ಕೊಲಂಬೊ:ಗಾಲೆ ಫೋರ್ಸ್ (Galle Force) ಪ್ರತಿಭಟನಾಕಾರರ ಮೇಲೆ ನಡೆದ ಗುಂಪು ದಾಳಿಯ ಹಿಂದೆ ಆಡಳಿತ ಪಕ್ಷದ ಕೈವಾಡವಿದೆ ಎಂದು ಆರೋಪಿಸಿ ಶ್ರೀಲಂಕಾದ (Srilanka) ಆಡಳಿತ ಪಕ್ಷದ ಹಲವಾರು ಶಾಸಕರ ಮನೆಗಳಿಗೆ ಸರ್ಕಾರ ವಿರೋಧಿ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ. ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹಿಂದಾ ರಾಜಪಕ್ಸೆ(Mahinda Rajapaksa) ಅವರನ್ನು ಬೆಂಬಲಿಸುವ ಗುಂಪುಗಳು ಶಾಂತಿಯುತ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ ನಂತರ ಶ್ರೀಲಂಕಾದಲ್ಲಿ ಹಿಂಸಾಚಾರ ಭುಗಿಲೆದ್ದಿತು.ಆಡಳಿತಾರೂಢ ಸಂಸದ ಸನತ್ ನಿಶಾಂತ ಸೇರಿದಂತೆ ಹಲವು ರಾಜಕಾರಣಿಗಳ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ ಎಂದು ಶ್ರೀಲಂಕಾದ ಸುದ್ದಿ ಸಂಸ್ಥೆ ನ್ಯೂಸ್‌ವೈರ್ ವರದಿ ಮಾಡಿದೆ. ಸುದ್ದಿ ಸಂಸ್ಥೆ ಹಂಚಿಕೊಂಡಿರುವ ವಿಡಿಯೊದಲ್ಲಿ ಮನೆ ಸಂಪೂರ್ಣವಾಗಿ ನಾಶವಾಗಿರುವುದು ಕಾಣುತ್ತದೆ. ಇನ್ನೊಂದು ವಿಡಿಯೊದಲ್ಲಿ ಶ್ರೀಲಂಕಾ ಪೊದುಜನ ಪೆರಮುನ (SLPP) ರಾಜಕಾರಣಿಗಳ ಮನೆಗಳು ಮತ್ತು ವಾಹನಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ರಾಜಪಕ್ಸೆ ಆಡಳಿತ ಪಕ್ಷದ ಶ್ರೀಲಂಕಾ ಸಂಸದ ಅಮರಕೀರ್ತಿ ಅತುಕೋರಾಲ ಮತ್ತು ಅವರ ವೈಯಕ್ತಿಕ ಭದ್ರತಾ ಅಧಿಕಾರಿ ದೇಶದಲ್ಲಿ ಸರ್ಕಾರದ ವಿರೋಧಿ ಮತ್ತು ಪರ ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಸಾವಿಗೀಡಾದ ಬೆನ್ನಲ್ಲೇ ಪ್ರತಿಭಟನೆ ತೀವ್ರವಾಗಿ ಬೆಂಕಿ ಹಚ್ಚಿದ ಘಟನೆಗಳು ವರದಿ ಆಗಿವೆ.
The house of Government MP Sanath Nishantha who led a mob to attack Galle Face protesters completely destroyed pic.twitter.com/p1PpaGOgE2
ಇದನ್ನೂ ಓದಿ— NewsWire ?? (@NewsWireLK) May 9, 2022
Minister Ramesh Pathirana’s house in Galle destroyed pic.twitter.com/jqAXeMqrnX
— NewsWire ?? (@NewsWireLK) May 9, 2022
Minister Ramesh Pathirana House pic.twitter.com/HrWJtElQHI
— Shehan Madawa ?? (@shehanmlive) May 9, 2022
ಕೆಲವು ಗಂಟೆಗಳ ಹಿಂದೆಯಷ್ಟೇ ಸುಮಾರು 20 ವರ್ಷಗಳ ಕಾಲ ಶ್ರೀಲಂಕಾ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿದ್ದ ಮಹಿಂದಾ ರಾಜಪಕ್ಸೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಸ್ತ್ರಸಜ್ಜಿತವಾದ ಸರ್ಕಾರಿ ಬೆಂಬಲಿಗರು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ್ದರಿಂದ ಸಂಸದ ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಈ ಹಿಂಸಾಚಾರದಲ್ಲಿ 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
Published On - 8:53 pm, Mon, 9 May 22