New Zealand Earthquake: ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ 6.1 ತೀವ್ರತೆಯ ಭೂಕಂಪ

|

Updated on: Feb 15, 2023 | 1:24 PM

ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನ ವಾಯುವ್ಯದಲ್ಲಿ ಇಂದು (ಬುಧವಾರ 15) 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಭೂಕಂಪವು 57.4 ಕಿಮೀ ಮಧ್ಯಮ ಆಳದಲ್ಲಿ ಸಂಭವಿಸಿದೆ. ರಾತ್ರಿ 7.38ಕ್ಕೆ 76 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

New Zealand Earthquake: ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ 6.1 ತೀವ್ರತೆಯ ಭೂಕಂಪ
ಸಾಂದರ್ಭಿಕ ಚಿತ್ರ
Follow us on

ನ್ಯೂಜಿಲೆಂಡ್‌ನ (New Zealand) ವೆಲ್ಲಿಂಗ್ಟನ್‌ನ ವಾಯುವ್ಯದಲ್ಲಿ ಇಂದು (ಬುಧವಾರ 15) 6.1 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಭೂಕಂಪವು 57.4 ಕಿಮೀ ಮಧ್ಯಮ ಆಳದಲ್ಲಿ ಸಂಭವಿಸಿದೆ. ರಾತ್ರಿ 7.38ಕ್ಕೆ 76 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಇದು ನ್ಯೂಜಿಲೆಂಡ್‌ ವೆಲ್ಲಿಂಗ್ಟನ್‌ನ ವಾಯುವ್ಯಕ್ಕೆ 50ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿತ್ತು. 15 ನಿಮಿಷಗಳಲ್ಲಿ, 31000 ಕ್ಕೂ ಹೆಚ್ಚು ಜನರು ಭೂಕಂಪದ ಅನುಭವವನ್ನು ಅನುಭವಿಸಿದ್ದಾರೆ ಎಂದು ಜಿಯೋನೆಟ್‌ನಲ್ಲಿ ವರದಿ ಮಾಡಿದ್ದಾರೆ.

ಸುನಾಮಿ ಅಪಾಯವಿಲ್ಲ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಸಲಹೆ ನೀಡಿದೆ ಎಂದು ವೆಲ್ಲಿಂಗ್ಟನ್ ಪ್ರದೇಶದ ತುರ್ತು ನಿರ್ವಹಣಾ ಕಚೇರಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. ವರದಿಯ ಪ್ರಕಾರ, 6.1 ತೀವ್ರತೆ ಭೂಕಂಪದ ಸ್ವಲ್ಪ ಸಮಯದ ನಂತರ 4.0 ತೀವ್ರತೆಯ ಭೂಕಂಪವು ತೌಮರುನುಯಿಯಿಂದ 45 ಕಿಮೀ ನೈಋತ್ಯಕ್ಕೆ ಮತ್ತು 78 ಕಿಮೀ ಆಳದಲ್ಲಿ ಅಪ್ಪಳಿಸಿತು. ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ದಿನಗಳ ನಂತರ ಇದು ಸಂಭವಿಸುತ್ತದೆ.

Published On - 12:55 pm, Wed, 15 February 23