AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಗಂಡ ಮಕ್ಕಳನ್ನು ಬಿಟ್ಟು 70ರ ಹರೆಯದ ಮಾವನೊಂದಿಗೆ ಓಡಿ ಹೋದ ಸೊಸೆ

ಜನ ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕುರುಡು ಅಂತೆಲ್ಲಾ ಹೇಳುತ್ತಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ಅಚ್ಚರಿಯ ಘಟನೆ ಇದೀಗ ನಡೆದಿದ್ದು, ಸಂಬಂಧದಲ್ಲಿ ಸೊಸೆಯಾಗಬೇಕಿದ್ದ 35 ವರ್ಷ ವಯಸ್ಸಿನ ವಿವಾಹಿತ ಮಹಿಳೆಯನ್ನೇ 70 ರ ಹರೆಯದ ವ್ಯಕ್ತಿ ಪ್ರೀತಿಸಿ ಮದುವೆಯಾಗಿದ್ದಾನೆ. ಇವರ ಮದುವೆಯ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಇದೆಂಥ ಅವಸ್ಥೆ ಮಾರ್ರೆ ಎಂದು ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

Video: ಗಂಡ ಮಕ್ಕಳನ್ನು ಬಿಟ್ಟು 70ರ ಹರೆಯದ ಮಾವನೊಂದಿಗೆ ಓಡಿ ಹೋದ ಸೊಸೆ
ವೈರಲ್​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Aug 01, 2024 | 11:43 AM

Share

ಪ್ರೀತಿ ಕುರುಡು. ಪ್ರೀತಿಗೆ ಜಾತಿ-ಧರ್ಮ, ವಯಸ್ಸು, ಅಂತಸ್ತು ಯಾವುದೂ ಅಡ್ಡಿಯಾಗುವುದಿಲ್ಲ ಅಂತಾರೆ. ಹೀಗೆ ಜಾತಿ, ಅಂತಸ್ತು, ವಯಸ್ಸಿನ ಅಂತರವನ್ನೂ ಮೀರಿ ಅದೆಷ್ಟೋ ಜೋಡಿಗಳು ಪ್ರೇಮ ವಿವಾಹವಾಗಿದ್ದಾರೆ. ಇದೀಗ ಇಂತಹದ್ದೇ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪ್ರೀತಿಗೆ ಸಂಬಂಧದ ಅಡ್ಡಿಯೂ ಬಾರದೆ, 35 ವರ್ಷ ವಯಸ್ಸಿನ ತನ್ನ ಸ್ವಂತ ಸೊಸೆಯನ್ನೇ 70 ರ ಹರೆಯದ ವ್ಯಕ್ತಿ ಪ್ರೀತಿಸಿ ಮದುವೆಯಾಗಿದ್ದಾನೆ. ಇವರ ಮದುವೆಯ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಮೌ ಎಂಬಲ್ಲಿ ನಡೆದಿದ್ದು, 70 ವರ್ಷದ ವ್ಯಕ್ತಿಯೊಬ್ಬ ಮದುವೆಯಾಗಿ ಮಕ್ಕಳಿರುವ 35 ವರ್ಷದ ಸೊಸೆಯನ್ನೇ ಪ್ರೀತಿಸಿ ಮದುವೆಯಾಗಿದ್ದಾನೆ. 10 ದಿನಗಳ ಹಿಂದೆ ಈ ಸೊಸೆ ಮತ್ತು ಮಾವ ಮನೆ ಬಿಟ್ಟು ಓಡಿ ಹೋಗಿದ್ದು, ಇದಾದ ನಂತರ ಕಳೆದ ಭಾನುವಾರ ಇದ್ದಕ್ಕಿದ್ದಂತೆ ಸೊಸೆ ಮತ್ತು ಮಾವ ಮನೆಗೆ ಬಂದಿದ್ದಾರೆ. ನಂತರ ಊರಿನ ದೇವಸ್ಥಾನಕ್ಕೆ ಹೋಗಿ ಇಬ್ಬರೂ ಮದುವೆಯಾಗಿದ್ದಾರೆ. ಮಾವ-ಸೊಸೆಯ ನಡುವೆ ಯಾವಾಗ ಪ್ರೀತಿ ಚಿಗುರೊಡೆಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಆದ್ರೆ ಇವರ ಮದುವೆಯ ಸುದ್ದಿ ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದೆ.

ಸರಾಯಿ ಗ್ರಾಮದ ಕೋಟೆದಾರನಾಗಿರುವ ಈ ವೃದ್ಧನ ಹೆಸರು ಹರಿಶಂಕರ್.‌ ಈತನಿಗೆ ಐವರು ಗಂಡು ಮಕ್ಕಳಿದ್ದು, ಇದೀಗ ತನ್ನ ಹಿರಿಯ ಮಗನ ಹೆಂಡತಿಯನ್ನೇ ಪ್ರೀತಿಸಿ ಮದುವೆಯಾಗಿದ್ದಾನೆ. ಸೊಸೆ ಕೂಡಾ ತನಗೆ ಗಂಡ ಮಕ್ಕಳು ಇದ್ದಾರೆ, ಸುಂದರ ಸಂಸಾರವಿದೆ ಎಂಬುದನ್ನು ಮರೆತು ಮಾವನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

RamShankar_IND ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದ್ದು, “70 ವರ್ಷದ ವೃದ್ಧ ತನ್ನ 35 ವರ್ಷದ ಸೊಸೆಯನ್ನು ಪ್ರೀತಿಸಿ ಮದುವೆಯಾದ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್‌ ವಿಡಿಯೋದಲ್ಲಿ ದೇವಾಲಯವೊಂದರಲ್ಲಿ 70 ವರ್ಷದ ಮಾವ ತನ್ನ ಸೊಸೆಗೆ ಹೂವಿನ ಹಾರ ಹಾಕಿ ಹಣೆಗೆ ಸಿಂಧೂರವನ್ನಿಟ್ಟು ಅಧೀಕೃತವಾಗಿ ವಿವಾಹವಾಗುತ್ತಿರುವ ದೃಶ್ಯವನ್ನು ಕಾಣಬಹುದು. ಈ ವಿಚಿತ್ರ ಪ್ರೇಮ ವಿವಾಹವನ್ನು ನೋಡಲು ಇಡೀ ಊರಿನ ಜನರೇ ಅಲ್ಲಿ ನೆರೆದಿದ್ದರು.

ಇದನ್ನೂ ಓದಿ: ಗಂಡ ಹಾಸಿಗೆಯ ಮೇಲೆ ಮಾಡುವ ಈ ಕೆಲಸ ನನಗೆ ಇಷ್ಟ ಆಗ್ತಿಲ್ಲ, ಪತಿಗೆ ಡಿವೋರ್ಸ್‌ ನೀಡಿದ ಪತ್ನಿ

ಜುಲೈ 30 ರಂದು ಹಂಚಿಕೊಳ್ಳಲಾದ ಈ ವಿಡಿಯೋ 340 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅಲ್ಲಾ ಸಂಬಂಧಕ್ಕೂ ಬೆಲೆ ಇಲ್ವಾ? ಇದೆಂತಾ ಪ್ರೀತಿ ಇವರದು ಎಂದು ನೆಟ್ಟಿಗರು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:37 am, Thu, 1 August 24