ಇಷ್ಟು ದಿನ ಜೊಹ್ರಾನ್ ಮಮ್ದಾನಿಯನ್ನು ಶತ್ರುವಿನಂತೆ ಕಾಣುತ್ತಿದ್ದ ಟ್ರಂಪ್ನಿಂದ ಹೊಗಳಿಕೆಯ ಸುರಿಮಳೆ
ಇತ್ತೀಚೆಗೆ ನಡೆದ ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ಭಾರತ ಮೂಲದ ಜೊಹ್ರಾನ್ ಮಮ್ದಾನಿ(Zohran Mamdani) ಗೆಲುವು ಸಾಧಿಸಿದ್ದಾರೆ. ಅವರು ಮೇಯರ್ ಆಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ನ್ಯೂಯಾರ್ಕ್ ನಗರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜೊಹ್ರಾನ್ ಮಮ್ದಾನಿ ಶ್ವೇತಭವನದಲ್ಲಿ ಭೇಟಿಯಾದರು.

ನ್ಯೂಯಾರ್ಕ್, ನವೆಂಬರ್ 22: ಇತ್ತೀಚೆಗೆ ನಡೆದ ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ಭಾರತ ಮೂಲದ ಜೊಹ್ರಾನ್ ಮಮ್ದಾನಿ(Zohran Mamdani) ಗೆಲುವು ಸಾಧಿಸಿದ್ದಾರೆ. ಅವರು ಮೇಯರ್ ಆಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ನ್ಯೂಯಾರ್ಕ್ ನಗರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜೊಹ್ರಾನ್ ಮಮ್ದಾನಿ ಶ್ವೇತಭವನದಲ್ಲಿ ಭೇಟಿಯಾದರು.
ಚುನಾವಣಾ ಪ್ರಚಾರದ ಸಮಯದಲ್ಲಿ ತಿಂಗಳುಗಟ್ಟಲೆ ಟೀಕಿಸಿದ್ದ ತಮ್ಮ ರಾಜಕೀಯ ಎದುರಾಳಿ ಬಗ್ಗೆ ಟ್ರಂಪ್ ಹೃತ್ಪೂರ್ವಕ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಭೆಯು ಅಮೆರಿಕನ್ ರಾಜಕೀಯವನ್ನು ಗಮನಿಸುವವರ ನಿರೀಕ್ಷೆಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿತ್ತು. ಟ್ರಂಪ್ ಬಹಳ ಹಿಂದಿನಿಂದಲೂ ಮಮ್ದಾನಿಯನ್ನು ಎಡಪಂಥೀಯ ಎಂದು ಕರೆಯುತ್ತಲೇ ಬಂದಿದ್ದರು.
ಟ್ರಂಪ್ ಮತ್ತು ಮಮ್ದಾನಿ ನಡುವೆ ಬಿಸಿ ಬಿಸಿ ಚರ್ಚೆ ನಡೆಯಬಹುದೆಂದು ಹಲವರು ನಿರೀಕ್ಷಿಸಿದ್ದರು.ಆದರೆ ವಾತಾವರಣವು ಸ್ನೇಹಪರವಾಗಿತ್ತು. ಸಭೆಯ ಬಳಿಕ ಮಾತನಾಡಿದ ಟ್ರಂಪ್, ಅವರು ಉತ್ತಮ ಕೆಲಸ ಮಾಡಬಲ್ಲರು ಎಂಬ ವಿಶ್ವಾಸ ನನಗಿದೆ. ವಾಸ್ತವವಾಗಿ ಅವರು ಕೆಲವು ಸಂಪ್ರದಾಯವಾದಿ ಜನರನ್ನು ಅಚ್ಚರಿಗೊಳಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಮತ್ತಷ್ಟು ಓದಿ: Zohran Mamdani: ಭಾರತದ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಪುತ್ರ ಜೊಹ್ರಾನ್ ಮಮ್ದಾನಿ ನ್ಯೂಯಾರ್ಕ್‌ನ ನೂತನ ಮೇಯರ್
ಈ ಹಿಂದೆ ಟ್ರಂಪ್ ಅವರನ್ನು ಫ್ಯಾಸಿಸ್ಟ್ ಎಂದು ಕರೆದಿದ್ದ ಮಮ್ದಾನಿ ಕೂಡ ತಮ್ಮ ನಿಲುವನ್ನು ಸಂಪೂರ್ಣವಾಗಿ ಬದಲಾಯಿಸಿದಂತೆ ಕಾಣುತ್ತದೆ. ಸಭೆಯ ನಂತರ, ಟ್ರಂಪ್ ಟ್ರುತ್ ಸೋಷಿಯಲ್‌ನಲ್ಲಿ ನ್ಯೂಯಾರ್ಕ್ ನಗರದ ಹೊಸ ಮೇಯರ್ ಜೊಹ್ರಾನ್ ಮಮ್ದಾನಿಯನ್ನು ಭೇಟಿಯಾಗಿದ್ದು ಸಂತಸ ತಂದಿದೆ ಎಂದು ಬರೆದಿದ್ದರು.
ಟ್ರಂಪ್-ಜೊಹ್ರಾನ್ ವಿಡಿಯೋ
.@POTUS on Mayor-elect Zohran Mamdani: “He’s got views that are a little out there, but who knows. We’re going to see what works.” pic.twitter.com/5qBVFKDLxm
— Rapid Response 47 (@RapidResponse47) November 21, 2025
ಅವರು ನನಗೆ ಮನವರಿಕೆ ಮಾಡುತ್ತಾರೆ ಇಲ್ಲವಾದಲ್ಲಿ ನಾನು ವರಿಗೆ ಮನವರಿಕೆ ಮಾಡುತ್ತೇನೆ, ನಾವು ಭಿನ್ನಾಭಿಪ್ರಾಯ ಹೊಂದಿರುವ ವಿಷಯಗಳು ಇರುತ್ತವೆ. ನಾವು ಬಹುಶಃ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದು ನಾನು ಭಾವಿಸುತ್ತೇನೆ. ಇದು ನ್ಯೂಯಾರ್ಕ್‌ನ ಒಳಿತಿಗಾಗಿ, ನಗರ ಯಶಸ್ಸನ್ನುಗಳಿಸಿದರೆ ನಾನೂ ಸಂತೋಷ ಪಡುತ್ತೀನಿ ಎಂದು ಟ್ರಂಪ್ ಹೇಳಿದ್ದಾರೆ.
ಚುನಾವಣಾ ಪ್ರಚಾರದ ಸಮಯದಲ್ಲಿ ಮಮ್ದಾನಿ ಆಡಳಿತದಲ್ಲಿ ನ್ಯೂಯಾರ್ಕ್ ನಗರ ಸಂಪೂರ್ಣ ಆರ್ಥಿಕ ಮತ್ತು ಸಾಮಾಜಿಕ ವಿಪತ್ತು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ಟ್ರಂಪ್, ಈಗ ಮಮ್ದಾನಿ ನಗರವನ್ನು ಮುನ್ನಡೆಸುವ ಬಗ್ಗೆ ನನಗೆ ಸಹಮತವಿದೆ. ಪ್ರೀತಿಯ ನಗರಕ್ಕಾಗಿ ಅವರು ಕೆಲಸ ಮಾಡಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ನ್ಯೂಯಾರ್ಕ್ ನಿವಾಸಿಗಳ ಜೀವನ ವೆಚ್ಚವನ್ನು ಕೈಗೆಟುಕುವ ಮಟ್ಟಕ್ಕೆ ತರಲು ಕೆಲಸ ಮಾಡುವ ಕುರಿತು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದೇವೆ. ಈ ವಿಷಯದಲ್ಲಿ ಅಧ್ಯಕ್ಷರೊಂದಿಗೆ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ ಎಂದು ಮಮ್ದಾನಿ ಪ್ರತಿಕ್ರಿಯಿಸಿದರು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಮ್ದಾನಿಯನ್ನು ಶೇ.100ರಷ್ಟು ಕಮ್ಯೂನಿಸ್ಟ್ ಹುಚ್ಚ ಎಂದು ಟೀಕಿಸಿದ್ದರು. ಹೌದು ನಾನು ಕಮ್ಯೂನಿಸ್ಟ್. ಅಂದರೆ ಜನರ ಪರವೇ ಹೊರತು ನಿಮ್ಮಂತೆ ಕಾರ್ಪೋರೇಟ್‌ಗಳ ಪರವಲ್ಲ ಎಂದು ಮಮ್ದಾನಿ ತಿರುಗೇಟು ನೀಡಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




