Kolkata Airport: ಭಾರೀ ಮಳೆಗೆ ಕೊಲ್ಕತ್ತಾ ವಿಮಾನ ನಿಲ್ದಾಣದ ರನ್‌ವೇ ಜಲಾವೃತ

ಭಾರೀ ಮಳೆಯಿಂದಾಗಿ ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಇಂದು ನದಿಯಂತೆ ನೀರು ಹರಿಯುತ್ತಿತ್ತು. ಸಂಪೂರ್ಣವಾಗಿ ಜಲಾವೃತವಾಗಿದ್ದ ರನ್​​ವೇಯಲ್ಲಿ ವಿಮಾನ ಸಂಚರಿಸಲಾಗದೆ ವಿಮಾನವನ್ನು ಬೇರೆಡೆ ಪಾರ್ಕ್ ಮಾಡಲಾಗಿತ್ತು.

Kolkata Airport: ಭಾರೀ ಮಳೆಗೆ ಕೊಲ್ಕತ್ತಾ ವಿಮಾನ ನಿಲ್ದಾಣದ ರನ್‌ವೇ ಜಲಾವೃತ
|

Updated on: Aug 03, 2024 | 8:40 PM

ಕೊಲ್ಕತ್ತಾ: ಭಾರೀ ಮಳೆಯಿಂದಾಗಿ ಕೊಲ್ಕತ್ತಾ, ಹೌರಾ, ಸಾಲ್ಟ್ ಲೇಕ್ ಮತ್ತು ಬ್ಯಾರಕ್‌ಪುರದಲ್ಲಿ ಜಲಾವೃತವಾಗಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ವಿಮಾನ ನಿಲ್ದಾಣ ಕೂಡ ಕೆರೆಯಂತಾಗಿತ್ತು. ವಿಮಾನ ನಿಲ್ದಾಣದ ದೃಶ್ಯಾವಳಿಗಳು ರನ್‌ವೇ ಮತ್ತು ಟ್ಯಾಕ್ಸಿವೇಗಳು ಪ್ರವಾಹಕ್ಕೆ ಸಿಲುಕಿರುವುದನ್ನು ತೋರಿಸುತ್ತದೆ. ಮಳೆಯಿಂದಾಗಿ ಕೆಲಕಾಲ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾದರೂ ಬಳಿಕ ವಿಮಾನಗಳ ಹಾರಾಟ ಸುಗಮವಾಗಿ ಸಾಗುತ್ತಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us