ಲೆಬನಾನ್​ಗೆ ಹೋಗುವ ವಿಮಾನಗಳಲ್ಲಿ ವಾಕಿ-ಟಾಕಿ ನಿಷೇಧಿಸಿದ ಕತಾರ್ ಏರ್​ವೇಸ್​

ಕತಾರ್ ಏರ್‌ವೇಸ್ ಬೈರುತ್​ನಿಂದ ಲೆಬನಾನ್‌ಗೆ ಹೋಗುವ ಎಲ್ಲಾ ವಿಮಾನಗಳಲ್ಲಿ ಪ್ರಯಾಣಿಕರು ಪೇಜರ್‌ಗಳು ಮತ್ತು ವಾಕಿ-ಟಾಕಿಗಳನ್ನು ಒಯ್ಯುವುದನ್ನು ನಿಷೇಧಿಸಿದೆ. ಲೆಬನಾನ್‌ನ ಮೂರು ಪ್ರದೇಶಗಳಲ್ಲಿ ವಾಕಿ-ಟಾಕಿಗಳು, ಹ್ಯಾಂಡ್‌ಹೆಲ್ಡ್ ರೇಡಿಯೋಗಳು ಮತ್ತು ಪೇಜರ್ ಸೆಟ್‌ಗಳಲ್ಲಿ ಸ್ಫೋಟಗಳ ನಂತರ ಏರ್‌ಲೈನ್ ಈ ಕ್ರಮವನ್ನು ತೆಗೆದುಕೊಂಡಿದೆ.

ಲೆಬನಾನ್​ಗೆ ಹೋಗುವ ವಿಮಾನಗಳಲ್ಲಿ ವಾಕಿ-ಟಾಕಿ ನಿಷೇಧಿಸಿದ ಕತಾರ್ ಏರ್​ವೇಸ್​
ಕತಾರ್ ಏರ್​ವೇಸ್​
Follow us
ನಯನಾ ರಾಜೀವ್
|

Updated on:Sep 20, 2024 | 12:18 PM

ಕತಾರ್ ಏರ್‌ವೇಸ್ ಬೈರುತ್​ನಿಂದ ಲೆಬನಾನ್‌ಗೆ ಹೋಗುವ ಎಲ್ಲಾ ವಿಮಾನಗಳಲ್ಲಿ ಪ್ರಯಾಣಿಕರು ಪೇಜರ್‌ಗಳು ಮತ್ತು ವಾಕಿ-ಟಾಕಿಗಳನ್ನು ಒಯ್ಯುವುದನ್ನು ನಿಷೇಧಿಸಿದೆ. ಲೆಬನಾನ್‌ನ ಮೂರು ಪ್ರದೇಶಗಳಲ್ಲಿ ವಾಕಿ-ಟಾಕಿಗಳು, ಹ್ಯಾಂಡ್‌ಹೆಲ್ಡ್ ರೇಡಿಯೋಗಳು ಮತ್ತು ಪೇಜರ್ ಸೆಟ್‌ಗಳಲ್ಲಿ ಸ್ಫೋಟಗಳ ನಂತರ ಏರ್‌ಲೈನ್ಸ್​ ಈ ಕ್ರಮವನ್ನು ತೆಗೆದುಕೊಂಡಿದೆ.

ಈ ಘಟನೆಯಲ್ಲಿ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ ಮತ್ತು 3000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪೈಕಿ ಸುಮಾರು 450 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಕತಾರ್ ಏರ್‌ವೇಸ್ ಅನ್ನು ನಿರ್ಬಂಧಿಸಲಾಗಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಿದೆ. ಮುಂದಿನ ಸೂಚನೆ ಬರುವವರೆಗೂ ಈ ನಿರ್ಬಂಧ ಜಾರಿಯಲ್ಲಿರುತ್ತದೆ.

ಸೆಪ್ಟೆಂಬರ್ 16 ರಂದು, ಲೆಬನಾನ್‌ನಲ್ಲಿ 3,000 ಕ್ಕೂ ಹೆಚ್ಚು ಪೇಜರ್‌ಗಳು, ವಾಕಿ-ಟಾಕಿಗಳು ಮತ್ತು ಹ್ಯಾಂಡ್‌ಹೆಲ್ಡ್ ರೇಡಿಯೋಗಳು ಇದ್ದಕ್ಕಿದ್ದಂತೆ ಸ್ಫೋಟಗೊಳ್ಳಲು ಪ್ರಾರಂಭಿಸಿದವು. ಈ ಘಟನೆಯಲ್ಲಿ ಅನೇಕ ಹಿಜ್ಬುಲ್ಲಾ ಸಂಘಟನೆ ಸದಸ್ಯರು ಕೊಲ್ಲಲ್ಪಟ್ಟರು ಹಲವರು ಗಾಯಗೊಂಡಿದ್ದರು.

ಮತ್ತಷ್ಟು ಓದಿ: ಸಾಮೂಹಿಕ ಹತ್ಯೆ; ಲೆಬನಾನ್‌ನಲ್ಲಿ ಪೇಜರ್ ಸ್ಫೋಟದ ಬಳಿಕ ಇಸ್ರೇಲ್ ವಿರುದ್ಧ ಇರಾನ್ ಆಕ್ರೋಶ

ಬೈರುತ್‌ನಲ್ಲಿರುವ ಇರಾನ್‌ನ ರಾಯಭಾರಿ ಕೂಡ ಗಾಯಗೊಂಡಿದ್ದಾರೆ. ಸಂವಹನಕ್ಕಾಗಿ ಬಳಸಲಾದ ಈ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಲ್ಲಿ ಸ್ಫೋಟಗಳ ಹಿಂದೆ ಇಸ್ರೇಲಿ ಪಿತೂರಿ ಇದೆ ಎಂದು ಲೆಬನಾನಿನ ಅಧಿಕಾರಿಗಳು ಆರೋಪಿಸಿದ್ದಾರೆ.

ಪೇಜರ್ ಬ್ಯಾಟರಿಯ ಪಕ್ಕದಲ್ಲಿ ಸುಮಾರು 1 ರಿಂದ 2 ಔನ್ಸ್ ಸ್ಫೋಟಕವನ್ನು ಅಳವಡಿಸಲಾಗಿದೆ. ದೂರದಿಂದ ನಿಯಂತ್ರಿಸಲ್ಪಡುತ್ತಿದ್ದ ಈ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಸ್ವಿಚ್ ಕೂಡ ಅಳವಡಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:17 pm, Fri, 20 September 24

ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ