೆ ತ್ವರಿತ ಚಿಕಿತ್ಸೆಯನ್ನು ನೀಡಲು ಮತ್ತು ಹಬ್ಬದ ಸ್ಥಳಗಳ ಸುರಕ್ಷತೆಯನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Published On - 10:59 pm, Sat, 29 October 22