ಹಿಂದೂಗಳಿಗೆ ಹೆಮ್ಮೆಯ ಕ್ಷಣ; ನ್ಯೂಯಾರ್ಕ್​ನ ಪ್ರಸಿದ್ಧ ರಸ್ತೆಗೆ ಗಣೇಶ ಟೆಂಪಲ್ ಸ್ಟ್ರೀಟ್ ಎಂದು ಮರುನಾಮಕರಣ

| Updated By: ಸುಷ್ಮಾ ಚಕ್ರೆ

Updated on: Apr 06, 2022 | 8:56 PM

Ganesha Temple Street: 1977ರಲ್ಲಿ ಸ್ಥಾಪಿತವಾದ ಶ್ರೀ ಮಹಾ ವಲ್ಲಭ ಗಣಪತಿ ದೇವಸ್ಥಾನವನ್ನು ಗಣೇಶ ದೇವಸ್ಥಾನ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಇದು ಉತ್ತರ ಅಮೆರಿಕಾದ ಮೊದಲ ಮತ್ತು ಅತ್ಯಂತ ಹಳೆಯ ಹಿಂದೂ ದೇವಾಲಯವಾಗಿದೆ.

ಹಿಂದೂಗಳಿಗೆ ಹೆಮ್ಮೆಯ ಕ್ಷಣ; ನ್ಯೂಯಾರ್ಕ್​ನ ಪ್ರಸಿದ್ಧ ರಸ್ತೆಗೆ ಗಣೇಶ ಟೆಂಪಲ್ ಸ್ಟ್ರೀಟ್ ಎಂದು ಮರುನಾಮಕರಣ
ಗಣೇಶ ದೇವಸ್ಥಾನ ಬೀದಿ
Follow us on

ನ್ಯೂಯಾರ್ಕ್: ಅಮೆರಿಕಾದಲ್ಲಿನ ನ್ಯೂಯಾರ್ಕ್​ನಲ್ಲಿ ಶ್ರೀ ಮಹಾ ವಲ್ಲಭ ಗಣಪತಿ ದೇವಸ್ಥಾನದ ಗೌರವಾರ್ಥವಾಗಿ ಈ ಬೀದಿಗೆ ಗಣೇಶ ದೇವಸ್ಥಾನ ಬೀದಿ (Ganesh Temple Street) ಎಂದು ಹೆಸರಿಡಲಾಗಿದೆ. ಕ್ವೀನ್ಸ್ ಕೌಂಟಿಯ ಫ್ಲಶಿಂಗ್‌ನಲ್ಲಿರುವ ಈ ಗಣಪತಿ ದೇವಸ್ಥಾನ ಉತ್ತರ ಅಮೆರಿಕಾದಲ್ಲಿನ ಮೊದಲ ಮತ್ತು ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ (Hindu Temples) ಒಂದಾಗಿದೆ. ಇದನ್ನು 1977ರಲ್ಲಿ ಉತ್ತರ ಅಮೆರಿಕಾದ ಹಿಂದೂ ಟೆಂಪಲ್ ಸೊಸೈಟಿ ನಿರ್ಮಿಸಿದೆ.

ಈ ಮೂಲಕ ಫ್ಲಶಿಂಗ್‌ನಲ್ಲಿರುವ ಬೌನ್ ಸ್ಟ್ರೀಟ್ ಈಗ ಗಣೇಶ್ ಟೆಂಪಲ್ ಸ್ಟ್ರೀಟ್ ಆಗಿದೆ! ಅಮೆರಿಕದಲ್ಲಿರುವ ಹಿಂದೂ ಸಮುದಾಯಕ್ಕೆ ಇದು ಬಹಳ ಮಹತ್ವದ ಕ್ಷಣವಾಗಿದೆ. ಅಮೆರಿಕದ ಹೆಸರಾಂತ ಮತ್ತು ಪ್ರಮುಖ ದೇವಾಲಯದ ಬೀದಿಗೆ ‘ಗಣೇಶ್ ಟೆಂಪಲ್ ಸ್ಟ್ರೀಟ್’ ಎಂದು ಹೆಸರಿಸಲಾಗಿದೆ. 1977ರಲ್ಲಿ ಸ್ಥಾಪಿತವಾದ ಶ್ರೀ ಮಹಾ ವಲ್ಲಭ ಗಣಪತಿ ದೇವಸ್ಥಾನವನ್ನು ಗಣೇಶ ದೇವಸ್ಥಾನ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಇದು ಉತ್ತರ ಅಮೆರಿಕಾದಲ್ಲಿ ಮೊದಲ ಮತ್ತು ಅತ್ಯಂತ ಹಳೆಯ ಹಿಂದೂ ದೇವಾಲಯವೆಂದು ಪರಿಗಣಿಸಲ್ಪಟ್ಟಿದೆ.

ನ್ಯೂಯಾರ್ಕ್​ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಇಲ್ಲಿನ ಬೌನ್ ಸ್ಟ್ರೀಟ್​ಗೆ ಗಣೇಶ ದೇವಸ್ಥಾನ ಬೀದಿ ಎಂದು ಮರುನಾಮಕರಣ ಮಾಡಲಾಯಿತು.

ಗಣೇಶ ದೇವಸ್ಥಾನ ಬೀದಿ

ಗಣೇಶ ಟೆಂಪಲ್ ಸ್ಟ್ರೀಟ್ ಎಂಬ ಬೀದಿ ಫಲಕವನ್ನು ಅನಾವರಣಗೊಳಿಸಿದ ವಿಶೇಷ ಸಮಾರಂಭದಲ್ಲಿ ನ್ಯೂಯಾರ್ಕ್‌ನ ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್, ಕ್ವೀನ್ಸ್ ಬರೋ ಅಧ್ಯಕ್ಷ ಡೊನೊವನ್ ರಿಚರ್ಡ್ಸ್, ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: Viral Video: ಮುನ್ನಾರ್​ ರಸ್ತೆಯಲ್ಲಿ ಬಸ್​ ಎದುರು ಬಂದು ಗಾಜು ಒಡೆದ ಕಾಡಾನೆ; ಚಾಲಕ ಮಾಡಿದ್ದೇನು? 

Viral Video: ದೇವಸ್ಥಾನದ ಒಡವೆ ಕದಿಯಲು ತಾನೇ ಕೊರೆದು ರಂಧ್ರದಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ; ಆಮೇಲೇನಾಯ್ತು?

Published On - 8:55 pm, Wed, 6 April 22