ಇಂಗ್ಲೆಂಡ್​ನಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆ; ಏನಿದು ಹೊಸ ಖಾಯಿಲೆ? ಇಲ್ಲಿದೆ ವಿವರ

TV9kannada Web Team

TV9kannada Web Team | Edited By: ganapathi bhat

Updated on: Jun 12, 2021 | 3:43 PM

ಮಂಕಿಪಾಕ್ಸ್​ಗೆ ನಿಗದಿತ ಚಿಕಿತ್ಸೆ ಇಲ್ಲ. ಆದರೆ, ಚಿಕನ್​ಪಾಕ್ಸ್ ಅಥವಾ ಸ್ಮಾಲ್ ಪಾಕ್ಸ್​ಗೆ ನೀಡುವ ಚಿಕಿತ್ಸೆಗಳನ್ನು ಈ ಸೋಂಕಿಗೂ ನೀಡಲಾಗುತ್ತದೆ. ಸ್ಮಾಲ್​ಪಾಕ್ಸ್​ಗೆ ನೀಡುವ ಲಸಿಕೆ ಮಂಕಿ ಪಾಕ್ಸ್​ಗೆ ಕೂಡ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.

ಇಂಗ್ಲೆಂಡ್​ನಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆ; ಏನಿದು ಹೊಸ ಖಾಯಿಲೆ? ಇಲ್ಲಿದೆ ವಿವರ

ವಿರಳಾತಿ ವಿರಳ ರೋಗ ಒಂದರ ಎರಡು ಪ್ರಕರಣಗಳು ನಾರ್ತ್ ವೇಲ್ಸ್​ನಲ್ಲಿ ಈ ವಾರ ಪತ್ತೆಯಾಗಿದೆ. ಇಲ್ಲಿನ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಒಂದೇ ಮನೆಯ ಇಬ್ಬರಲ್ಲಿ ಸೋಂಕು ಕಂಡುಬಂದಿರುವ ಬಗ್ಗೆ ಮಾಹಿತಿ ಖಚಿತಪಡಿಸಿದ್ದಾರೆ. ಇದೀಗ ಇಂಗ್ಲೆಂಡ್​ನ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೋಗದ ಬಗ್ಗೆ ಅಧ್ಯಯನ ಮತ್ತು ಟ್ರೇಸಿಂಗ್ ಕಾರ್ಯ ನಡೆಯುತ್ತಿದೆ. ಆದರೆ, ಇದರಿಂದ ಜನಸಾಮಾನ್ಯರಿಗೆ ತೊಂದರೆ ಕಡಿಮೆ. ಹಾಗಾಗಿ ಎಲ್ಲರೂ ಭಯಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.

ಮಂಕಿಪಾಕ್ಸ್ ಎಂದರೇನು? ಇದೊಂದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕು ಆಗಿದೆ. ಇದರ ರೋಗ ಲಕ್ಷಣಗಳು ಸ್ಮಾಲ್​ಪಾಕ್ಸ್ ರೋಗಿಗಳಲ್ಲಿ ಕಂಡುಬರುವಂಥವೇ ಆಗಿದೆ. ಮಂಕಿಪಾಕ್ಸ್ ಎಂಬ ವೈರಾಣುವಿನಿಂದ ಈ ರೋಗ ಉಂಟಾಗುತ್ತದೆ. ಈ ರೋಗವು ಸಾಮಾನ್ಯವಾಗಿ ಕೇಂದ್ರ ಮತ್ತು ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಕಂಡುಬರುತ್ತದೆ. ಕೆಲವೊಮ್ಮೆ ಇತರ ದೇಶಗಳಲ್ಲೂ ಕಾಣಬಹುದಾಗಿದೆ.

ತಾಜಾ ಸುದ್ದಿ

ಮಾನವರಲ್ಲಿ ಮಂಕಿಪಾಕ್ಸ್ ಎಂಬ ರೋಗವು ಆಫ್ರಿಕಾ ದೇಶಗಳ 11 ಮಂದಿಯಲ್ಲಿ ಕಾಣಿಸಿಕೊಂಡಿದೆ. 1970ರಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿಯಾಗಿತ್ತು. ಬಳಿಕ, 39 ವರ್ಷ ಕಳೆದು, ಅಂದರೆ 2017ರಲ್ಲಿ ನೈಜೀರಿಯಾದಲ್ಲಿ ಮಂಕಿಪಾಕ್ಸ್ ಕೆಲವಾರು ಮಂದಿಯಲ್ಲಿ ಕಾಣಿಸಿಕೊಂಡಿತ್ತು. ಈ ನಡುವೆ, 2003ರಲ್ಲಿ ಯುನೈಟೆಡ್ ಸ್ಟೇಟ್ಸ್​ನಲ್ಲಿ ಕೂಡ ಮಂಕಿಪಾಕ್ಸ್ ವರದಿಯಾಗಿತ್ತು.

ಮಂಕಿಪಾಕ್ಸ್ ಹೇಗೆ ಹರಡುತ್ತದೆ? ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ, ಮಂಕಿಪಾಕ್ಸ್ ಪ್ರಾಣಿಗಳಿಂದ ನೇರವಾಗಿ ಮನುಷ್ಯರಿಗೆ ಹರಡಬಹುದಷ್ಟೇ. ಪ್ರಾಣಿಗಳ ರಕ್ತ, ಅಥವಾ ಇನ್ನಿತರ ದ್ರವಗಳ ನೇರಸಂಪರ್ಕದಿಂದ ಮಾತ್ರ ಮನುಷ್ಯರಿಗೆ ಹರಡಬಹುದು. ಸರಿಯಾಗಿ ಬೇಯಿಸದೇ ಮಾಂಸ ಸೇವನೆ ಮಾಡಬಹುದು ಕೂಡ ಕಾರಣವಾಗಬಹುದು.

ಮಂಕಿಪಾಕ್ಸ್ ಲಕ್ಷಣಗಳೇನು? ಜ್ವರ, ಅತಿಯಾದ ತಲೆನೋವು, ಗಂಟಲು ನೋವು, ಬೆನ್ನು ನೋವು, ಮಾಂಸಖಂಡಗಳಲ್ಲಿ ನೋವು, ನಿಶ್ಶಕ್ತಿ ಕಂಡುಬರುವುದು ಈ ರೋಗದ ಸಾಮಾನ್ಯ ಲಕ್ಷಣವಾಗಿದೆ. ಈ ಲಕ್ಷಣಗಳು 5 ದಿನಗಳ ವರೆಗೂ ಮುಂದುವರಿಯಬಹುದು.

ಸೋಂಕು ತಗುಲಿ 3 ದಿನಗಳ ನಂತರ ಮೈ ಮೇಲೆ ತುರಿಕೆ ಅಥವಾ ಅಲರ್ಜಿಯಂಥ ಲಕ್ಷಣಗಳು ಕೂಡ ಕಂಡುಬರಬಹುದು. ಜ್ವರವೂ ಜೊತೆಗೇ ಶುರುವಾಗಬಹುದು. ಸೋಂಕಿನಿಂದ ಉಂಟಾಗುವ ಅಲರ್ಜಿಯಿಂದ ಮುಖದ ಮೇಲೆ, ಕೈ ಮತ್ತು ಕಾಲುಗಳಲ್ಲಿ ಹೆಚ್ಚು ಪರಿಣಾಮ ಬೀರಬಹುದು. 4 ವಾರಗಳ ವರೆಗೂ ಈ ಲಕ್ಷಣಗಳು ಕಂಡುಬರುವ ಸಾಧ್ಯತೆ ಇದೆ.

ಮಂಕಿಪಾಕ್ಸ್​ಗೆ ನಿಗದಿತ ಚಿಕಿತ್ಸೆ ಇಲ್ಲ. ಆದರೆ, ಚಿಕನ್​ಪಾಕ್ಸ್ ಅಥವಾ ಸ್ಮಾಲ್ ಪಾಕ್ಸ್​ಗೆ ನೀಡುವ ಚಿಕಿತ್ಸೆಗಳನ್ನು ಈ ಸೋಂಕಿಗೂ ನೀಡಲಾಗುತ್ತದೆ. ಸ್ಮಾಲ್​ಪಾಕ್ಸ್​ಗೆ ನೀಡುವ ಲಸಿಕೆ ಮಂಕಿ ಪಾಕ್ಸ್​ಗೆ ಕೂಡ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Fact Check: ಕೊರೊನಾ ಲಸಿಕೆಯಿಂದ ದೇಹದಲ್ಲಿ ಮ್ಯಾಗ್ನೆಟಿಕ್ ಗುಣ ಉಂಟಾಗುತ್ತದೆಯೇ? ಇಲ್ಲಿದೆ ವಿವರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada