ಈ ಮಹಿಳೆ ತನ್ನ ಶಿಶುವಿಹಾರದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವನೆಂದು ಆರೋಪಿಸಿ ಗಂಡನ ಮೇಲೆಯೇ ಗುಂಡು ಹಾರಿಸಿದಳು!
ವಾಷಿಂಗ್ಟನ್ ನಗರದ ನೈರುತ್ಯ ಭಾಗಕ್ಕಿರುವ ಮ್ಯಾಂಡರೀನ್ ಓರಿಯೆಂಟಲ್ ಹೋಟೆಲ್ ನ ರೂಮೊಂದರಲ್ಲಿ ದಂಪತಿ ತಂಗಿದ್ದಾಗ ಅವರ ನಡುವೆ ಜಗಳ ಶುರುವಾಗಿ ಶಂಟೆರಿ ತನ್ನ ಪತಿಯ ಮೇಲೆ ಗುಂಡು ಹಾರಿಸಿದ್ದಾರೆ.
ವಾಷಿಂಗ್ಟನ್: ತಾನು ನಡೆಸುತ್ತಿರುವ ಡೇ ಕೇರ್ ಸೆಂಟರ್ ನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅರೋಪದಲ್ಲಿ ಅದರ ಒಡತಿಯೊಬ್ಬರು ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ತನ್ನ ಪತಿಯ ಮೇಲೆ ಗುಂಡು ಹಾರಿಸಿದ ಘಟನೆಯೊಂದನ್ನು ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ. 57-ವರ್ಷ-ವಯಸ್ಸಿನ ಜೇಮ್ಸ್ ವೀಮ್ಸ್ ಜ್ಯೂನಿಯರ್ ಮೇಲೆ ಅವರ ಪತ್ನಿ 50-ವರ್ಷ-ವಯಸ್ಸಿನ ಶಂಟೆರಿ ವೀಮ್ಸ್ ಗುಂಡು ಹಾರಿಸಿದ್ದಾರೆ.
ವಾಷಿಂಗ್ಟನ್ ನಗರದ ನೈರುತ್ಯ ಭಾಗಕ್ಕಿರುವ ಮ್ಯಾಂಡರೀನ್ ಓರಿಯೆಂಟಲ್ ಹೋಟೆಲ್ ನ ರೂಮೊಂದರಲ್ಲಿ ದಂಪತಿ ತಂಗಿದ್ದಾಗ ಅವರ ನಡುವೆ ಜಗಳ ಶುರುವಾಗಿ ಶಂಟೆರಿ ತನ್ನ ಪತಿಯ ಮೇಲೆ ಗುಂಡು ಹಾರಿಸಿದ್ದಾರೆ.
ಬಾಲ್ಟಿಮೋರ್ ಕೌಂಟಿಯಲ್ಲಿ ಶಂಟೆರಿ ಲಿಟ್ಲ್ ಕಿಡ್ಸ್ ಕ್ಯಾಸಲ್ ಹೆಸರಿನ ಶಿಶುವಿಹಾರ ನಡೆಸುತ್ತಾರೆ.
ವೀಮ್ಸ್ರನ್ನು ಬಂಧಿಸಲು ಪೊಲೀಸರು ನ್ಯಾಯಾಲಯದಿಂದ ವಾರಂಟ್ ಪಡೆದುಕೊಂಡಿದ್ದಾರೆ. ಕನಿಷ್ಟ ಮೂರು ಮಕ್ಕಳನ್ನೊಳಗೊಂಡಿರುವ 13 ಲೈಂಗಿಕ ಅಪರಾಧಗಳ ದೋಷಾರೋಪಣೆಯನ್ನು ಅವರ ವಿರುದ್ಧ ದಾಖಲಿಸಲಾಗಿದೆ. ಇದರಲ್ಲಿ ಎರಡು ಅಪರಾಧಗಳು ಮೂರನೇ-ಡಿಗ್ರಿ ಲೈಂಗಿಕ ಹಲ್ಲೆ ಮತ್ತು ಮೂರು ಎರಡನೇ-ಡಿಗ್ರಿ ಹಲ್ಲೆಗಳು ಸೇರಿವೆ.
ಎರಡು ಗುಂಡೇಟು ತಿಂದಿರುವ ವೀಮ್ಸ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರ ಜೀವಕ್ಕೇನೂ ಅಪಾಯವಿಲ್ಲ ಎಂದು ಹೇಳಲಾಗುತ್ತಿದೆ. ಮೇರಿಲ್ಯಾಂಡನಲ್ಲಿ ವೀಮ್ಸ್ ಒಬ್ಬ ಪಲಾಯನಗೈದಿರುವ ಅಪರಾಧಿ ಅಂತ ಘೋಷಣೆಯಾಗಿರುವುದರಿಂದ ಅವರನ್ನಿಟ್ಟಿರುವ ಕೋಣೆಯ ಹೊರಗೆ ಕಾವಲುಗಾರರನ್ನು ನಿಯೋಜಿಸಲಾಗಿದೆ.
ಡೈಲಿ ಬೀಸ್ಟ್ ಪತ್ರಿಕೆಯ ವರದಿಯೊಂದರ ಪ್ರಕಾರ ಶಂಟೆರಿ ವಿರುದ್ಧ ಹತ್ಯೆ ಉದ್ದೇಶದ ಹಲ್ಲೆ ಆಯುಧಗಳಿಗೆ ಸಂಬಂಧಿಸಿದ ದೋಷಾರೋಪಣೆ ಮಾಡಲಾಗಿದೆ. ಅವರಿದ್ದ ಹೋಟೆಲ್ ರೂಮಿನಲ್ಲಿ ನೋಟ್ ಬುಕ್ಕೊಂದು ಪತ್ತೆಯಾಗಿದ್ದು ಅದರಲ್ಲಿ ಹೇಗೆ ವ್ಯಕ್ತಿಯೊಬ್ಬನಿಗೆ ಹೇಗೆ ಗುಂಡು ಹಾರಿಸಿ ಊನಗೊಳಿಸಬಹುದು ಆದರೆ ಸಾಯಬಾರದು ಎನ್ನುವುದರ ವಿವರಣೆ ಇದೆ, ಎಂದು ಪತ್ರಿಕೆ ವರದಿ ಮಾಡಿದೆ.
ಅದೇ ಪುಸ್ತಕದಲ್ಲಿ ಈ ಮಕ್ಕಳಿಗೆ ನ್ಯಾಯ ಒದಗಿಸಿಕೊಡಬೇಕಿದೆ ಅಂತ ಕೂಡ ನಮೂದಿಸಲಾಗಿದೆ.
ಜುಲೈ 21 ರಂದು ಪೊಲೀಸರು ಮ್ಯಾಂಡರೀನ್ ಓರಿಯೆಂಟಲ್ ಹೋಟಲ್ ತಲುಪಿದಾಗ ಶಂಟೆರಿ ಸುಮಾರಿ ಒಂದು ಗಂಟೆಯವರಗೆ ರೂಮಿನ ಬಾಗಿಲು ತೆರೆದಿರಲಿಲ್ಲ.
ತಾನು ನಿರ್ದೋಷಿ ಅಂತ ಹೇಳುತ್ತಿರುವ ಶಂಟೆರಿ ಶುಕ್ರವಾರದಂದು ಡಿಸಿ ಸುಪೀರಿಯರ್ ಕೋರ್ಟ್ನಲ್ಲಿ ಪ್ರಾಥಮಿಕ ಹಂತದ ವಿಚಾರಣೆಗೆ ಹಾಜರಾಗಲಿದ್ದಾರೆ.