ಬ್ರಿಟನ್ಯಲ್ಲಿ ಮೂರು ಜನರಿಂದ ಡಿಎನ್‌ಎ ಬಳಸಿ ತಯಾರಿಸಿದ ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಪ್ರಕ್ರಿಯೆಯಲ್ಲಿ ಮಗು ಜನಿಸಿದೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ದೊಡ್ಡ ಸಾಧನೆ ಎನ್ನಬಹುದು, ಇದು ಗುಣಪಡಿಸಲಾಗದ ಮೈಟೊಕಾಂಡ್ರಿಯದ ಕಾಯಿಲೆಗಳನ್ನು ಆನುವಂಶಿಕವಾಗಿ ಪಡೆಯುವುದನ್ನು ತಡೆಯಬಹುದು. ಈಗಾಗಲೇ ಮದುವೆಯಾಗಿರುವವರ ಡಿಎನ್‌ಎಯಿಂದ ಈ ಮಗು ಜನಿಸಿದೆ ಎಂದು ಹೇಳಲಾಗಿದೆ. ಮಗುವಿನ ಶೇಕಡಾ 0.1ರಷ್ಟು ಸಣ್ಣ ಭಾಗವು 3 ಮಹಿಳೆಯರಿಂದ ಬಂದಿದೆ. ಅಂದರೆ 3 ಮಹಿಳೆಯರು ಡಿಎನ್‌ಎ ದಾನ ಮಾಡಿದ್ದಾರೆ. ಈವರೆಗೂ ಮಗುವಿನ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ.
ಮೈಟೊಕಾಂಡ್ರಿಯಲ್ ಡೊನೇಶನ್ ಟ್ರೀಟ್ಮೆಂಟ್ (MDT) ಬಗ್ಗೆ ಕಾರ್ಯವಿಧಾನವನ್ನು ಅನುಮತಿಸಲು ಸಂಸತ್ತು 2015ರಲ್ಲಿ ಕಾನೂನನ್ನು ಬದಲಾಯಿಸಿದ ನಂತರ UK ಯಲ್ಲಿನ ನ್ಯೂಕ್ಯಾಸಲ್ ಫರ್ಟಿಲಿಟಿ ಸೆಂಟರ್ ಈ ಪ್ರಯೋಗವನ್ನು ನಡೆಸಿತು.
ಇದನ್ನೂ ಓದಿ:Netaji Death Mystery: ಗುಮ್ನಾಮಿ ಬಾಬಾ DNA ಪರೀಕ್ಷೆ ವರದಿ ಬಹಿರಂಗಪಡಿಸಲು ಕೇಂದ್ರ ನಕಾರ
ಮೈಟೊಕಾಂಡ್ರಿಯಾವನ್ನು ಜೀವಕೋಶದ ಶಕ್ತಿ ಕೇಂದ್ರ ಎಂದು ಕರೆಯಲಾಗುತ್ತದೆ ಮತ್ತು ಜೀವಕೋಶದ ಹೆಚ್ಚಿನ ಶಕ್ತಿಯ ಪೂರೈಕೆಯನ್ನು ಸೃಷ್ಟಿಸಲು ಕಾರಣವಾಗುತ್ತದೆ, ಅದು ನಂತರ ಇಡೀ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಜತೆಗೆ ದೇಹವು ಉತ್ತಮವಾಗಿ ಕಾರ್ಯನಿರ್ವಹಿಸಲು, ಮೈಟೊಕಾಂಡ್ರಿಯವು ಸರಿಯಾಗಿ ಕೆಲಸ ಮಾಡಬೇಕಾಗುತ್ತದೆ, ಕೆಲವೊಮ್ಮೆ ಜೀನ್ ಅಸಹಜತೆಗಳು ಮೈಟೊಕಾಂಡ್ರಿಯಕ್ಕೆ ಸಂಬಂಧಿಸಿದ ಕಾಯಿಲೆಗಳು ವೈದ್ಯಕೀಯ ಅಸ್ವಸ್ಥತೆಗಳಿಗೆ ಕಾರಣವಾಗುತ್ತವೆ. ಮೈಟೊಕಾಂಡ್ರಿಯಕ್ಕೆ ಸಂಬಂಧಿಸಿದ ಕಾಯಿಲೆಗಳು ತಾಯಿಯಿಂದ ಮಾತ್ರ ಮಗುವಿಗೆ ಹರಡುತ್ತವೆ. ಈಗಾಗಲೇ ಈ ಪ್ರಯೋಗ ಯುಕೆಯಲ್ಲಿ ಮುಂದುವರಿದಿದ್ದು, ಅನೇಕ ಜನರು ಈ ಮೂಲಕ ಮಗುವನ್ನು ಪಡೆಯುತ್ತಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ