Nepal Helicopter Crash: ನೇಪಾಳದ ನುವಾಕೋಟ್‌ನಲ್ಲಿ ಹೆಲಿಕಾಪ್ಟರ್ ಪತನ; 5 ಜನ ಸಾವು

|

Updated on: Aug 07, 2024 | 4:37 PM

ಹೆಲಿಕಾಪ್ಟರ್ ನೇಪಾಳದ ಕಠ್ಮಂಡುವಿನಿಂದ ರಾಸುವಾಗೆ ತೆರಳುತ್ತಿದ್ದಾಗ ನುವಾಕೋಟ್ ಜಿಲ್ಲೆಯ ಸೂರ್ಯ ಚೌರ್ -7ನಲ್ಲಿ ಬೆಟ್ಟಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ 5 ಜನರು ಸಾವನ್ನಪ್ಪಿದ್ದಾರೆ.

Nepal Helicopter Crash: ನೇಪಾಳದ ನುವಾಕೋಟ್‌ನಲ್ಲಿ ಹೆಲಿಕಾಪ್ಟರ್ ಪತನ; 5 ಜನ ಸಾವು
ಸಾಂದರ್ಭಿಕ ಚಿತ್ರ
Follow us on

ಕಠ್ಮಂಡು: ಇಂದು (ಬುಧವಾರ) ಮಧ್ಯಾಹ್ನ ನುವಾಕೋಟ್‌ನ ಶಿವಪುರಿ ಪ್ರದೇಶದಲ್ಲಿ ಏರ್ ಡೈನಾಸ್ಟಿಯ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ದುರಂತದಲ್ಲಿ ಒಟ್ಟು ಐವರು ಸಾವನ್ನಪ್ಪಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಹೆಲಿಕಾಪ್ಟರ್ ಕಠ್ಮಂಡುವಿನಿಂದ ರಾಸುವಾಗೆ ತೆರಳುತ್ತಿದ್ದಾಗ ನುವಾಕೋಟ್ ಜಿಲ್ಲೆಯ ಸೂರ್ಯ ಚೌರ್ -7ನಲ್ಲಿ ಬೆಟ್ಟಕ್ಕೆ ಡಿಕ್ಕಿ ಹೊಡೆದಿದೆ.

ಈ ಅಪಘಾತದ ಬಗ್ಗೆ ಮಾಹಿತಿ ಪಡೆದ ಕೂಡಲೇ ಅಧಿಕಾರಿಗಳು ರಕ್ಷಣಾ ತಂಡವನ್ನು ಸ್ಥಳಕ್ಕೆ ರವಾನಿಸಿದರು. ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಟಿಐಎ) ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮವು ಹೆಲಿಕಾಪ್ಟರ್ ಮಧ್ಯಾಹ್ನ 1.54ಕ್ಕೆ ಕಠ್ಮಂಡುವಿನಿಂದ ಹೊರಟಿತ್ತು ಎಂದು ಹೇಳಿದೆ. ಸೂರ್ಯ ಚೌರ್ ತಲುಪಿದ ನಂತರ ಹೆಲಿಕಾಪ್ಟರ್ ಅಧಿಕಾರಿಗಳೊಂದಿಗೆ ಸಂಪರ್ಕ ಕಳೆದುಕೊಂಡಿತು.

ಇದನ್ನೂ ಓದಿ: Viral Video: ನದಿಯಂತಾದ ಜೈಪುರ ವಿಮಾನ ನಿಲ್ದಾಣ; ಲಗೇಜ್ ಟ್ರಾಲಿ ಮೇಲೆ ನಿಂತ ಪೈಲಟ್ ವಿಡಿಯೋ ವೈರಲ್

ಹೆಲಿಕಾಪ್ಟರ್ ಕಠ್ಮಂಡುವಿನಿಂದ ಹೊರಟು ಸೈಫ್ರುಬೆನ್ಸಿಗೆ ತೆರಳುತ್ತಿತ್ತು. ಟೇಕಾಫ್ ಆದ ಮೂರು ನಿಮಿಷಗಳ ನಂತರ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿತು ಎನ್ನಲಾಗಿದೆ. ಈ ಹೆಲಿಕಾಪ್ಟರ್ ಅನ್ನು ಹಿರಿಯ ಕ್ಯಾಪ್ಟನ್ ಅರುಣ್ ಮಲ್ಲಾ ಅವರು ಪೈಲಟ್ ಮಾಡುತ್ತಿದ್ದರು.


ಹೆಲಿಕಾಪ್ಟರ್ ಟೇಕಾಫ್ ಆಗುವಾಗ ಅದರಲ್ಲಿ ನಾಲ್ವರು ಚೀನಾದ ಪ್ರಜೆಗಳು ಮತ್ತು ಪೈಲಟ್ ಸೇರಿದಂತೆ ಒಟ್ಟು 5 ಮಂದಿ ಇದ್ದರು. ಚೀನಾದ ಪ್ರಜೆಗಳು ರಾಸುವಾಗೆ ತೆರಳುತ್ತಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ರಾಸುವಾಗೆ ಹಾರುತ್ತಿದ್ದ ನಾಲ್ಕು ಚೀನೀ ಪ್ರಜೆಗಳು ಸೇರಿದಂತೆ ಐದು ವ್ಯಕ್ತಿಗಳು ರಾಸುವಾಗೆ ಹೋಗುವ ಹೆಲಿಕಾಪ್ಟರ್‌ನಲ್ಲಿದ್ದರು.

ಇದನ್ನೂ ಓದಿ: Kolkata Airport: ಭಾರೀ ಮಳೆಗೆ ಕೊಲ್ಕತ್ತಾ ವಿಮಾನ ನಿಲ್ದಾಣದ ರನ್‌ವೇ ಜಲಾವೃತ

ಜುಲೈ 24ರಂದು ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಪತನಗೊಂಡು 18 ಜನರು ಸಾವನ್ನಪ್ಪಿದ ಬೆನ್ನಲ್ಲೇ ಈ ದುರಂತ ಸಂಭವಿಸಿದೆ. ಕಳಪೆ ನಿರ್ವಹಣೆಯಿಂದಾಗಿ ನೇಪಾಳದಲ್ಲಿ ವಿಮಾನ ಅಪಘಾತಗಳು ಹೆಚ್ಚು ಸಾಮಾನ್ಯವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:34 pm, Wed, 7 August 24