Video: ಈ ಜೈಲೂಟ ಯಾವ ರೆಸ್ಟೋರೆಂಟ್ ಊಟಕ್ಕೂ ಕಮ್ಮಿಯಿಲ್ಲ ನೋಡಿ…
ಸಾಮಾನ್ಯವಾಗಿ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುವ ಖೈದಿಗಳಿಗೆ ರುಚಿ ರುಚಿಯಾದ ಊಟ, ಪೌಷ್ಠಿಕ ಭರಿತ ಆಹಾರ ಸಿಗೋದಿಲ್ಲ. ಆದ್ರೆ ಜಪಾನಿನಲ್ಲಿ ಜೈಲಿನಲ್ಲಿರುವ ಖೈದಿಗಳಿಗೆ ಪ್ರತಿನಿತ್ಯವೂ ಪೌಷ್ಠಿಕ ಭರಿತ, ರುಚಿಕರವಾದ ಮತ್ತು ಗುಣಮಟ್ಟದ ಆಹಾರವನ್ನೇ ನೀಡಲಾಗುತ್ತದೆ. ಜಪಾನಿನಲ್ಲಿ ಕೈದಿಗಳಿಗೆ ನೀಡಲಾಗುವ ಗುಣಮಟ್ಟದ ಊಟದ ಬಗೆಗಿನ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದ್ದು, ೀ ದೃಶ್ಯವನ್ನು ನೋಡಿ ಜಪಾನಿನಲ್ಲಿ ಜೈಲು ಸೇರೋದು ಬೆಸ್ಟ್ ಅಂತಿದ್ದಾರೆ ನೆಟ್ಟಿಗರು.
ಸಾಮಾನ್ಯವಾಗಿ ಜೈಲುಗಳಲ್ಲಿ ಖೈದಿಗಳಿಗೆ ಸರಳವಾದ ಆಹಾರವನ್ನು ನೀಡುತ್ತಾರೆ. ಇದೇ ಕಾರಣಕ್ಕೆ ಹೆಚ್ಚಿನ ಖೈದಿಗಳಿಗೆ ಈ ಜೈಲೂಟ ಸೇರೋದೆ ಇಲ್ಲ. ಆದ್ರೆ ಜಪಾನಿನಲ್ಲಿ ಮಾತ್ರ ಜೈಲಿನಲ್ಲಿರುವ ಖೈದಿಗಳಿಗೆ ಪ್ರತಿನಿತ್ಯವೂ ಪೌಷ್ಠಿಕ ಭರಿತ, ರುಚಿಕರ ಮತ್ತು ಗುಣಮಟ್ಟದ ಆಹಾರವನ್ನೇ ನೀಡಲಾಗುತ್ತದೆ. ಹೇಳಿ ಕೇಳಿ ಜಪಾನ್ ಅಭಿವೃದ್ಧಿ ಹೊಂದಿದ ರಾಷ್ಟ್ರ. ಇಲ್ಲಿ ಕೈದಿಗಳಿಗೂ ಕೂಡಾ ಜೈಲಿನಲ್ಲಿ ಗುಣಮಟ್ಟದ ಊಟವೇ ಸಿಗುತ್ತದೆ. ಹೀಗೆ ಜಪಾನಿನಲ್ಲಿ ಕೈದಿಗಳಿಗೆ ನೀಡಲಾಗುವ ರೆಸ್ಟೋರೆಂಟ್ ಶೈಲಿಯ ಊಟದ ವ್ಯವಸ್ಥೆಯ ಬಗೆಗಿನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ದೃಶ್ಯವನ್ನು ನೋಡಿ ಇನ್ಮುಂದೆ ಜಪಾನಿಗೆ ಹೋಗಿ ಅಲ್ಲಿ ಜೈಲು ಸೇರೋದು ಬೆಸ್ಟ್ ಅಂತಿದ್ದಾರೆ ನೆಟ್ಟಿಗರು.
ಜಪಾನಿನ ಸಂಸ್ಕೃತಿಯಲ್ಲಿ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಹಾಗಾಗಿ ಇಲ್ಲಿನ ಜೈಲುಗಳಲ್ಲಿರುವ ಕೈದಿಗಳಿಗೂ ಕೂಡಾ ಪೌಷ್ಠಿಕ ಭರಿತ ಮತ್ತು ಸಮತೋಲಿತ ಆಹಾರವನ್ನೇ ಬಡಿಸಲಾಗುತ್ತದೆ. ವಿವಿಧ ತರಕಾರಿಗಳು, ಮೀನು ಅಥವಾ ಮಾಂಸದಂತಹ ಪ್ರೋಟೀನ್ ಮೂಲಗಳು ಹಾಗೂ ಅನ್ನ ಅಥವಾ ನೂಡಲ್ಸ್‌ನಂತಹ ಆಹಾರವನ್ನು ಪ್ರತಿನಿತ್ಯ ಕೈದಿಗಳಿಗೆ ನೀಡಲಾಗುತ್ತದೆ. ಕೈದಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಬಲಪಡಿಸಲು ಇಲ್ಲಿ ಸಮತೋಲಿತ ಹಾಗೂ ಗುಣಮಟ್ಟದ ಆಹಾರವನ್ನು ನೀಡಲಾಗುತ್ತದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ಕುರಿತ ಪೋಸ್ಟ್ ಒಂದನ್ನು foodporn ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಬಾಣಸಿಗರು ಖೈದಿಗಳಿಗೆ ಗುಣಮಟ್ಟದ ಆಹಾರವನ್ನು ಸಿದ್ಧಪಡಿಸುವ ದೃಶ್ಯವನ್ನು ಕಾಣಬಹುದು. ಮೊದಲಿಗೆ ಜೈಲು ಸಿಬ್ಬಂದಿಗಳು ಬಾಣಸಿಗರು ಕೈಗಳನ್ನು ಸ್ವಚ್ಛವಾಗಿಟ್ಟುಕೊಂಡಿದ್ದಾರೆಯೇ ಎಂದು ತಪಾಸಣೆ ನಡೆಸಿ, ನಂತರ ಅವರನ್ನು ಅಡುಗೆ ಮಾಡಲು ಕಳುಹಿಸುತ್ತಾರೆ. ಹೀಗೆ ಅಡುಗೆಯನ್ನು ಪ್ರಾರಂಭಿಸುವ ಬಾಣಸಿಗರು ಚಿಕನ್ ಫ್ರೈ, ಇತ್ಯಾದಿ ಪ್ರೋಟೀನ್ ಭರಿತ ಆಹಾರ, ಸೊಪ್ಪು ತರಕಾರಿ ಇತ್ಯಾದಿ ಪೌಷ್ಠಿಕ ಭರಿತ ಆಹಾರವನ್ನು ಬೇಯಿಸಿ ಖೈದಿಗಳಿಗೆ ಬಡಿಸುತ್ತಾರೆ.
ಇದನ್ನೂ ಓದಿ: ಗಂಡ ಮಕ್ಕಳನ್ನು ಬಿಟ್ಟು 70ರ ಹರೆಯದ ಮಾವನೊಂದಿಗೆ ಓಡಿ ಹೋದ ಸೊಸೆ
ಜುಲೈ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನನ್ನ ನಿವೃತ್ತಿಯ ಬಳಿಕ ನಾನು ಅಪರಾಧಿಯಾಗಿ ಜಪಾನಿನ ಜೈಲಿಗೆ ಹೋಗಿ ಸೇರಿಕೊಳ್ಳುತ್ತೇನೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಎಲ್ಲಾ ವಲಯಗಳಲ್ಲೂ ಜಪಾನಿನಲ್ಲಿ ಮಾನವೀಯತೆ ಎಂಬುದು ಎದ್ದು ಕಾಣುತ್ತಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼದಯವಿಟ್ಟು ಯಾರಾದ್ರೂ ನನ್ನನ್ನು ಜಪಾನಿನ ಜೈಲಿಗೆ ಕಳುಹಿಸಿʼ ಎಂದು ತಮಾಷೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:13 pm, Thu, 1 August 24