AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಎಂದಾದರೂ ಚಾಕೊಲೇಟ್ ವಡಾಪಾವ್ ತಿಂದಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ

ಸದ್ಯ ಚಾಕೊಲೇಟ್ ವಡಾಪಾವ್​​ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ವಿಡಿಯೋದಲ್ಲಿ ಯುವತಿ ಗುಲ್ಕಂಡ್, ಚಾಕೊಲೇಟ್, ಚೆರ್ರಿ ಮತ್ತು ಚಾಕೊಲೇಟ್ ಸಿರಪ್ ಬಳಸಿ ವಡಾಪಾವ್ ತಯಾರಿಸುತ್ತಿರುವುದನ್ನು ಕಾಣಬಹುದು. ವಿಡಿಯೋ ಇಲ್ಲಿದೆ ನೋಡಿ.

Video Viral: ಎಂದಾದರೂ ಚಾಕೊಲೇಟ್ ವಡಾಪಾವ್ ತಿಂದಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ
Chocolate Pan Vada Pav
ಅಕ್ಷತಾ ವರ್ಕಾಡಿ
|

Updated on: Aug 01, 2024 | 5:39 PM

Share

ಮಳೆಗೆ ಏನಾದರೂ ಬಿಸಿ ಬಿಸಿ ತಿನ್ನಬೇಕು ಎಂದೆನಿಸಿದಾಗ ಮೊದಲು ತಲೆಗೆ ಬರುವುದೇ ಬೊಂಡಾ, ಬಜ್ಜಿ,ವಡಾಪಾವ್ ಮುಂತಾದ ಚಾಟ್ಸ್​​​. ಮಸಾಲೆ ಭರಿತ ವಡಾವಾಪ್​​​ ಸಾಮಾನ್ಯವಾಗಿ ನೀವು ತಿಂದಿರುತ್ತೀರಿ. ಆದರೆ ಎಂದಾದರೂ ಚಾಕೊಲೇಟ್ ವಡಾಪಾವ್ ತಿಂದಿದ್ದೀರಾ? ಒಂದು ಕ್ಷಣ ನಿಮಗೆ ಶಾಕ್​​​ ಆಗುವುದು ಖಂಡಿತಾ. ಸದ್ಯ ಚಾಕೊಲೇಟ್ ವಡಾಪಾವ್​​ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದ್ದು, ವಡಾಪಾವ್ ಪ್ರಿಯರು ಕಾಮೆಂಟ್​​ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ವಡಾಪಾವ್ ಎಂಬ ಹೆಸರು ಕೇಳಿದಾಗ ಮಸಾಲೆಯುಕ್ತ ಖಾದ್ಯದ ರುಚಿ ಮನಸ್ಸಿಗೆ ಬರುತ್ತದೆ. ಆದರೆ ಈಗ ಚಾಕೊಲೇಟ್‌ನಿಂದ ಮಾಡಿದ ವಡಾಪಾವ್ ಪ್ರಯೋಗವನ್ನು ಸ್ಟ್ರೀಟ್ ಫುಡ್ ವಿಡಿಯೋ ಮೂಲಕ ಜನಪ್ರಿಯ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ಯುವತಿಯೊಬ್ಬಳು ರಸ್ತೆಬದಿಯಲ್ಲಿ ಚಾಕೊಲೇಟ್‌ ವಡಾಪಾವ್ ಮಾರಾಟ ಮಾಡುತ್ತಿದ್ದಾಳೆ. ವಿಡಿಯೋದ ಆರಂಭದಲ್ಲಿ ಈ ರೀತಿಯ ವಡಾಪಾವ್ ದೆಹಲಿಯಲ್ಲಿ ಎಲ್ಲಿಯೂ ಇಲ್ಲ, ನಾನು ಸಿಹಿ ವಡಾಪಾವ್ ನೀಡಲು ಇಷ್ಟ ಪಡುತ್ತೇನೆ. ಇದರ ಹೆಸರು ಚಾಕೊಲೇಟ್ ಪಾನ್ ವಡಾಪಾವ್ ಎಂದು ಯುವತಿ ಹೇಳಿರುವುದನ್ನು ಕಾಣಬಹುದು. ಅಷ್ಟೇ ಅಲ್ಲ. ಈ ಚಾಕೊಲೇಟ್ ವಡಾಪಾವ್ ಮಾಡುವ ವಿಧಾನವನ್ನು ವೀಡಿಯೊದಲ್ಲಿ ಸ್ಪಷ್ಟವಾಗಿ ತೋರಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by Foodie Rana (@foodie_rana_)

ಇದನ್ನೂ ಓದಿ: ಭಾರತೀಯ ಸಂಸ್ಕ್ರತಿ ಮರೆಯದ ಅಂಬಾನಿ ಸೊಸೆ; ಪ್ಯಾರಿಸ್‌ನಲ್ಲೂ ಕರಿಮಣಿ ತೊಟ್ಟು ಬಂದ ರಾಧಿಕಾ ಮರ್ಚೆಂಟ್

foodie_rana_ ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇಲ್ಲಿಯವರೆಗೆ 4ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ಯುವತಿ ಗುಲ್ಕಂಡ್, ಚಾಕೊಲೇಟ್, ಚೆರ್ರಿಗಳು ಮತ್ತು ಚಾಕೊಲೇಟ್ ಸಿರಪ್ ಬಳಸಿ ವಡಾಪಾವ್ ತಯಾರಿಸುತ್ತಿರುವುದನ್ನು ಕಾಣಬಹುದು. ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು “ಆಹಾರದಲ್ಲಿ ಇಂತಹ ಪ್ರಯೋಗ ಬೇಡ” ಎಂದು ಕಾಮೆಂಟ್​ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ