ಚೀನಾದ ಮಾರುಕಟ್ಟೆಯಲ್ಲಿರಿಸಿದ್ದ ವನ್ಯಜೀವಿಗಳಿಂದ ಹರಡಿತೇ ಕೊರೊನಾ ಸೋಂಕು?
ಚೀನಾದ ಮಾರುಕಟ್ಟೆಯಿಂದಲೇ ಕೊರೊನಾ ಸೋಂಕು ಹರಡಿರುವ ಕುರಿತ ವಿಷಯಕ್ಕೆ ಮತ್ತಷ್ಟು ಪುಷ್ಟಿ ನೀಡುವ ವರದಿಯೊಂದು ಬಹಿರಂಗಗೊಂಡಿದೆ. ಚೀನಾದ ಮಾರುಕಟ್ಟೆಯಲ್ಲಿ ವನ್ಯಪ್ರಾಣಿಗಳನ್ನು ಕೂಡ ಇರಿಸಲಾಗಿತ್ತು ಅವುಗಳಿಂದಲೇ ಸೋಂಕು ತಗುಲಿರಬಹುದು ಎಂದು ಹೇಳಲಾಗುತ್ತಿದೆ.
2019ರ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಮೊದಲು ಪತ್ತೆಯಾಗಿ ನಂತರ ವಿಶ್ವವನ್ನೆಲ್ಲಾ ಆವರಿಸಿಕೊಂಡು 64 ಲಕ್ಷ ಮಂದಿಯ ಸಾವಿಗೆ ಕಾರಣವಾದ ಕೊರೊನಾ ವೈರಸ್ ನಿಜವಾಗಿಯೂ ಹುಟ್ಟಿದ್ದೆಲ್ಲಿಂದ? ಹೊಸ ಅಧ್ಯಯನಗಳ ಪ್ರಕಾರ, ಚೀನಾದ ವುಹಾನ್‌ನಲ್ಲಿನ ಮಾರುಕಟ್ಟೆಯಿಂದಲೇ ಸೋಂಕು ಜನರಿಗೆ ಹರಡಿದೆ ಎಂಬುಉದ ತಿಳಿದುಬಂದಿದೆ.
ಅರ್ಥಾತ್ ಅಲ್ಲಿನ ಪ್ರಾಣಿಗಳಿಂದ ಉದ್ಯೋಗಿಗಳಿಗೆ ಮೊದಲು ತಗುಲಿ, ಅನಂತರ ಎಲ್ಲರನ್ನೂ ವ್ಯಾಪಿಸಿಕೊಂಡಿದೆ. ವುಹಾನ್ ಮಾರುಕಟ್ಟೆಯಲ್ಲಿ ಜೀವಂತ ಪ್ರಾಣಿಗಳನ್ನು ಮಾರಲಾಗುತ್ತಿತ್ತು.
ಚೀನಾದ ಮಾರುಕಟ್ಟೆಯಲ್ಲಿ ವನ್ಯಪ್ರಾಣಿಗಳನ್ನು ಕೂಡ ಇರಿಸಲಾಗಿತ್ತು ಅವುಗಳಿಂದಲೇ ಸೋಂಕು ತಗುಲಿರಬಹುದು ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಓದಿ: Wetland Virus: ಚೀನಾದಲ್ಲಿ ಮೆದುಳಿನ ಮೇಲೆ ದಾಳಿ ಮಾಡುವ ಹೊಸ ವೈರಸ್ ಪತ್ತೆ
ಮಾರುಕಟ್ಟೆಯನ್ನು ಮುಚ್ಚಿದ ನಂತರ ಜನವರಿ 2020 ರಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗಿದೆ ಮತ್ತು ಅವುಗಳನ್ನು ನೇರವಾಗಿ ಪ್ರಾಣಿಗಳು ಅಥವಾ ಜನರಿಂದ ತೆಗೆದುಕೊಳ್ಳಲಾಗಿಲ್ಲ ಆದರೆ ವನ್ಯಜೀವಿಗಳನ್ನು ಮಾರಾಟ ಮಾಡುವ ಸ್ಟಾಲ್‌ಗಳು ಮತ್ತು ಚರಂಡಿಗಳಿಂದ ತೆಗೆದುಕೊಳ್ಳಲಾಗಿದೆ.
ಚೀನಾದ ಅಧಿಕಾರಿಗಳು ಹಂಚಿಕೊಂಡಿರುವ ಈ ರೀತಿಯ ಡೇಟಾದಿಂದ, ಪ್ರಾಣಿಗಳು (ಮಾರುಕಟ್ಟೆಯಲ್ಲಿ) ಸೋಂಕಿಗೆ ಒಳಗಾಗಿವೆಯೇ ಅಥವಾ ಇಲ್ಲವೇ ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
2019 ರ ಕೊನೆಯಲ್ಲಿ ಈ ಮಾರುಕಟ್ಟೆಯಲ್ಲಿ ಕಾಡು ಪ್ರಾಣಿಗಳು ಇದ್ದವು ಎಂದು ನಮ್ಮ ಅಧ್ಯಯನವು ದೃಢಪಡಿಸುತ್ತದೆ, ಮುಖ್ಯವಾಗಿ ರಕೂನ್ ನಾಯಿಗಳು ಮತ್ತು ಸಿವೆಟ್‌ಗಳಂತಹ ಜಾತಿಗಳಿಗೆ ಸೇರಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ