
ವಾಷಿಂಗ್ಟನ್, ಆಗಸ್ಟ್ 17: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin)ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಪತ್ರ ಬರೆದಿದ್ದಾರೆ. ಉಕ್ರೇನ್ ಮಕ್ಕಳ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಈ ಪತ್ರವನ್ನು ಬರೆದಿದ್ದಾರೆ. ಹಳ್ಳಿಯಲ್ಲಿ ಜನಿಸಿರಲಿ, ನಗರದಲ್ಲಿ ಜನಿಸಿರಲಿ ಪ್ರತಿಯೊಂದು ಮಗುವಿನ ಹೃದಯದಲ್ಲಿ ಒಂದೇ ರೀತಿಯ ಕನಸುಗಳಿವೆ. ಅವರು ಅಪಾಯಗಳಿಂದ ರಕ್ಷಣೆಯ ಕನಸು ಕಾಣುತ್ತಾರೆ.ಪೋಷಕರಂತೆ, ನಾಯಕರು ಸಹ ಮುಂದಿನ ಪೀಳಿಗೆಯ ಭರವಸೆಗಳನ್ನು ಜೀವಂತವಾಗಿಡುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಅಮೆರಿಕದ ಅಲಾಸ್ಕಾದಲ್ಲಿ ಸಭೆ ನಡೆಯಿತು. ಈ ಸಭೆ ಇಡೀ ಪ್ರಪಂಚದ ಗಮನ ಸೆಳೆಯಿತು. ಈ ಸಭೆಯಿಂದ ಸಕಾರಾತ್ಮ ಫಲಿತಾಂಶಗಳು ಗೋಚರಿಸದಿದ್ದರೂ ಟ್ರಂಪ್ ಇದೊಂದು ಉತ್ತಮ ಭೇಟಿ ಎಂದು ಕರೆದಿದ್ದಾರೆ.ಈ ಭೇಟಿ ಬಳಿಕ ಮೆಲಾನಿಯಾ ಟ್ರಂಪ್ ಪುಟಿನ್ಗೆ ಶಾಂತಿ ಪತ್ರವನ್ನು ಬರೆದಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು ಈ ಸಭೆಯ ಉದ್ದೇಶವಾಗಿತ್ತು.
ಈ ಪತ್ರವನ್ನು ಮೊದಲು ಫಾಕ್ಸ್ ನ್ಯೂಸ್ ಡಿಜಿಟಲ್ ವರದಿ ಮಾಡಿದೆ. ಟ್ರಂಪ್ ಈ ಪತ್ರವನ್ನು ಪುಟಿನ್ ಅವರಿಗೆ ಹಸ್ತಾಂತರಿಸಿದಾಗ, ಅವರು ತಕ್ಷಣ ಅದನ್ನು ಓದಿದರು ಮತ್ತು ಸಭೆಯಲ್ಲಿದ್ದ ಎಲ್ಲಾ ನಿಯೋಗಗಳು ಈ ಕ್ಷಣಕ್ಕೆ ಸಾಕ್ಷಿಯಾದವು.
ಮತ್ತಷ್ಟು ಓದಿ:ಪುಟಿನ್, ಝೆಲೆನ್ಸ್ಕಿ ಜತೆ ತ್ರಿಪಕ್ಷೀಯ ಸಭೆ ನಡೆಸಲು ಮುಂದಾದ ಟ್ರಂಪ್
ಈ ಹಿಂದೆ ಯುದ್ಧಭೂಮಿಯಲ್ಲಿ ದುರ್ಬಲ ಮಕ್ಕಳನ್ನು ರಕ್ಷಿಸುವುದಾಗಿ ಮಾಸ್ಕೊ ತಿಳಿಸಿತ್ತು. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿಂದಲೂ ಲಕ್ಷಾಂತರ ಉಕ್ರೇನಿನ ಮಕ್ಕಳು ಸಂಕಷ್ಟ ಎದುರಿಸುತ್ತಿದ್ದಾರೆ ಹಾಗೂ ಅವರ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ. ಅಲಸ್ಕಾದಲ್ಲಿ ಟ್ರಂಪ್ ಮತ್ತು ಪುಟಿನ್ ನಡುವೆ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆದರೂ,ಕೂಡಾ ಉಕ್ರೇನ್ ನಡುವಿನ ಕದನ ವಿರಾಮ ಒಪ್ಪಂದದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಅವರೊಂದಿಗಿನ ಭೇಟಿ ಬಳಿಕ ಇದೀಗ ಆಗಸ್ಟ್ 22ರಂದು ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜತೆ ತ್ರಿಪಕ್ಷೀಯ ಮಾತುಕತೆ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧರಾಗಿದ್ದಾರೆ. ಉಕ್ರೇನ್-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಅಮೆರಿಕದ ಅಲಾಸ್ಕಾದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ಯಾವುದೇ ಸಕಾರಾತ್ಮಕ ಫಲಿತಾಂಶವಿಲ್ಲದೇ ಅಂತ್ಯವಾಗಿದೆ ಎಂದು ಹೇಳಲಾಗಿದೆ.
ಶನಿವಾರ ಎಕ್ಸ್ ಪೋಸ್ಟ್‌ನಲ್ಲಿ ಝೆಲೆನ್ಸ್ಕಿ ಅವರು ಸೋಮವಾರ ವಾಷಿಂಗ್ಟನ್‌ನಲ್ಲಿ ಟ್ರಂಪ್ ಅವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಸೋಮವಾರದ ಶ್ವೇತಭವನದ ಸಭೆಯಲ್ಲಿ ಭಾಗವಹಿಸಲು ಟ್ರಂಪ್ ಯುರೋಪಿಯನ್ ನಾಯಕರನ್ನು ಆಹ್ವಾನಿಸಿದ್ದಾರೆ ಎಂದು ಅಮೆರಿಕದ ಆನ್‌ಲೈನ್ ಮಾಧ್ಯಮ ಸಂಸ್ಥೆ ಆಕ್ಸಿಯೋಸ್ ವರದಿ ಮಾಡಿದೆ.
1945ರ ನಂತರದ ಯುರೋಪಿನ ಅತಿದೊಡ್ಡ ಭೂ ಯುದ್ಧವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಕ್ರೂರ ಸಂಘರ್ಷವನ್ನು ಕೊನೆಗೊಳಿಸಲು ಅಥವಾ ವಿರಾಮಗೊಳಿಸಲು ಸೇರಿದ್ದ ಅಲಸ್ಕಾ ಶೃಂಗಸಭೆ ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ