Monkeypox: ಬ್ರಿಟನ್​ನಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆ; ಏನಿದು ಸೋಂಕು? ಚಿಕಿತ್ಸೆ ಹೇಗೆ? ಇಲ್ಲಿದೆ ಮಾಹಿತಿ

| Updated By: shivaprasad.hs

Updated on: May 10, 2022 | 6:03 PM

Monkeypox treatment: ಮಂಕಿಪಾಕ್ಸ್​​ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕು. ಇದರ ರೋಗ ಲಕ್ಷಣಗಳು ಸ್ಮಾಲ್​ಪಾಕ್ಸ್ ರೋಗಿಗಳಲ್ಲಿ ಕಂಡುಬರುವಂಥವೇ ಆಗಿದೆ. ಮಂಕಿಪಾಕ್ಸ್ ಎಂಬ ವೈರಾಣುವಿನಿಂದ ಈ ರೋಗ ಉಂಟಾಗುತ್ತದೆ. ಈ ರೋಗವು ಸಾಮಾನ್ಯವಾಗಿ ಕೇಂದ್ರ ಮತ್ತು ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಕಂಡುಬರುತ್ತದೆ. ಇತರ ದೇಶಗಳಲ್ಲೂ ಪ್ರಕರಣಗಳು ಪತ್ತೆಯಾಗಿವೆ.

Monkeypox: ಬ್ರಿಟನ್​ನಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆ; ಏನಿದು ಸೋಂಕು? ಚಿಕಿತ್ಸೆ ಹೇಗೆ? ಇಲ್ಲಿದೆ ಮಾಹಿತಿ
ಮಂಕಿಫಾಕ್ಸ್
Image Credit source: AFP
Follow us on

ಇತ್ತೀಚೆಗಷ್ಟೇ ನೈಜೀರಿಯಾಕ್ಕೆ ತೆರಳಿದ್ದ ಇಂಗ್ಲೆಂಡ್‌ ಮೂಲದ ವ್ಯಕ್ತಿಯೋರ್ವರು ಮಂಕಿಪಾಕ್ಸ್ (Monkeypox) ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (UKHSA) ದೃಢಪಡಿಸಿದೆ. ಮಂಕಿಪಾಕ್ಸ್ ಅಪರೂಪದ ಸಾಂಕ್ರಮಿಕ ಖಾಯಿಲೆಯಾಗಿದ್ದರೂ ಕೂಡ ಜನರಿಂದ ಜನರಿಗೆ ಅಷ್ಟು ಸುಲಭವಾಗಿ ಹರಡುವುದಿಲ್ಲ. ಹೆಚ್ಚಿನ ಜನರು ಕೆಲವೇ ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಅದಾಗ್ಯೂ ಕೆಲವು ಪ್ರಕರಣಗಳಲ್ಲಿ ತೀವ್ರ ಅನಾರೋಗ್ಯ ಸಂಭವಿಸಬಹುದು. BBC ವರದಿಯ ಪ್ರಕಾರ, ಬ್ರಿಟನ್​ನಲ್ಲಿ ಮಂಕಿಪಾಕ್ಸ್‌ನ ಮೊದಲ ಪ್ರಕರಣವು ವರದಿಯಾಗಿದ್ದು 2018 ರಲ್ಲಿ. ಅಂದಿನಿಂದ ಇಂದಿನವರೆಗೆ ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಇದೀಗ ಸೋಂಕು ಕಂಡ ಬಂದ ವ್ಯಕ್ತಿಯ ಕುಟುಂಬ ಹಾಗೂ ನಿಕಟ ಸಂಪರ್ಕದಲ್ಲಿದ್ದವರನ್ನು ಸಂಪರ್ಕಿಸುವುದಾಗಿ UKHSA ತಿಳಿಸಿದೆ.

ಮಂಕಿಪಾಕ್ಸ್ ಎಂದರೇನು?

ಮಂಕಿಪಾಕ್ಸ್​​ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕು. ಇದರ ರೋಗ ಲಕ್ಷಣಗಳು ಸ್ಮಾಲ್​ಪಾಕ್ಸ್ ರೋಗಿಗಳಲ್ಲಿ ಕಂಡುಬರುವಂಥವೇ ಆಗಿದೆ. ಮಂಕಿಪಾಕ್ಸ್ ಎಂಬ ವೈರಾಣುವಿನಿಂದ ಈ ರೋಗ ಉಂಟಾಗುತ್ತದೆ. ಈ ರೋಗವು ಸಾಮಾನ್ಯವಾಗಿ ಕೇಂದ್ರ ಮತ್ತು ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಕಂಡುಬರುತ್ತದೆ. ಇತರ ದೇಶಗಳಲ್ಲೂ ಪ್ರಕರಣಗಳು ಪತ್ತೆಯಾಗಿವೆ.

ಇದನ್ನೂ ಓದಿ
Sri Lanka Crisis ಜೀವಭಯದಿಂದ ನೌಕಾನೆಲೆಯಲ್ಲಿ ಆಶ್ರಯ ಪಡೆದ ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಕುಟುಂಬ
ಪೋಲೆಂಡ್​​ನಲ್ಲಿರುವ ರಷ್ಯಾದ ರಾಯಭಾರಿ ಮುಖಕ್ಕೆ ಕೆಂಪು ಬಣ್ಣ ಎರಚಿದ ಯುದ್ಧ ವಿರೋಧಿ ಪ್ರತಿಭಟನಾಕಾರರು
Elon Musk: ತಾಜ್ ಮಹಲ್ ನಿಜಕ್ಕೂ ವಿಶ್ವದ ಅದ್ಭುತ; ತಾಜ್ ಭೇಟಿಯನ್ನು ಮೆಲುಕು ಹಾಕಿದ ಎಲಾನ್ ಮಸ್ಕ್
Viral News: ಕರೆಂಟ್ ಹೋಗಿದ್ದರಿಂದ ಮಂಟಪದಲ್ಲಿ ಮದುಮಗಳೇ ಅದಲು-ಬದಲು; ಮದುವೆಯಾದ ಮೇಲೆ ಸತ್ಯ ಬಯಲು!

ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಮಂಕಿಪಾಕ್ಸ್ ಮೊದಲ ಬಾರಿಗೆ ಪತ್ತೆಯಾಗಿದ್ದು 1958 ರಲ್ಲಿ. ಸಂಶೋಧನೆಗಾಗಿ ಇರಿಸಲಾದ ಮಂಗಗಳಲ್ಲಿ ಪಾಕ್ಸ್ ತರಹದ ಕಾಯಿಲೆಯ ಕಂಡುಬಂದಿದ್ದರಿಂದ ಅದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಯಿತು. ಉಷ್ಣವಲಯದ ಮಳೆಕಾಡುಗಳಲ್ಲಿ ಹೆಚ್ಚಾಗಿ ಪ್ರಕರಣ ಕಂಡುಬರುತ್ತವೆ ಎನ್ನಲಾಗಿದ್ದು, ಅಳಿಲುಗಳು, ಕೆಲವು ಜಾತಿಯ ಇಲಿಗಳು ಹಾಗೂ ಮಂಗಗಳಲ್ಲಿ ಈ ರೋಗ ಪತ್ತೆಯಾಗಿತ್ತು.

ಮಾನವರಲ್ಲಿ ಮೊದಲಿಗೆ ಮಂಕಿಪಾಕ್ಸ್ ಕಾಣಿಸಿಕೊಂಡಿದ್ದು ಯಾವಾಗ?

ಮಾನವರಲ್ಲಿ ಮಂಕಿಪಾಕ್ಸ್ ಎಂಬ ರೋಗವು ಆಫ್ರಿಕಾ ದೇಶಗಳ 11 ಮಂದಿಯಲ್ಲಿ ಕಾಣಿಸಿಕೊಂಡಿದೆ. 1970ರಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿಯಾಗಿತ್ತು. ಬಳಿಕ, 39 ವರ್ಷ ಕಳೆದು, ಅಂದರೆ 2017ರಲ್ಲಿ ನೈಜೀರಿಯಾದಲ್ಲಿ ಮಂಕಿಪಾಕ್ಸ್ ಕೆಲವಾರು ಮಂದಿಯಲ್ಲಿ ಕಾಣಿಸಿಕೊಂಡಿತ್ತು. ಈ ನಡುವೆ, 2003ರಲ್ಲಿ ಯುನೈಟೆಡ್ ಸ್ಟೇಟ್ಸ್​ನಲ್ಲಿ ಕೂಡ ಮಂಕಿಪಾಕ್ಸ್ ವರದಿಯಾಗಿತ್ತು.

ಮಂಕಿಪಾಕ್ಸ್ ಲಕ್ಷಣಗಳೇನು?

ಮಂಕಿಪಾಕ್ಸ್ ಸಿಡುಬಿನ ಮಾದರಿಯ ರೋಗಲಕ್ಷಣ ಹೊಂದಿರುತ್ತವೆ. ಆದರೆ ಅವುಗಳ ತೀವ್ರತೆ ಕಡಿಮೆಯಿರುತ್ತದೆ. ಆರಂಭದಲ್ಲಿ ವೈರಲ್ ಜ್ವರ, ತಲೆನೋವು, ಸ್ನಾಯು ನೋವು, ಬೆನ್ನುನೋವು, ಶೀತ ಮತ್ತು ಬಳಲಿಕೆಗಳು ಇದರ ಲಕ್ಷಣಗಳು. ಸಿಡುಬಿನಂತೆಯೇ ಇದರಲ್ಲೂ ದದ್ದುಗಳು ಕಾಣಿಸಿಕೊಳ್ಳುತ್ತವೆ. ಮುಖದಿಂದ ಆರಂಭವಾಗಿ ದೇಹದ ತುಂಬಾ ಹರಡುವ ಸಾಧ್ಯತೆಗಳು ಇರುತ್ತವೆ.

ಸೋಂಕು ಹೇಗೆ ಹರಡುತ್ತದೆ?

ಸೋಂಕಿತ ರೋಗಿಯೊಂದಿಗೆ ನಿಕಟ ಸಂಪರ್ಕದ ಮೂಲಕ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು. ವೈರಸ್ ದೇಹವನ್ನು ಗಾಯಗೊಂಡ ಚರ್ಮದ ಭಾಗ ಅಥವಾ ಕಣ್ಣು, ಮೂಗು ಅಥವಾ ಬಾಯಿಯ ಮೂಲಕವೂ ಪ್ರವೇಶಿಸಬಹುದು. ಇದು ಮಂಗಗಳು, ಇಲಿಗಳು ಮತ್ತು ಅಳಿಲುಗಳಂತಹ ಸೋಂಕು ತಗುಲುವ ಪ್ರಾಣಿಗಳ ಸಂಪರ್ಕದಿಂದ ಅಥವಾ ಹಾಸಿಗೆ ಮತ್ತು ಬಟ್ಟೆಯಂತಹ ವೈರಸ್ ತುಂಬಿರಬಹುದಾದ ಕಲುಷಿತ ವಸ್ತುಗಳ ಮೂಲಕವೂ ಹರಡಬಹುದು.

ಆದರೆ ಮಂಕಿಪಾಕ್ಸ್ ಸಾಮಾನ್ಯವಾಗಿ ಜನರಿಂದ ಜನರಿಗೆ ಸುಲಭವಾಗಿ ಹರಡುವುದಿಲ್ಲ. ಸಾಮಾನ್ಯ ಜನರಿಗೆ ಒಟ್ಟಾರೆ ಅಪಾಯವು ತುಂಬಾ ಕಡಿಮೆಯಾಗಿರುತ್ತದೆ ಎಂದು ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (ಯುಕೆಎಚ್‌ಎಸ್‌ಎ) ನಲ್ಲಿ ಕ್ಲಿನಿಕಲ್ ಮತ್ತು ಸೋಂಕುಗಳ ವಿಭಾಗದ ನಿರ್ದೇಶಕ ಡಾ ಕಾಲಿನ್ ಬ್ರೌನ್ ಮಾಹಿತಿ ನೀಡಿದ್ದಾರೆ.

ಮಂಕಿಪಾಕ್ಸ್ ರೋಗಕ್ಕೆ ಚಿಕಿತ್ಸೆ ಹೇಗೆ?

ಸಿಡುಬಿಗೆ ನೀಡಲಾಗುವ ಲಸಿಕೆಯೇ ಮಂಕಿಪಾಕ್ಸ್ ವಿರುದ್ಧವೂ ಹೋರಾಡಲು ಸಹಕಾರಿಯಾಗಿದೆ. ಇದು ಶೇ.85ರಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಅದಾಗ್ಯೂ ಮಂಕಿಪಾಕ್ಸ್​​ಗೆ ಯಾವುದೇ ಚಿಕಿತ್ಸೆ ಇಲ್ಲ. ಸೋಂಕು ತಡೆಗಟ್ಟುವಿಕೆಯೇ ನಿಯಂತ್ರಣದ ಕ್ರಮವಾಗಿದೆ.

ಇನ್ನಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ