ನೇಪಾಳದಲ್ಲಿ ಭೂಕುಸಿತ: ತ್ರಿಶೂಲಿ ನದಿಗೆ ಬಿದ್ದ ಎರಡು ಬಸ್​ಗಳು, 63 ಪ್ರಯಾಣಿಕರು ನಾಪತ್ತೆ

|

Updated on: Jul 12, 2024 | 8:49 AM

ನೇಪಾಳದ ಮದನ್-ಆಶ್ರಿತ್ ಹೆದ್ದಾರಿಯಲ್ಲಿ ಇಂದು ಮುಂಜಾನೆ ಭೂಕುಸಿತ ಸಂಭವಿಸಿದ್ದು, 63 ಜನರಿದ್ದ ಎರಡು ಬಸ್‌ಗಳು ತ್ರಿಶೂಲಿ ನದಿಯಲ್ಲಿ ಮುಳುಗಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಎರಡೂ ಬಸ್‌ಗಳಲ್ಲಿ ಬಸ್ ಚಾಲಕರು ಸೇರಿದಂತೆ ಒಟ್ಟು 63 ಜನರು ಪ್ರಯಾಣಿಸುತ್ತಿದ್ದರು.

ನೇಪಾಳದಲ್ಲಿ ಭೂಕುಸಿತ: ತ್ರಿಶೂಲಿ ನದಿಗೆ ಬಿದ್ದ ಎರಡು ಬಸ್​ಗಳು, 63 ಪ್ರಯಾಣಿಕರು ನಾಪತ್ತೆ
ಭೂಕುಸಿತ
Follow us on

ನೇಪಾಳದಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಭೂಕುಸಿತ ಉಂಟಾಗಿದ್ದು, ಎರಡು ಬಸ್​ಗಳು ನದಿಗೆ ಬಿದ್ದಿದ್ದು 63 ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಮದನ್-ಆಶೀರ್ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ, ಈ ವೇಳೆ ಎರಡು ಬಸ್‌ಗಳು ಅವಶೇಷಗಳಡಿ ಸಿಲುಕಿ ತ್ರಿಶೂಲಿ ನದಿಯಲ್ಲಿ ಕೊಚ್ಚಿ ಹೋಗಿವೆ.

ಭಾರಿ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ತಿಳಿದುಬಂದಿದೆ. ಚಿತ್ವಾನ್ ಮುಖ್ಯ ಜಿಲ್ಲಾ ಅಧಿಕಾರಿ ಇಂದ್ರದೇವ್ ಯಾದವ್ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ ಮತ್ತು ಎಎನ್‌ಐಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಫೋಟೋಗಳೂ ಹೊರಬಿದ್ದಿವೆ. ಭೂಕುಸಿತದಿಂದ ರಸ್ತೆಯ ಮಧ್ಯದಲ್ಲಿಯೇ ಅವಶೇಷಗಳು ಶೇಖರಣೆಗೊಂಡು ರಸ್ತೆ ಸಂಚಾರ ಸ್ಥಗಿತಗೊಂಡಿರುವುದು ಕಂಡು ಬರುತ್ತಿದೆ.

ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಪ್ರಯಾಣಿಕರನ್ನು ಹುಡುಕಲು ಮತ್ತು ರಕ್ಷಿಸಲು ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ. ಮುಂಗಾರು ಆರಂಭವಾದಾಗಿನಿಂದ ನೇಪಾಳದಲ್ಲಿ 62 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 90 ಜನರು ಗಾಯಗೊಂಡಿದ್ದಾರೆ. ಅಲ್ಲಿ ಸುರಿದ ಭಾರೀ ಮಳೆಗೆ ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಕನಿಷ್ಠ 121 ಮನೆಗಳು ಮುಳುಗಿವೆ ಮತ್ತು 82 ಇತರವುಗಳಿಗೆ ಹಾನಿಯಾಗಿದೆ. ದೇಶಾದ್ಯಂತ ಒಟ್ಟು 1,058 ಕುಟುಂಬಗಳನ್ನು ಸ್ಥಳಾಂತರಿಸಿವೆ.

ಅಪಘಾತಕ್ಕೀಡಾದ ಒಂದು ಬಸ್ ಬಿರ್‌ಗಂಜ್‌ನಿಂದ ಕಠ್ಮಂಡುವಿಗೆ ಹೋಗುತ್ತಿತ್ತು ಮತ್ತು ಇನ್ನೊಂದು ಬಸ್ ಗೌರ್‌ನಿಂದ ಕಠ್ಮಂಡುವಿಗೆ ಹೋಗುತ್ತಿತ್ತು ಎಂದು ಹೇಳಲಾಗುತ್ತಿದೆ. ಪರ್ವತದ ಮೇಲೆ ಭೂಕುಸಿತದಿಂದ ಈ ಅವಘಡ ಸಂಭವಿಸಿದೆ. ನಾರಾಯಣಘಟ್ಟ ಮತ್ತು ಮುಗ್ಲಿಂಗ್ ನಡುವೆ ಈ ಘಟನೆ ನಡೆದಿದೆ.

ಮತ್ತಷ್ಟು ಓದಿ: ಚಾರ್‌ ಧಾಮ್​ನಲ್ಲಿ ಭೂಕುಸಿತ: ಸಂಕಷ್ಟಕ್ಕೆ ಸಿಲುಕಿದ ಹಾವೇರಿಯ 7 ಜನರು

ಈ ಅಪಘಾತದಲ್ಲಿ ಹಲವರು ಸಾವನ್ನಪ್ಪುವ ಸಾಧ್ಯತೆ ಇದೆ. ಮೃತಪಟ್ಟವರಲ್ಲಿ ಹಲವು ಭಾರತೀಯರೂ ಇದ್ದಾರೆ ಎನ್ನಲಾಗಿದೆ. ಭೂಕುಸಿತ ಸಂಭವಿಸಿದಾಗ ಬಸ್‌ಗಳು ಹೆದ್ದಾರಿಯಲ್ಲಿ ಚಲಿಸುತ್ತಿದ್ದವು. ಬಳಿಕ ಮಣ್ಣಿನ ಅವಶೇಷಗಳಡಿ ಸಿಲುಕಿ ನದಿಗೆ ಬಿದ್ದಿವೆ.

ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರು ಪ್ರಯಾಣಿಕರನ್ನು ಹುಡುಕಲು ಮತ್ತು ರಕ್ಷಿಸಲು ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ