ಕದನ ವಿರಾಮ ಸಾಧ್ಯವಿಲ್ಲ: ಹಮಾಸ್​ ಉಗ್ರರನ್ನು ಹತ್ತಿಕ್ಕುವವರೆಗೂ ಯುದ್ಧ ನಿಲ್ಲುವುದಿಲ್ಲ: ಬೆಂಜಮಿನ್

|

Updated on: Nov 12, 2023 | 10:10 AM

ಇಸ್ರೇಲ್​ ಹಾಗೂ ಹಮಾಸ್ ನಡುವೆ ಕಳೆದ ಒಂದು ತಿಂಗಳಿಂದ ಸಂಘರ್ಷ ನಡೆಯುತ್ತಿದೆ. ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್​ ಮೇಲೆ ರಾಕೆಟ್ ದಾಳಿ ನಡೆಸಿದ್ದರು. ಅದಾದ ಬಳಿಕ ಇಸ್ರೇಲ್​ ಕೂಡ ಗಾಜಾದ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಅಲ್ಲೂ ಹತ್ತು ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕದನ ವಿರಾಮ ಸಾಧ್ಯವಿಲ್ಲ: ಹಮಾಸ್​ ಉಗ್ರರನ್ನು ಹತ್ತಿಕ್ಕುವವರೆಗೂ ಯುದ್ಧ ನಿಲ್ಲುವುದಿಲ್ಲ: ಬೆಂಜಮಿನ್
ಬೆಂಜಮಿನ್
Follow us on

ಇಸ್ರೇಲ್(Israel)​ ಹಾಗೂ ಹಮಾಸ್(Hamas) ನಡುವೆ ಕಳೆದ ಒಂದು ತಿಂಗಳಿಂದ ಸಂಘರ್ಷ ನಡೆಯುತ್ತಿದೆ. ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್​ ಮೇಲೆ ರಾಕೆಟ್ ದಾಳಿ ನಡೆಸಿದ್ದರು. ಅದಾದ ಬಳಿಕ ಇಸ್ರೇಲ್​ ಕೂಡ ಗಾಜಾದ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಅಲ್ಲೂ ಹತ್ತು ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದೀಗ ಹಲವು ದೇಶಗಳು ಕದನ ವಿರಾಮ ಘೋಷಿಸುವಂತೆ ಇಸ್ರೇಲ್​ಗೆ ಸಲಹೆ ನೀಡುತ್ತಿದ್ದಾರೆ, ಆದರೆ ಇಸ್ರೇಲ್ ಮಾತ್ರ ಸಲಹೆಗಳನ್ನು ತಿರಸ್ಕರಿಸಿದ್ದು, ಯಾವುದೇ ಕಾರಣಕ್ಕೂ ಯುದ್ಧ ನಿಲ್ಲಿಸುವ ಮಾತಿಲ್ಲ, ಹಮಾಸ್​ ಉಗ್ರರನ್ನು ಹತ್ತಿಕ್ಕುವವರೆಗೂ ಬಿಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಪುನರುಚ್ಚರಿಸಿದ್ದಾರೆ.

ಯುದ್ಧವನ್ನು ನಾವು ಪ್ರಾರಂಭ ಮಾಡಿಲ್ಲ ಆದರೆ ಅಂತ್ಯ ನಮ್ಮಿಂದಲೇ ಆಗುತ್ತದೆ ಎಂದು ಈ ಮೊದಲೇ ನೇತನ್ಯಾಹು ಹೇಳಿಕೆ ನೀಡಿದ್ದರು.
ನೇತನ್ಯಾಹು ಅವರು, ಗಾಜಾವನ್ನು ಹಮಾಸ್​ ಮುಕ್ತಗೊಳಿಸುವುದು ಹಾಗೂ ಇಸ್ರೇಲ್​ನಲ್ಲಿ ಭದ್ರತಾ ನಿಯಂತ್ರಣವನ್ನು ಉಳಿಸಿಕೊಳ್ಳಲು ಒತ್ತಾಯಿಸಿದ್ದಾರೆ. ಉಗ್ರಗಾಮಿಗಳನ್ನು ಭೇಟೆಯಾಡಲು ಇಸ್ರೇಲಿ ಪಡೆಗಳು ಗಾಜಾವನ್ನು ಮುಕ್ತವಾಗಿ ಪ್ರವೇಶಿಸಲು ಶಕ್ತವಾಗಿರಬೇಕು ಎಂದು ಹೇಳಿದ್ದಾರೆ.

ಹಮಾಸ್, ಉತ್ತರ ಗಾಜಾ ಪಟ್ಟಿಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದೆ. ಅಲ್ಲಿ ಅಡಗಿಕೊಳ್ಳಲು ಸ್ಥಳವಿಲ್ಲ. ನಾವು ಗೆಲ್ಲುವವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದರು.

ಮತ್ತಷ್ಟು ಓದಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜನ್ಮ ಜಾತಕ ವಿಶ್ಲೇಷಣೆ ಏನು ಹೇಳುತ್ತದೆ?

ಹಮಾಸ್ ಉಗ್ರರು ಅಪಹರಿಸಿರುವ ಆರು ಮಮದಿ ಅಮೆರಿಕನ್ನರು ಸೇರಿದಂತೆ 12ಕ್ಕೂ ಹೆಚ್ಚು ಒತ್ತೆಯಾಳುಗಳ ಬಿಡುಗಡೆಗೆ ಮಾತುಕತೆ ನಡೆಯುತ್ತಿದೆ.
ಈ ನಡುವೆ ಕದನ ವಿರಾಮದ ಬಗ್ಗೆ ಮಾತನಾಡಿರುವ ನೇತನ್ಯಾಹು, ನಾವು ಎಲ್ಲಾ ಮೂಲಗಳಿಂದ ಕೇಳುತ್ತಿರುವ ಎಲ್ಲಾ ರೀತಿಯ ಸುಳ್ಳು ವದಂತಿಗಳನ್ನು ಕೊನೆಗೊಳಿಸುತ್ತಿದ್ದೇವೆ, ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಕದನ ವಿರಾಮ ಘೋಷಿಸುವುದಿಲ್ಲ ಎಂದು ಹೇಳಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ