AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nepal Presidential Polls: ನೇಪಾಳದಲ್ಲಿ ಇಂದು ಅಧ್ಯಕ್ಷೀಯ ಚುನಾವಣೆ, ಸಂಜೆ 7 ಗಂಟೆಗೆ ಫಲಿತಾಂಶ ಪ್ರಕಟ

ನೇಪಾಳದಲ್ಲಿ ಇಂದು ಅಧ್ಯಕ್ಷೀಯ ಚುನಾವಣೆ ಆರಂಭಗೊಂಡಿದ್ದು, ಸಂಜೆ 7 ಗಂಟೆಗೆ ಫಲಿತಾಂಶ ಹೊರಬೀಳಲಿದೆ. ನೇಪಾಳಿ ಕಾಂಗ್ರೆಸ್‌ನ ರಾಮ್ ಚಂದ್ರ ಪೌಡೆಲ್ ಮತ್ತು ಸಿಪಿಎನ್-ಯುಎಂಎಲ್‌ನ ಸುಭಾಷ್ ಚಂದ್ರ ನೆಂಬಾಂಗ್ ಅವರು ಅಧ್ಯಕ್ಷಸ್ಥಾನಕ್ಕಾಗಿ ಗಣದಲ್ಲಿದ್ದಾರೆ.

Nepal Presidential Polls: ನೇಪಾಳದಲ್ಲಿ ಇಂದು ಅಧ್ಯಕ್ಷೀಯ ಚುನಾವಣೆ, ಸಂಜೆ 7 ಗಂಟೆಗೆ ಫಲಿತಾಂಶ ಪ್ರಕಟ
ನೇಪಾಳ ರಾಷ್ಟ್ರಪತಿ ಭವನ
ನಯನಾ ರಾಜೀವ್
|

Updated on: Mar 09, 2023 | 10:58 AM

Share

ನೇಪಾಳದಲ್ಲಿ ಇಂದು ಅಧ್ಯಕ್ಷೀಯ ಚುನಾವಣೆ ಆರಂಭಗೊಂಡಿದ್ದು, ಸಂಜೆ 7 ಗಂಟೆಗೆ ಫಲಿತಾಂಶ ಹೊರಬೀಳಲಿದೆ. ನೇಪಾಳಿ ಕಾಂಗ್ರೆಸ್‌ನ ರಾಮ್ ಚಂದ್ರ ಪೌಡೆಲ್ ಮತ್ತು ಸಿಪಿಎನ್-ಯುಎಂಎಲ್‌ನ ಸುಭಾಷ್ ಚಂದ್ರ ನೆಂಬಾಂಗ್ ಅವರು ಅಧ್ಯಕ್ಷಸ್ಥಾನಕ್ಕಾಗಿ ಕಣದಲ್ಲಿದ್ದಾರೆ. ಚುನಾವಣಾ ಆಯೋಗ ಬುಧವಾರದಿಂದಲೇ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಇಂದು ಬೆಳಗ್ಗೆ ಸ್ಥಳೀಯ ಕಾಲಮಾನ 10 ಗಂಟೆಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆಗೆ ಮುಕ್ತಾಯವಾಗಲಿದೆ. ಸ್ಥಳೀಯ ಕಾಲಮಾನ ಸಂಜೆ 7 ಗಂಟೆಗೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ನ್ಯೂ ಬನೇಶ್ವರ್‌ನ ಸಂಸತ್ ಭವನದ ಲೋತ್ಸೆ ಹಾಲ್‌ನಲ್ಲಿ ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಎಲ್ಲಾ ತಾಂತ್ರಿಕ, ಮಾನವ ಸಂಪನ್ಮೂಲ ಮತ್ತು ಇತರ ನಿರ್ವಹಣಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಮಹೇಶ್ ಶರ್ಮಾ ಪೌಡೆಲ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ. ಚುನಾವಣಾ ಆಯೋಗವು ಫೆಡರಲ್ ಸಂಸದರಿಗೆ ಎರಡು ಪ್ರತ್ಯೇಕ ಮತಗಟ್ಟೆಗಳನ್ನು ರಚಿಸಿದೆ ಮತ್ತು ಪ್ರಾಂತೀಯ ಅಸೆಂಬ್ಲಿ ಸದಸ್ಯರನ್ನು ಸಭಾಂಗಣದಲ್ಲಿ ಸ್ಥಾಪಿಸಲಾಗಿದೆ.

ಇಂದು ಮಧ್ಯಾಹ್ನ 3 ಗಂಟೆಗೆ ಮತದಾನ ಮುಗಿದ ನಂತರ ಮತ ಎಣಿಕೆ ಆರಂಭವಾಗಲಿದ್ದು, ಸಂಜೆ 7 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾಧಿಕಾರಿ ಕಚೇರಿ ತಿಳಿಸಿದೆ. ಚುನಾವಣೆಗಾಗಿ ಎಲ್ಲಾ ಪ್ರಾಂತ್ಯಗಳ ಶಾಸಕರು ಬೆಳಗ್ಗೆಯೇ ಕಠ್ಮಂಡು ತಲುಪಿದ್ದರು.

ಸದನದ 275 ಸದಸ್ಯರು, ರಾಷ್ಟ್ರೀಯ ಅಸೆಂಬ್ಲಿಯ 59 ಸದಸ್ಯರು ಮತ್ತು ಏಳು ಪ್ರಾಂತೀಯ ಅಸೆಂಬ್ಲಿಗಳ 550 ಸದಸ್ಯರು ಸೇರಿದಂತೆ ಒಟ್ಟು 884 ಸದಸ್ಯರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಫೆಡರಲ್ ಪಾರ್ಲಿಮೆಂಟ್ ಮತ್ತು ಪ್ರಾಂತೀಯ ಅಸೆಂಬ್ಲಿಗಳಲ್ಲಿ ಯಾವುದೇ ಖಾಲಿ ಹುದ್ದೆಗಳಿಲ್ಲದಿದ್ದರೆ, ಎಲೆಕ್ಟೋರಲ್ ಕಾಲೇಜ್ 52,786 ಮತಗಳ ತೂಕವನ್ನು ಹೊಂದಿರುತ್ತದೆ. ಉನ್ನತ ಹುದ್ದೆಯನ್ನು ಪಡೆಯಲು ಅಭ್ಯರ್ಥಿಯು ಒಟ್ಟು ಮತಗಳ ಬಹುಮತವನ್ನು ಪಡೆಯಬೇಕು.

ರಾಷ್ಟ್ರಪತಿ ಚುನಾವಣೆಯಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಇಬ್ಬರು ಮಾಜಿ ಸ್ಪೀಕರ್‌ಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಎಂಟು ಪಕ್ಷಗಳ ಮೈತ್ರಿ ಬೆಂಬಲಿತ ಅಭ್ಯರ್ಥಿ ರಾಮಚಂದ್ರ ಪೌಡೆಲ್ (78), ಸುಭಾಷ್ ನೆಂಬಾಂಗ್ (69) ಅವರನ್ನು CPN-UML ನಾಮನಿರ್ದೇಶನ ಮಾಡಿದೆ. ಹಾಲಿ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರ ಅಧಿಕಾರಾವಧಿ ಮಾರ್ಚ್ 12ಕ್ಕೆ ಕೊನೆಗೊಳ್ಳುತ್ತಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ತಟಸ್ಥವಾಗಿರಲು ಕೇಂದ್ರ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ ಎಂದು ಆರ್‌ಪಿಪಿ ವಕ್ತಾರ ಮೋಹನ್ ಶ್ರೇಷ್ಠಾ ಖಚಿತಪಡಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಭಾಗವಹಿಸದೆ ತಟಸ್ಥವಾಗಿರಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ಶ್ರೇಷ್ಠಾ ಹೇಳಿದರು.

ಇಂದಿನ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್ ಹಿರಿಯ ನಾಯಕ ರಾಮಚಂದ್ರ ಪೌಡೆಲ್ ಅವರನ್ನು ಎಂಟು ಪಕ್ಷಗಳು ಬೆಂಬಲಿಸಿದರೆ, CPN-UML ನ ಏಕೈಕ ಅಭ್ಯರ್ಥಿ ಸುಭಾಷ್ ಚಂದ್ರ ನೆಂಬಾಂಗ್ ಅವರನ್ನು ಸ್ವತಂತ್ರ ಶಾಸಕರು ಬೆಂಬಲಿಸುವ ನಿರೀಕ್ಷೆಯಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!