ಟೇಕ್ಆಫ್ಗೂ ಮುನ್ನ ರನ್ವೇನಲ್ಲೇ ಅಮೆರಿಕನ್ ಏರ್ಲೈನ್ಸ್ ವಿಮಾನದ ಟೈರ್ ಸ್ಫೋಟ, ವಿಡಿಯೋ ಇಲ್ಲಿದೆ
ಫ್ಲೋರಿಡಾದ ಟ್ಯಾಂಪಾ ವಿಮಾನ ನಿಲ್ದಾಣದಿಂದ ಫಿಯೋನಿಕ್ಸ್ಗೆ ಹೊರಟಿದ್ದ ಅಮೆರಿಕನ್ ಏರ್ಲೈನ್ಸ್ ವಿಮಾನದ ಟೈರ್ ಸ್ಫೋಟಗೊಂಡಿರುವ ಘಟನೆ ವರದಿಯಾಗಿದೆ.
ಅಮೆರಿಕನ್ ಏರ್ಲೈನ್ಸ್ ವಿಮಾನ ಟೇಕ್ ಆಫ್ ಆಗುವುದಕ್ಕೂ ಮುನ್ನ ರನ್ವೇನಲ್ಲೇ ಟೈರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಘಟನೆ ಅಮೆರಿಕದ ಟ್ಯಾಂಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಫ್ಲೋರಿಡಾ ವಿಮಾನ ನಿಲ್ದಾಣದಿಂದ ಅಮೆರಿಕದ ಫಿಯೋನಿಕ್ಸ್ಗೆ ಈ ವಿಮಾನ ಹೋಗುತ್ತಿತ್ತು ಎನ್ನಲಾಗಿದೆ. ಬೆಳಗ್ಗೆ 8 ಗಂಟೆಯ ವೇಳೆ ಈ ಅವಘಡ ಸಂಭವಿಸಿದೆ.
ಇನ್ನೇನು ವಿಮಾನ ಟೇಕ್ಆಫ್ ಆಗಬೇಕು ಎನ್ನುವಾಗ ಜೋರಾಗಿ ರನ್ವೇನಲ್ಲಿ ಓಡುತ್ತಾ ಹೊರಟಿದ್ದ ವಿಮಾನದ ಬಲಭಾಗದ ಟೈರ್ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿತ್ತು. ಹೇಗೋ ಮಾಡಿ ವಿಮಾನವನ್ನು ರನ್ವೇನಲ್ಲೇ ನಿಲ್ಲಿಸಲಾಯಿತು. ವಿಮಾನದಲ್ಲಿ 174 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಇದ್ದರು ಯಾರಿಗೂ ಯಾವುದೇ ಅಪಾಯವಾಗಿಲ್ಲ.
ವಿಮಾನವನ್ನು ಟರ್ಮಿನಲ್ಗೆ ಕಳುಹಿಸಲಾಗಿದೆ ಎಂದು ಅಮೆರಿಕನ್ ಏರ್ಲೈನ್ಸ್ ವಕ್ತಾರ ಆಲ್ಫ್ರೆಡೊ ಗಾರ್ಡುನೊ ಹೇಳಿದ್ದಾರೆ.
JUST IN: American Airlines flight 590 out of Tampa, Florida narrowly avoids disaster after multiple tires blow out during takeoff.
As the plane was picking up speed and seconds away from liftoff, the tires blew out.
The pilot slammed on the brakes as the plane barreled towards… pic.twitter.com/P5kZ3N6pUO
— Collin Rugg (@CollinRugg) July 10, 2024
ಪ್ರಯಾಣಿಕರನ್ನು ಬೇರೊಂದು ವಿಮಾನಕ್ಕೆ ಸ್ಥಳಾಂತರಿಸಲಾಯಿತು, ಘಟನೆಯಿಂದಾಗಿ ಫ್ಲೋರಿಡಾ ವಿಮಾನ ನಿಲ್ದಾಣದಲ್ಲಿ ಇತರೆ ವಿಮಾನ ಕಾರ್ಯಚರಣೆಗಳಿಗೆ ತೊಂದರೆಯಾಗಿಲ್ಲ ಎಂದು ಏರ್ಲೈನ್ಸ್ ಹೇಳಿದೆ.
ಮತ್ತಷ್ಟು ಓದಿ: ಸ್ಪೈಸ್ಜೆಟ್ ಏರ್ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ; 12 ಗಂಟೆಗಳಿಂದ ವಿಮಾನದಲ್ಲಿ ಲಾಕ್ ಆಗಿರುವ ಪ್ರಯಾಣಿಕರು
ಹೇಳಿಕೆಯಲ್ಲಿ, ಅಮೆರಿಕನ್ ಏರ್ಲೈನ್ಸ್ ಫ್ಲೈಟ್ 590 ಟೇಕ್ ಆಫ್ ಮಾಡುವ ಮೊದಲು ರನ್ವೇನಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು, ಅನನುಕೂಲತೆಗಾಗಿ ಪ್ರಯಾಣಿಕರ ಬಳಿ ಕ್ಷಮೆಯಾಚಿಸಿದ್ದಾರೆ. ವಿಮಾನವು ಫೀನಿಕ್ಸ್ ಸ್ಕೈ ಹಾರ್ಬರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ