ರಿಯೋ ಡಿ ಜನೈರೊ: ಬ್ರೆಜಿಲ್‌ನಲ್ಲಿ 41 ವರ್ಷದ ವ್ಯಕ್ತಿಯೊಬ್ಬ ಮಂಕಿಪಾಕ್ಸ್‌ನಿಂದ ಸಾವನ್ನಪ್ಪಿದ್ದು, ಆಫ್ರಿಕಾದ ಹೊರಭಾಗದಲ್ಲಿ ಮಂಕಿಪಾಕ್ಸ್‌ನಿಂದ ಸಾವನ್ನಪ್ಪಿದ ಮೊದಲ ವ್ಯಕ್ತಿಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಗಂಭೀರ ರೋಗನಿರೋಧಕ ವ್ಯವಸ್ಥೆಯ ಸಮಸ್ಯೆಗಳನ್ನು ಹೊಂದಿರುವ ವ್ಯಕ್ತಿ ಎಂದು ಸ್ಥಳೀಯ ಮಾಧ್ಯಮಗಳು ಹೇಳಿದ್ದು, ಆಗ್ನೇಯ ಮಿನಾಸ್ ಗೆರೈಸ್ ರಾಜ್ಯದ ರಾಜಧಾನಿ ಬೆಲೊ ಹಾರಿಜಾಂಟೆನಲ್ಲಿ ನಿಧನರಾಗಿದ್ದಾರೆ. ತುಂಬಾ ಗಂಭೀರ ಪರಿಸ್ಥಿತಿಗಳಿಯಲ್ಲಿದ್ದ ವ್ಯಲ್ತಿಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ರಾಜ್ಯ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಬ್ರೆಜಿಲ್‌ನ ಆರೋಗ್ಯ ಸಚಿವಾಲಯವು ಸುಮಾರು 1,000 ಮಂಕಿಪಾಕ್ಸ್ ಪ್ರಕರಣಗಳನ್ನು ದಾಖಲಿಸಿದೆ, ಹೆಚ್ಚಾಗಿ ಸಾವೊ ಪಾಲೊ ಮತ್ತು ರಿಯೊ ಡಿ ಜನೈರೊ ರಾಜ್ಯಗಳಲ್ಲಿ ಕಂಡು ಬಂದಿದೆ. ಮೊದಲ ಪ್ರಕರಣ ಜೂನ್ 10 ರಂದು ಯುರೋಪ್ಗೆ ಪ್ರಯಾಣಿಸಿದ ವ್ಯಕ್ತಿಯಲ್ಲಿ ಪತ್ತೆಯಾಗಿದೆ.
ರೋಗದ ಆರಂಭಿಕವಾಗಿ ಅಧಿಕ ಜ್ವರ, ಊದಿಕೊಂಡ ದುಗ್ಧರಸ ಗ್ರಂಥಿಗಳು ಮತ್ತು ಚಿಕನ್ಪಾಕ್ಸ್ ನಂತಹ ಲಕ್ಷಣಗಳು ಕಂಡು ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕಳೆದ ಶನಿವಾರ ಮಂಕಿಪಾಕ್ಸ್ ಏಕಾಏಕಿ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತು. WHO ಪ್ರಕಾರ, ಮೇ ಆರಂಭದಿಂದ ಆಫ್ರಿಕಾದ ಹೊರಗೆ ಪ್ರಪಂಚದಾದ್ಯಂತ 18,000 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.
Published On - 9:53 am, Sat, 30 July 22