ಕಡಲ ತೀರದಲ್ಲಿ ಸಿಕ್ಕಿತು ಊಹೆಗೂ ನಿಲುಕದಷ್ಟು ನಿಗೂಢ ಚಿನ್ನ

ಈ ಚಿನ್ನವನ್ನು ಗ್ರಾಮಸ್ಥರು ಆರ್ಥಿಕ ಸಂಕಷ್ಟವನ್ನು ದೂರ ಮಾಡಿಕೊಳ್ಳಲು ಬಳಸುತ್ತಿದ್ದಾರೆ. ಸಿಕ್ಕ ಚಿನ್ನದ ತುಣುಕುಗಳನ್ನು 1500 ಡಾಲರ್​ಗಳಿಗೆ ಮಾರಾಟ ಮಾಡಿ ಆಹಾರ ಖರೀದಿಸುತ್ತಿದ್ದಾರೆ.

ಕಡಲ ತೀರದಲ್ಲಿ ಸಿಕ್ಕಿತು ಊಹೆಗೂ ನಿಲುಕದಷ್ಟು ನಿಗೂಢ ಚಿನ್ನ
ಸಾಂದರ್ಭಿಕ ಚಿತ್ರ
Follow us
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 14, 2020 | 7:19 PM

ಕಾರಕಸ್: ದೀರ್ಘಕಾಲದ ಆರ್ಥಿಕ ಬಿಕ್ಕಟ್ಟು ಮತ್ತು ಕೋವಿಡ್-19ರ ಪರಿಣಾಮಗಳಿಂದ ಬಳಲುತ್ತಿರುವ ವೆನುಜುವೆಲಾ ದೇಶಕ್ಕೆ ಅದೃಷ್ಟ ಒಲಿದಿದೆಸಮುದ್ರ ತೀರದಲ್ಲಿ ಮೀನುಗಳನ್ನು ಅರಸಿ ಹೋದವರಿಗೆ ಸಿಕ್ಕಿದ್ದು ನಿಗೂಢ ಚಿನ್ನ.

25ರ ಹರೆಯದ ಯೋಹನ್ ಲಾರೆಸ್ ಸೆಪ್ಟೆಂಬರ್​ನಲ್ಲಿ ಗುವಕಾದ ಕಡಲ ತೀರದಲ್ಲಿ ಮೀನು ಹಿಡಿಯಲು ಹೋದಾಗ ಏನೋ ಹೊಳೆಯುವ ಹಾಗೆ ಕಂಡಿದೆ. ಏನಿರಬಹುದು ಎಂಬ ಕುತೂಹಲದಿಂದ ಆತ ಹತ್ತಿರ ಹೋದಾಗ ಅವನ ಕಣ್ಣಿಗೆ ಚಿನ್ನದ ಪದಕ ಮತ್ತು ವರ್ಜಿನ್ ಮೇರಿಯ ಚಿತ್ರಗಳು ಕಂಡಿದೆ.

ಈ ಆವಿಷ್ಕಾರದ ಬಗ್ಗೆ ಮೊದಲು ತನ್ನ ಮಾವನಲ್ಲಿ ಲಾರೆಸ್ ಹೇಳಿಕೊಂಡಿದ್ದು. ಆ ಮೂಲಕ ಅಲ್ಲಿನ ಸುಮಾರು 2000 ಗ್ರಾಮಸ್ಥರಿಗೆ ಈ ವಿಷಯ ತಲುಪಿದೆ. ವಿಷಯ ತಿಳಿದ ದಿನದಿಂದ ಜನರು ನಿರಂತರವಾಗಿ ನಿಧಿಯ ಹುಡುಕಾಟದಲ್ಲಿದ್ದು, ಚಿನ್ನದ ಉಂಗುರಗಳನ್ನು ಹುಡುಕಿ ತೆಗೆಯುತ್ತಿದ್ದಾರೆ.

ಈ ಚಿನ್ನವನ್ನು ಗ್ರಾಮಸ್ಥರು ಆರ್ಥಿಕ ಸಂಕಷ್ಟವನ್ನು ದೂರ ಮಾಡಿಕೊಳ್ಳಲು ಬಳಸುತ್ತಿದ್ದಾರೆ. ಸಿಕ್ಕ ಚಿನ್ನದ ತುಣುಕುಗಳನ್ನು 1500 ಡಾಲರ್​ಗಳಿಗೆ ಮಾರಾಟ ಮಾಡಿ ಆಹಾರ ಖರೀದಿಸುತ್ತಿದ್ದಾರೆ.

ಈ ಚಿನ್ನ ಎಲ್ಲಿಂದ ಬರುತ್ತಿದೆ ಎಂಬ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಕಡಲುಗಳ್ಳರ ಮುಳುಗಿದ ಹಡಗುಗಳಿಂದ ಈ ರೀತಿಯ ಚಿನ್ನಗಳು ಸಿಗುತ್ತಲಿದೆ ಎಂದು ಕೆಲವರು ಊಹಿಸಿದ್ದಾರೆ. ಆದರೆ ತಜ್ಞರು ಮಾತ್ರ, ಈ ಆಭರಣಗಳು ಅಷ್ಟು ಹಳೆಯವಲ್ಲ. ಯೂರೋಪ್ ಮೂಲದ ಈ ಚಿನ್ನ ಈಚಿನ ದಿನಗಳದ್ದು ಎಂದು ಹೇಳಿದ್ದಾರೆ.

‘ಚಿನ್ನ’ ತಂದ ನೀವಾರ್​ ಚಂಡಮಾರುತ; ಸಮುದ್ರ ತೀರಕ್ಕೆ ಮೀನುಗಾರರು ದೌಡು

ಮಣ್ಣಿನಲ್ಲಿ ಹೂತು ಹೋಗಿದ್ದ ಮಡಿಕೆಯಲ್ಲಿತ್ತು ಗತಕಾಲದ ನೂರಾರು ಚಿನ್ನದ ನಾಣ್ಯಗಳು

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್