Viral Video: ನದಿಯಂತಾದ ಜೈಪುರ ವಿಮಾನ ನಿಲ್ದಾಣ; ಲಗೇಜ್ ಟ್ರಾಲಿ ಮೇಲೆ ನಿಂತ ಪೈಲಟ್ ವಿಡಿಯೋ ವೈರಲ್
Jaipur Flood: ರಾಜಸ್ಥಾನದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಜೈಪುರ ಏರ್ಪೋರ್ಟ್ ಅಕ್ಷರಶಃ ನದಿಯಂತಾಗಿದೆ. ವಿಮಾನ ನಿಲ್ದಾಣದ ಹೊರಗೆ ಮತ್ತು ಒಳಗೆ ಕೆಂಪನೆಯ ಮಳೆನೀರು ಹರಿಯುತ್ತಿದೆ. ಈ ಪ್ರವಾಹದ ನಡುವೆ ಪೈಲಟ್ ಲಗೇಜ್ ಟ್ರಾಲಿಯಲ್ಲಿ ಜೈಪುರ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿರುವ ವಿಡಿಯೋ ವೈರಲ್ ಆಗಿದೆ.
ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಭಾರೀ ಮಳೆಯಿಂದ ವಿಮಾನ ನಿಲ್ದಾಣದೊಳಗೆ ನೀರು ನುಗ್ಗಿದೆ. ಇದರಿಂದ ವಿಮಾನಗಳ ಸಂಚಾರ ವ್ಯತ್ಯಯವಾಗಿದ್ದು, ಮಳೆಯ ನೀರು ತುಂಬಿದ ಏರ್ಪೋರ್ಟ್ ಒಳಗೆ ಕೂರಲಾಗದೆ, ನಿಲ್ಲಲಾಗದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಈ ವೇಳೆ ವಿಮಾನದ ಪೈಲಟ್ ಕೂಡ ಲಗೇಜ್ ಟ್ರಾಲಿಯ ಮೇಲೆ ನಿಂತು ವಿಮಾನ ನಿಲ್ದಾಣದ ಒಳಗೆ ದಾಟಿರುವ ವಿಡಿಯೋ ವೈರಲ್ ಆಗಿದೆ.
ಜೈಪುರದಲ್ಲಿ ಇಂದು ಭಾರೀ ಮಳೆಯಾಗಿದ್ದು, ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಜೆಐಎ) ಸೇರಿದಂತೆ ಹಲವು ಭಾಗಗಳು ಜಲಾವೃತಗೊಂಡಿದೆ. ಇದರಿಂದ ಮಳೆಯಲ್ಲಿ ಜನರು ಸಿಲುಕಿಕೊಂಡಿದ್ದಾರೆ. ಮಳೆಯ ನಡುವೆ, ಪೈಲಟ್ ಒಬ್ಬರು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಪೈಲಟ್ ನೀರು ತುಂಬಿದ ಹೊರಭಾಗದಲ್ಲಿ ಟ್ರಾಲಿಯ ಸಹಾಯದಿಂದ ದಾಟಿದ್ದಾರೆ. ಲಗೇಜ್ ಟ್ರಾಲಿ ಮೇಲೆ ನಿಂತ ಅವರನ್ನು ವಿಮಾನ ನಿಲ್ದಾಣದ ಸಿಬ್ಬಂದಿ ತಳ್ಳಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: Viral Video: ವ್ಯಕ್ತಿಯ ಕುತ್ತಿಗೆಗೆ ಸುತ್ತಿಕೊಂಡು ನುಂಗಲೆತ್ನಿಸಿದ 15 ಅಡಿ ಉದ್ದದ ಹೆಬ್ಬಾವು; ಶಾಕಿಂಗ್ ವಿಡಿಯೋ ವೈರಲ್
This Your Captain Arriving from Trolly #JaipurAirport
— Adil (@_Adil_Waseem) August 1, 2024
“ಇದು ಜೈಪುರ ಅದಾನಿ ವಿಮಾನ ನಿಲ್ದಾಣ. ಇಲ್ಲಿ ಪೈಲಟ್‌ಗಳು ವಿಮಾನ ಹತ್ತುವ ಮುನ್ನವೇ ಹಾರುತ್ತಾರೆ. ಟ್ರಾಲಿಯೇ ಅವರಿಗೆ ಹಾರಲು ಸಾಕು” ಎಂದು ಎಕ್ಸ್ ಬಳಕೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ.
Thank you @AdaniOnline @jeet_adani1 @gautam_adani for the free open swimming pool facility at @Jaipur_Airport -took just 2 hours of rain to fill this!
Gratitude to @AAI_Official to privatise our airport for such facilities! This is exactly what we pay taxes for!#Jaipur #Rain pic.twitter.com/78VzFcmvGg
— Gaurav Kheterpal (@gauravkheterpal) August 1, 2024
ಈ ವೀಡಿಯೊವನ್ನು ಇಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಇದು 7,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ