ಸ್ವಿಡ್ಜರ್ಲೆಂಡ್ (Switzerland)ನ ಜಿನಿವಾ ನಗರದಲ್ಲಿ ಫೆಬ್ರವರಿ 23ರಂದು ನಡೆದಿದ್ದ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನ ವೊಂದರಲ್ಲಿ ಸ್ವಾಮಿ ನಿತ್ಯಾನಂದನ(Nityananda) ಕೈಲಾಸ ರಾಷ್ಟ್ರದ ಪ್ರತಿನಿಧಿಗಳು ಭಾಗವಹಿಸಿದ್ದರೆಂಬ ಮಾಹಿತಿ ಲಭ್ಯವಾಗಿದೆ. ವಿಶ್ವಸಂಸ್ಥೆಯ ಜಿನೀವಾ ಕಚೇರಿಯಲ್ಲಿ ಮಹಿಳೆಯೊಬ್ಬರು ಕೇಸರಿ ಬಟ್ಟೆ, ತಲೆಯ ಮುಡಿ, ಹಣೆಯ ಮೇಲೆ ಬಿಂದಿ ಮತ್ತು ಕೊರಳಲ್ಲಿ ಜಪಮಾಲೆ ಧರಿಸಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡುತ್ತಿರುವ ವಿಡಿಯೋ ಎಲ್ಲರ ಗಮನ ಸೆಳೆದಿತ್ತು.
ಇದರಲ್ಲಿ ಅಮೆರಿಕ, ಯುನೈಟೆಡ್ ಕಿಂಗ್ ಡಮ್(UK), ಫ್ರಾನ್ಸ್(France) ಸ್ಲೊವೇನಿಯಾ(Sloveniya) ಮುಂತಾದ ರಾಷ್ಟ್ರಗಳಲ್ಲಿ ಕೈಲಾಸ ಶಾಖೆಗಳನ್ನು ಮುನ್ನಡೆಸುತ್ತಿರುವ ಮಹಿಳೆಯರು ಅಂದರೆ ನಿತ್ಯಾನಂದ ಶಿಷ್ಯೆಯರು ಭಾಗವಹಿಸಿದ್ದರೆಂದು ಹೇಳಲಾಗಿದೆ.
ಹೌದು, ಇತ್ತಿಚೆಗೆ ವಿಶ್ವಸಂಸ್ಥೆ ವತಿಯಿಂದ ಜಿನೇವಾದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಮಹಾಸಭೆ ನಡೆದಿದ್ದು, ಈ ಸಭೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ(United State of Kailasa)ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಮತ್ತಷ್ಟು ಓದಿ: Priya Anand: ನಿತ್ಯಾನಂದ ಜತೆ ಮದುವೆ ಆಗ್ತೀನಿ ಅಂತ ‘ಜೇಮ್ಸ್’ ನಟಿ ಪ್ರಿಯಾ ಆನಂದ್ ಹೇಳಿದ್ದೇಕೆ?
ಸ್ವಘೋಷಿತ ದೇವಮಾನವ, ಕಾಲ್ಪನಿಕ ಕೈಲಾಸ ರಾಷ್ಟ್ರದ ಸೂತ್ರಧಾರಿ, ಅತ್ಯಾಚಾರ ಆರೋಪಿ ಸ್ವಾಮಿ ನಿತ್ಯಾನಂದನ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆ ಸಭೆಯೊಂದರಲ್ಲಿ ತನ್ನ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಫೇಸ್‌ಬುಕ್ ಖಾತೆಯ ಪ್ರಕಾರ, ವಿಜಯಪ್ರಿಯಾ ನಿತ್ಯಾನಂದ ವಿಶ್ವಸಂಸ್ಥೆಯಲ್ಲಿ ಕೈಲಾಸ ದೇಶದ ಖಾಯಂ ರಾಯಭಾರಿಯಾಗಿದ್ದಾರೆ. ವಿಜಯಪ್ರಿಯಾ ನಿತ್ಯಾನಂದ ಅವರು ಯುನೈಟೆಡ್ ಸ್ಟೇಟ್ಸ್‌ನ ವಾಷಿಂಗ್ಟನ್ ಡಿಸಿ ನಿವಾಸಿ ಎಂದು ಬರೆದುಕೊಂಡಿದ್ದಾರೆ, ವಿಜಯಪ್ರಿಯಾ ಅವರಿಗೆ ನಿತ್ಯಾನಂದನ ದೇಶ ಕೈಲಾಸದಲ್ಲಿ ರಾಜತಾಂತ್ರಿಕ ಸ್ಥಾನಮಾನವಿದೆ.
???????? ????? ?? ???????’? ?????????? ?? ??? ?????? ??????? ?? ?????? ?? ???????? ???? ??? ????, ????: ?? ??????? ?? ???????’? ????????? ?????????? pic.twitter.com/Sz0CPPgj7p
— KAILASA’s SPH Nithyananda (@SriNithyananda) February 28, 2023
ವಿಜಯಪ್ರಿಯಾ ನಿತ್ಯಾನಂದ ಅವರನ್ನು ಹೊರತುಪಡಿಸಿ ಸಭೆಯಲ್ಲಿ ಇತರ ಐದು ಮಹಿಳೆಯರು ಭಾಗವಹಿಸಿದ್ದರು. ನಿತ್ಯಾನಂದ ತನ್ನ ದ್ವೀಪವನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂದು ಕರೆದುಕೊಂಡಿದ್ದಾನೆ. ಆದರೆ ಈ ದ್ವೀಪಕ್ಕೆ ವಿಶ್ವಸಂಸ್ಥೆ ರಾಷ್ಟ್ರದ ಸ್ಥಾನಮಾನ ನೀಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈತನ ದ್ವೀಪ ಎಲ್ಲಿದೆ ಎಂಬುದೂ ಖಚಿತವಾಗಿಲ್ಲ.
ಮಹಿಳೆಯರು ವಿಶ್ವಸಂಸ್ಥೆಯು ಫೆ. 23ರಂದು ಆಯೋಜಿಸಿದ್ದ, ವಿಶ್ವಸಂಸ್ಥೆಯ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಸಮಿತಿಯ 84ನೇ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರೆಂದು ಹೇಳಲಾಗಿದೆ. ಇನ್ನು ಈ ಮಹಾಸಭೆಯಲ್ಲಿ ವಿಶ್ವಸಂಸ್ಥೆಯಲ್ಲಿ ಕೈಲಾಸ ರಾಷ್ಟ್ರದ ಶಾಶ್ವತ ರಾಯಭಾರಿಯಾಗಿರುವ ವಿಜಯಪ್ರಿಯ ನಿತ್ಯಾನಂದ, ಲಾಸ್ ಏಂಜಲೀಸ್ ನ ಕೈಲಾಸ ಶಾಖೆಯ ಮುಖ್ಯಸ್ಥೆಯಾದ ಮುಕ್ತಿಕಾ ಆನಂದ, ಸೇಂಟ್ ಲೂಯಿಸ್ ನ ಕೈಲಾಸ ಶಾಖೆಯ ಸೋನಾ ಕಾಮತ್, ಯುನೈಟೆಡ್ ಕಿಂಗ್ ಡಮ್ ನ ಕೈಲಾಸ ಶಾಖೆಯ ಮುಖ್ಯಸ್ಥೆ ನಿತ್ಯ ಆತ್ಮದಾಯಕಿ, ಫ್ರಾನ್ಸ್ ನಲ್ಲಿರುವ ಕೈಲಾಸ ಶಾಖೆಯ ಮುಖ್ಯಸ್ಥೆ ನಿತ್ಯ ವೆಂಕಟೇಶಾನಂದ ಹಾಗೂ ಸ್ಲೊವೇನಿಯ ಕೈಲಾಸ ಶಾಖೆಯ ಮುಖ್ಯಸ್ಥೆ ಮಾತೆ ಪ್ರಿಯಾ ಪ್ರೇಮ ಭಾಗವಹಿಸಿದ್ದರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2019ರಲ್ಲಿ ಈ ನಿತ್ಯಾನಂದ ಭಾರತ ಬಿಟ್ಟು ಪರಾರಿಯಾಗಿದ್ದ. ಅದಕ್ಕೆ ಮುನ್ನ ಇಲ್ಲಿ ಹಲವಾರು ಕಡೆ ಆಶ್ರಮಗಳನ್ನು ನಡೆಸುತ್ತಿದ್ದ ಈತನ ಮೇಲೆ ಅತ್ಯಾಚಾರ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಮಕ್ಕಳ ಅಪಹರಣ ಮುಂತಾದ ಪ್ರಕರಣಗಳು ದಾಖಲಾಗಿವೆ. 2010ರಲ್ಲಿ ಕರ್ನಾಟಕದ ಕೋರ್ಟ್ ಈತನಿಗೆ ಜಾಮೀನುರಹಿತ ವಾರಂಟ್ ಹೊರಡಿಸಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:15 pm, Thu, 2 March 23