Video: ಅರರೇ… ಹಾವಿಗೂ ರೊಮ್ಯಾಂಟಿಕ್ ಲಿಪ್ ಕಿಸ್ ಕೊಟ್ಟ ಯುವಕ
ಹಾವುಗಳೆಂದರೆ ಯಾರಿಗೆ ತಾನೇ ಭಯವಾಗೊದಿಲ್ಲ ಹೇಳಿ. ಬಹುತೇಕ ಎಲ್ಲರೂ ಒಂದು ಸಣ್ಣ ಹಾವನ್ನು ಕಂಡರೂ ಬೆಚ್ಚಿ ಬಿದ್ದು ಓಡಿ ಹೋಗ್ತಾರೆ. ಆದ್ರೆ ಇಲ್ಲೊಬ್ಬ ಭೂಪ ನನ್ಗೆ ಹಾವಂದ್ರೆ ಭಯವಿಲ್ಲ, ಹಾವಂದ್ರೆ ಬಲು ಇಷ್ಟ ಎನ್ನುತ್ತಾ ವಿಷಕಾರಿ ಹಾವೊಂದನ್ನು ಕೈಯಲ್ಲಿ ಹಿಡಿದು ಯಾವುದೇ ಭಯ, ಅಂಜಿಕೆ ಇಲ್ಲದೆ ಆ ಸರ್ಪಕ್ಕೆ ರೊಮ್ಯಾಂಟಿಕ್ ಆಗಿ ಲಿಪ್ ಟು ಲಿಪ್ ಕಿಸ್ ನೀಡಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಅಬ್ಬಬ್ಬಾ ಇದೆಂತಾ ಭಂಡ ಧೈರ್ಯ ಎಂದು ನೆಟ್ಟಿಗರು ಕೇಳುತ್ತಿದ್ದಾರೆ.
ಹಾವುಗಳೆಂದರೆ ಬಹುತೇಕ ಎಲ್ಲರೂ ಭಯ ಪಡ್ತಾರೆ. ಯಾವುದೇ ಹಾವನ್ನು ಕಂಡ್ರು ಸಾಕು ಜನರು ಭಯದಿಂದ ಮಾರು ದೂರ ಓಡಿ ಹೋಗ್ತಾರೆ. ಇನ್ನೂ ಹಾವನ್ನು ಸಾಕು ಪ್ರಾಣಿಗಳಂತೆ ಮುದ್ದಾಡುವ ಅಥವಾ ಅದರೊಂದಿಗೆ ಆಟವಾಡುವ, ಸರಸವಾಡುವ ದುಸ್ಸಾಹಸಕ್ಕೆ ಯಾರು ಕೂಡಾ ಕೈ ಹಾಕೊಲ್ಲ. ಆದ್ರೆ ಇಲ್ಲೊಬ್ಬ ಯುವಕ ನನ್ಗೆ ಹಾವೆಂದ್ರೆ ಯಾವ ಭಯನೂ ಇಲ್ಲ ಎನ್ನುತ್ತಾ ಭಂಡ ಧೈರ್ಯದಿಂದ ವಿಷಕಾರಿ ಹಾವೊಂದನ್ನು ಕೈಯಲ್ಲಿ ಹಿಡಿದು ಆ ಹಾವಿಗೆ ರೊಮ್ಯಾಂಟಿಕ್ ಆಗಿ ಲಿಪ್ ಟು ಲಿಪ್ ಕಿಸ್ ನೀಡಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಈ ಭೂಪನ ಭಂಡ ಧೈರ್ಯಕ್ಕೆ ಮೆಚ್ಚಲೇಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.
ಸಹಬತ್ ಅಲಮ್ (sahabatalamreal) ಎಂಬವನು ಈ ಕುರಿತ ಪೋಸ್ಟ್ ಒಂದನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ವೈರಲ್ ವಿಡಿಯೋದಲ್ಲಿ ಈ ಯುವಕ ದೈತ್ಯ ಗಾತ್ರದ ವಿಷಕಾರಿ ಹಾವೊಂದನ್ನು ಕೈಯಲ್ಲಿ ಹಿಡಿದುಕೊಂಡು ಯಾವುದೇ ಭಯ, ಅಂಜಿಕೆ ಇಲ್ಲದೆ ಆ ಹಾವಿಗೆ ರೊಮ್ಯಾಂಟಿಕ್ ಆಗಿ ಲಿಪ್ ಟು ಲಿಪ್ ಕಿಸ್ ನೀಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಈ ಜೈಲೂಟ ಯಾವ ರೆಸ್ಟೋರೆಂಟ್ ಊಟಕ್ಕೂ ಕಮ್ಮಿಯಿಲ್ಲ ನೋಡಿ…
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಜುಲೈ 22 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಎಷ್ಟು ಸಲೀಸಾಗಿ ಮುತ್ತಿಡುತ್ತಿದ್ದಾನೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನನಗಂತೂ ಹಾವನ್ನು ನೋಡಿ ತುಂಬಾನೇ ಭಯವಾಯಿತುʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ