ಪಾಕಿಸ್ತಾನ: ಇಸ್ಲಾಮಾಬಾದ್‌ನಲ್ಲಿರುವ ಸೆಂಟಾರಸ್ ಮಾಲ್‌ನಲ್ಲಿ ಬೆಂಕಿ ಅವಘಡ
ರಕ್ಷಣಾ ತಂಡಗಳು ಬರುವುದಕ್ಕೆ ವಿಳಂಬವಾಗಿದ್ದು ಕಟ್ಟಡದ ಮೂರನೇ ಮಹಡಿಯಿಂದ ಮೊದಲ ಮಹಡಿಗೆ ಮತ್ತು ವಸತಿ ಅಪಾರ್ಟ್‌ಮೆಂಟ್‌ಗಳು ಇರುವ ಮೇಲಿನ ವಿಭಾಗಗಳಿಗೆ ವೇಗವಾಗಿ ಹರಡುತ್ತಿರುವ ಕಾರಣ ಬೆಂಕಿಯ ತೀವ್ರತೆಯನ್ನು ಹೆಚ್ಚಿಸಿದೆ
ಇಸ್ಲಾಮಾಬಾದ್‌ನ (Islamabad )ಸೆಂಟಾರಸ್ ಮಾಲ್‌ನ (Centaurus Mall) ಮೂರನೇ ಮಹಡಿಯಲ್ಲಿ ಭಾನುವಾರ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಮೇಲಿನ ಭಾಗದಲ್ಲಿರುವ ವಸತಿ ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಇತರ ಮಹಡಿಗಳಲ್ಲಿ ಹರಡಿದೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಇದುವರೆಗೆ ಯಾವುದೇ ಸಾವು ನೋವು ವರದಿಯಾಗಿಲ್ಲ. ಅಗ್ನಿಶಾಮಕ ವಾಹನಗಳು ಸಹ ಬೆಂಕಿಯನ್ನು ನಿಯಂತ್ರಿಸಲು ಘಟನೆಯ ಸ್ಥಳಕ್ಕೆ ಧಾವಿಸಿವೆ ಎಂದು ವರದಿಯಲ್ಲಿ ಹೇಳಿದೆ. ರಕ್ಷಣಾ ತಂಡಗಳು ಬರುವುದಕ್ಕೆ ವಿಳಂಬವಾಗಿದ್ದು ಕಟ್ಟಡದ ಮೂರನೇ ಮಹಡಿಯಿಂದ ಮೊದಲ ಮಹಡಿಗೆ ಮತ್ತು ವಸತಿ ಅಪಾರ್ಟ್‌ಮೆಂಟ್‌ಗಳು ಇರುವ ಮೇಲಿನ ವಿಭಾಗಗಳಿಗೆ ವೇಗವಾಗಿ ಹರಡುತ್ತಿರುವ ಕಾರಣ ಬೆಂಕಿಯ ತೀವ್ರತೆಯನ್ನು ಹೆಚ್ಚಿಸಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಮೋನಾಲ್ ರೆಸ್ಟೊರೆಂಟ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಇಡೀ ಫುಡ್ ಕೋರ್ಟ್ ನಲ್ಲಿ ಬೆಂಕಿಯಾವರಿಸಿದೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
Praying for no loss of life at Centaurus Mall and that everyone is safe. Hope Islamabad city has high rise fire fighting equipment and SAR equipped helicopter in the event of higher floor evacuations. Building vertical cities requires this kind of equipment. Prayers for everyone. pic.twitter.com/QntPu2SMZZ
— Fakhr-e-Alam (@falamb3) October 9, 2022
ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವಾಗ ಯಾವುದೇ ಗಾಯ ಅಥವಾ ಸಾವುನೋವುಗಳನ್ನು ತಪ್ಪಿಸಲು ಅಧಿಕಾರಿಗಳು ಮಾಲ್ ನಲ್ಲಿರುವ ಜನರನ್ನು ಸ್ಥಳಾಂತರಿಸುತ್ತಿದ್ದಾರೆ. ಪಾಕಿಸ್ತಾನದ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ ವಿಡಿಯೊ ತುಣುಕಿನಲ್ಲಿ ಗೋಪುರದಿಂದ ಹೊಗೆ ಬರುತ್ತಿರುವುದನ್ನು ತೋರಿಸಿದೆ. ಕಟ್ಟಡದಿಂದ ಹೊರಬರಲು ಪ್ರಯತ್ನಿಸುತ್ತಿರುವಾಗ ಭಯಭೀತರಾದ ಜನರು ಮಾಲ್‌ನ ಎಸ್ಕಲೇಟರ್‌ಗಳ ಕೆಳಗೆ ಓಡುತ್ತಿರುವುದನ್ನು ತೋರಿಸುವ ವಿಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಪೋಸ್ಟ್ ಮಾಡಿದ್ದಾರೆ.
Published On - 8:19 pm, Sun, 9 October 22