AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Baba Vanga’s 2025 Prediction: ಮಾನವನ ಅಂತ್ಯಕ್ಕೆ 2025 ಬುನಾದಿ, ಶಾಕಿಂಗ್ ಭವಿಷ್ಯ ನುಡಿದ ಬಾಬಾ ವಂಗಾ

ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ಬಲ್ಗೇರಿಯಾದ ಬಾಂಬಾ ವಂಗಾ ಅವರು ನುಡಿದಿರುವ ಹೆಚ್ಚಿನ ಭವಿಷ್ಯವಾಣಿಗಳು ನಿಜವಾಗಿವೆ. ಅವರು 2025 ರಲ್ಲಿ ಈ ಜಗತ್ತಿನಲ್ಲಿ ಏನೆಲ್ಲಾ ಸಂಗತಿಗಳು ನಡೆಯುತ್ತವೆ ಎಂಬ ಬಗ್ಗೆಯೂ ಭವಿಷ್ಯ ನುಡಿದಿದ್ದು, ಈ ಕುರಿತು ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.

Baba Vanga's 2025 Prediction: ಮಾನವನ ಅಂತ್ಯಕ್ಕೆ 2025 ಬುನಾದಿ, ಶಾಕಿಂಗ್ ಭವಿಷ್ಯ ನುಡಿದ ಬಾಬಾ ವಂಗಾ
ಬಾಬಾ ವಂಗಾ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 12, 2024 | 2:47 PM

Share

ಬಾಬಾ ವಂಗಾ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇದೆ. ಬಾಬಾ ವಂಗಾ ಬಲ್ಗೇರಿಯಾದ ಒಬ್ಬ ಪ್ರವಾದಿ. ಆಕೆಯ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವ್. 1911 ರಲ್ಲಿ ಜನಿಸಿದ ಇವರು ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಚಂಡಮಾರುತದ ಧೂಳಿನಿಂದ ಶಾಶ್ವತವಾಗಿ ಕಣ್ಣನ್ನು ಕಳೆದುಕೊಂಡರು. ದೃಷ್ಟಿ ಕಳೆದುಕೊಂಡ ನಂತರ ಅವರು ಭವಿಷ್ಯ ಕಾಣಲು ಪ್ರಾರಂಭಿಸಿದರು. 1966 ರಲ್ಲಿ ಮರಣ ಹೊಂದಿದ ಬಾಬಾ ವಂಗಾ 51ನೇ ಶತಮಾನದ ವರೆಗೆ ಭೂಮಿಯ ಮೇಲೆ ಘಟಿಸಲಿರುವ ಪ್ರಮುಖ ಸಂಗತಿಗಳ ಬಗ್ಗೆ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗ, ಅಮೆರಿಕ ಮೇಲೆ ಉಗ್ರರ ದಾಳಿ, ಜಪಾನ್ ಪ್ರವಾಹ, ಆರ್ಥಿಕ ಬಿಕ್ಕಟ್ಟು ಮುಂತಾದ ಪ್ರಮುಖ ಘಟನಾವಳಿಗಳನ್ನು ಮುಂಚೆಯೇ ಊಹಿಸಿದ್ದ ಬಾಬಾ ವಂಗಾ 2025 ರಲ್ಲಿ ನಡೆಯಲಿರುವ ಕೆಲವು ಕುತೂಹಲಕಾರಿ ಅಂಶಗಳ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

2025 ರಿಂದಲೇ ಈ ಪ್ರಪಂಚದಲ್ಲಿ ವಿನಾಶಕಾರಿ ಘಟನೆಗಳು ಆರಂಭವಾಗಲಿದ್ದು, ಇದು ಮಾನವೀಯತೆಯ ಅವನತಿಗೆ ಕಾರಣವಾಗುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಈ ವಿನಾಶವು ಮುಂದಿನ ವರ್ಷ (2025) ಯುರೋಪಿನ ಸಂಘರ್ಷದೊಂದಿಗೆ ಪ್ರಾರಂಭವಾಗಿ ಇಡೀ ಮಾನವ ಕುಲವೇ ನಾಶವಾಗುತ್ತಾ ಹೋಗಿ ಪ್ರಪಂಚವು 5079 ರಲ್ಲಿ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ.

2025 ರಲ್ಲಿ ಯುರೋಪಿನಲ್ಲಿ ಯುದ್ಧ ಆರಂಭವಾಗುತ್ತದೆ:

2025 ರಲ್ಲಿ ಯುರೋಪ್‌ನಲ್ಲಿ ವಿನಾಶಕಾರಿ ಸಂಘರ್ಷ ಪ್ರಾರಂಭವಾಗಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಈ ಸಂಘರ್ಷ ಎಲ್ಲೆಡೆ ಭಾರಿ ವಿನಾಶವನ್ನು ಉಂಟುಮಾಡುತ್ತದೆ. ಮತ್ತು ಈ ಕಾರಣದಿಂದಾಗಿ, ಯುರೋಪ್ ಖಂಡದಲ್ಲಿ ಜನ ಸಂಖ್ಯೆಯೂ ಕುಸಿಯುತ್ತಾ ಹೋಗಿ ನಂತರದ ವರ್ಷಗಳಲ್ಲಿ ಇಡೀ ಜಗತ್ತು ಅವನತಿಯತ್ತ ಸಾಗಬಹುದು ಎಂದು ಭವಿಷ್ಯ ವಾಣಿಯಲ್ಲಿ ಹೇಳಿದ್ದಾರೆ.

ಬಾಬಾ ವಂಗಾ ಅವರ ಇತರ ಭವಿಷ್ಯವಾಣಿಗಳು:

ಹವಾಮಾನ ಬದಲಾವಣೆಯು 2033 ರಲ್ಲಿ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬಾಬಾ ವಾಂಗ ಭವಿಷ್ಯ ನುಡಿದಿದ್ದಾರೆ. ಮಂಜುಗಡ್ಡೆಯ ಕರಗುವಿಕೆಯು ಪ್ರಪಂಚದಾದ್ಯಂತ ಸಮುದ್ರ ಮಟ್ಟದಲ್ಲಿ ಭಾರಿ ಏರಿಕೆಗೆ ಕಾರಣವಾಗುತ್ತದೆ. 2170 ರಲ್ಲಿ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಜಗತ್ತು ಭೀಕರ ಬರ ಪರಿಸ್ಥಿತಿಯನ್ನು ಎದುರಿಸಲಿದೆ ಎಂದು ಅವರು ಹೇಳಿದ್ದಾರೆ.

ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, 3005 ರಲ್ಲಿ ಭೂಮಿ ಮತ್ತು ಮಂಗಳ ಗ್ರಹದ ನಡುವೆ ಯುದ್ಧ ಸಂಭವಿಸಬಹುದು. 3797 ರ ಹೊತ್ತಿಗೆ, ಭೂಮಿಯ ಮೇಲೆ ವಾಸಿಸಲು ಅಸಾಧ್ಯವಾಗಿ, ಮಾನವರು ಬೇರೆ ಯಾವುದಾದರೂ ಗ್ರಹದಲ್ಲಿ ಆಶ್ರಯ ಪಡೆಯಬೇಕಾಗುತ್ತದೆ ಅಂತಿಮವಾಗಿ 5079 ರ ಹೊತ್ತಿಗೆ ಭೂಮಿಯಿಂದ ಎಲ್ಲವೂ ನಾಶವಾಗುತ್ತದೆ ಮತ್ತು ಪ್ರಪಂಚವು ಅಂತ್ಯಗೊಳ್ಳುತ್ತದೆ ಎಂಬ ಭಯಾನಕ ಭವಿಷ್ಯ ನುಡಿದಿದ್ದಾರೆ.

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್