ಬೋಳು ಭಾಗ್ಯವಂತ! ಬೋಳು ತಲೆಯವ ಎಂದು ಆತನನ್ನು ಉದ್ಯೋಗದಿಂದ ತೆಗೆದು ಹಾಕಿದ ಬಾಸ್, ಮುಂದೇನಾಯಿತು ಎಂದು ತಿಳಿದರೆ ಶಾಕ್ ಆಗ್ತೀರಿ!
Bald Boss: ಒಮ್ಮೊಮ್ಮೆ ಇಷ್ಟವಾಗದಿದ್ದರೂ ನೀವು ಹೇಳಿದ್ದೇ ಸೂಪರ್ ಎನ್ನುತ್ತೇವೆ. ಯಾಕೆಂದರೆ ಆತ ನಮ್ಮ ಬಾಸ್ ಆಗಿರುತ್ತಾನೆ. ಆದರೆ ಹುಚ್ಚುತಲೆಯ ಬಾಸ್ ತನ್ನ ವಿಚಿತ್ರ ಮನೋಧರ್ಮದಿಂದಾಗಿ ಭಾರೀ ಬೆಲೆ ತೆರಬೇಕಾಯಿತು. ಅದನ್ನಿಲ್ಲಿ ಓದೋಣ!
ಬಾಸ್ (Boss) ಈಸ್ ಆಲ್ವೇಸ್ ಬಾಸ್! ಆತ ಹೇಳಿದ್ದು ನಡೆಯಬೇಕು ಅಷ್ಟೇ. ಇಂತಹ ಹಠಮಾರಿಗಳನ್ನು ನಾವು ಹಲವು ಬಾರಿ ನೋಡಿದ್ದೇವೆ. ನಾವು ಕೆಲಸ ಮಾಡುವ ಕಡೆ ಬಾಸ್ ಹೇಳುವುದು ಕೆಲವೊಮ್ಮೆ ನಮಗೆ ತುಂಬಾ ಆಶ್ಚರ್ಯ ಮತ್ತು ಗೊಂದಲವನ್ನುಂಟು ಮಾಡುತ್ತದೆ. ಒಮ್ಮೊಮ್ಮೆ ಇಷ್ಟವಾಗದಿದ್ದರೂ ಯಸ್ ಬಾಸ್ ಎನ್ನುತ್ತೇವೆ. ಯಾಕೆಂದರೆ ಆತ ನಮ್ಮ ಬಾಸ್ ಆಗಿರುತ್ತಾರೆ.. ಆದರೆ ಆ ಬಾಸ್ ತಮ್ಮ ಮನೋಧರ್ಮಕ್ಕೆ ಭಾರೀ ಬೆಲೆ ತೆರಬೇಕಾಯಿತು. ಪ್ರಪಂಚದಲ್ಲಿ ಅನೇಕ ಕಂಪನಿಗಳಲ್ಲಿ ಬಾಸ್ ಮತ್ತು ಉದ್ಯೋಗಿಗಳಿಗೆ ಸಂಬಂಧಿಸಿದ ಅನೇಕ ವಿಚಿತ್ರ ಪ್ರಕರಣಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮಾಷಿಯಾಗಿ ಆಗಾಗ ರೌಂಡು ಹೊಡೆಯುತ್ತಿರುತ್ತವೆ. ಅಷ್ಟೇ ಅಲ್ಲ… ಕೋರ್ಟ್ ಮೆಟ್ಟಿಲು ಸಹ ಹತ್ತುತ್ತಿರುತ್ತದೆ. ತನ್ನ ಅಧೀನ ಉದ್ಯೋಗಿಯಲ್ಲಿ ಏನೋ ಒಂದು ಕೊಂಕು ತೆಗೆದು, ಅವರನ್ನು ಕೆಲಸದಿಂದ ತೆಗೆದುಹಾಕುವ ಅನೇಕ ಪ್ರಕರಣಗಳನ್ನು ನೋಡಿದ್ದೇವೆ. ತನಗೆ ಆಪ್ತರಾಗುವವರಿಗೆ ಮಣೆ ಹಾಕಿ, ಉದ್ಯೋಗ ಕಲ್ಪಿಸುವುದು ಆಗಾಗ ನಡೆಯುತ್ತಿರುತ್ತದೆ. ತಾಜಾ ಆಗಿ ಇಂತಹುದೇ ಪ್ರಕರಣವೊಂದು ನಡೆದಿದೆ.
ತಮಾಷಿ ಏನು ಗೊತ್ತಾ? ಅಸಲಿಗೆ ಬಾಸೂ ಬಾಲ್ಡಿಯೇ!
ಯಾವೆಲ್ಲ ಉದ್ಯೋಗಿಗಳ ತಲೆಯಲ್ಲಿ ಕೂದಲು ಇಲ್ಲವೋ ಅಂತಹವರನ್ನೆಲ್ಲ ಬೋಳು ತಲೆಯವರು ಬೇಡಾ ಎಂದು ನೇರವಾಗಿ ಹೇಳುತ್ತಲೇ ಕೆಲಸದಿಂದ ತೆಗೆಯಲಾಗಿದೆ (Bald employee). ಇದೇ ವಿಷಯವಾಗಿ ಮೇಲಾಧಿಕಾರಿಯೊಬ್ಬರು ತಮ್ಮ ಮಹಿಳಾ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿರುವ ಕುತೂಹಲಕಾರಿ ಪ್ರಕರಣವೂ ಬೆಳಕಿಗೆ ಬಂದಿದೆ.
ನಮ್ಮಲ್ಲಿ ಬಾಲ್ಯದಿಂದಲೂ “ಬೋಳು ಭಾಗ್ಯವಂತ” ಎಂಬ ನಾಣ್ಣುಡಿ ಇತ್ತು. ಆದರೆ ಇಂಗ್ಲೆಂಡಿನ ವ್ಯಕ್ತಿಯೊಬ್ಬನ ವಿಷಯದಲ್ಲಿ ಮತ್ತೇನೋ ಆಯಿತು. ಅದೇ ಬೋಳು ಆತನಿಗೆ ಶಾಪವಾಗಿ ಪರಿಣಮಿಸಿತು. ಅವನ ಯಜಮಾನ ಬೋಳು ತಲೆಯಿಂದಾಗಿ ಅವನನ್ನು ಕೆಲಸದಿಂದ ತೆಗೆದು ಹಾಕಿದ್ದಾನೆ.
ಆತನೇನು ತನ್ನ ಬೋಳು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳಲಿಲ್ಲ!
ಇತ್ತ ಬೋಳು ತಲೆಯವ ಕೆಲಸದಿಂದ ತೆಗೆದುಹಾಕಿದ ಮೇಲೆ ಸುಮ್ಮನಿರುತ್ತಾನಾ, ಅದೂ ತನ್ನನ್ನು ಬಾಂಡ್ಲೀ ಎಂದು ಕೆಲಸದಿಂದ ತೆಗೆದಿದ್ದಕ್ಕೆ ಆತನಿಗೆ ಪಿತ್ತ ನೆತ್ತಿಗೇರಿದೆ. ಉದ್ಯೋಗ ಹೋಯ್ತೆ ಎಂದು ಡಿಪ್ರೆಷನ್ಗೆ ಹೋಗಲಿಲ್ಲ. ತಾನೇನು, ತನ್ನ ತಾಕತ್ತು ಏನು ಎಂಬುದನ್ನು ಸಾಧಿಸಿ ತೋರಿಸಿದನು. ಬಾಸ್ ಮಂಡೆಗೆ ಸಮ ಬುದ್ಧಿ ಕಲಿಸಿದನು.
ಅಸಲಿಗೆ ಏನಾಯ್ತೆಂದರೆ ಬ್ರಿಟನ್ನಿನ ಲೀಡ್ಸ್‌ನಲ್ಲಿ ಈ ಘಟನೆ ನಡೆದಿದ್ದು, ಬ್ರಿಟಿಷ್ ಮಾಧ್ಯಮಗಳ ಪ್ರಕಾರ ಬಾಸ್‌ನ ಹೆಸರು ಫಿಲಿಪ್ (Philip Hesketh), ಉದ್ಯೋಗಿಯ ಹೆಸರು ಮಾರ್ಕ್ ಜೋನ್ಸ್ (Mark Jones) ಮತ್ತು ಫಿಲಿಪ್‌ನ ಕಂಪನಿಯ ಹೆಸರು ಟ್ಯಾಂಗೋ ನೆಟ್‌ವರ್ಕ್ (Mobile Phone Firm Tango Network). ಅದೊಂದು ಮೊಬೈಲ್ ಫೋನ್ ಕಂಪನಿ. ಜೋನ್ಸ್ ಮಾರಾಟ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.
ಒಂದು ದಿನ ಬಾಸ್ ಕೋಪಗೊಂಡರು. ಆದರೆ ಉದ್ಯೋಗಿ ಮಾರ್ಕ್ ಜೋನ್ಸ್ ಬೋಳುತಲೆಯವ ಎಂಬ ಏಕೈಕ ಕಾರಣದಿಂದ ಆತನನ್ನು ಕೆಲಸದಿಂದ ವಜಾ ಮಾಡಲಾಯಿತು. ತನ್ನ ಸೇಲ್ಸ್ ಟೀಮ್ ಯಂಗ್ ಆ್ಯಕ್ಟೀವ್ ಆಗಿರಬೇಕು ಎಂದು ಎಣಿಸಿದ ಬಾಸ್, 50 ವರ್ಷ ಮೇಲ್ಪಟ್ಟ ಬೋಳು ಉದ್ಯೋಗಿಗಳು ತಮ್ಮ ತಂಡದಲ್ಲಿ ಇರಬಾರದು ಎಂದು ಈ ಆದೇಶ ಹೊರಡಿಸಿದ್ದನಂತೆ. ಬಾಸ್‌ನ ಈ ನಿರ್ಧಾರದಿಂದಾಗಿ ಜೋನ್ಸ್ ತನ್ನ ಕೆಲಸವನ್ನು ಕಳೆದುಕೊಂಡಿದ್ದ ಎಂಬುದಂತೂ ದಿಟ.
ಇದನ್ನೂ ಓದಿ:
ಬರ್ತ್ಡೇ ಗಿಫ್ಟ್ಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ, ರಿಲೇಷನ್ಶಿಪ್ನಲ್ಲಿದ್ದ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್
ಇದರಿಂದ ಕುಪಿತಗೊಂಡ ಜೋನ್ಸ್, ಇದೇ ಕಾರಣ ಮುಂದಿಟ್ಟುಕೊಂಡು ಕಾನೂನು ಹೋರಾಟ ಆರಂಭಿಸಿಯೇ ಬಿಟ್ಟ. ಮೊಬೈಲ್ ತಯಾರಿಕಾ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿದ. ಈ ಕುರಿತು ಇತ್ತೀಚೆಗೆ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಮಾರ್ಕ್ ಜೋನ್ಸ್ ಪರ ತೀರ್ಪು ನೀಡಿದೆ! ತಾರತಮ್ಯದ ನೀತಿ ಅನುಸರಿಸಲಾಗಿದ್ದು, ಸಕಾರಣವಿಲ್ಲದೆ ಜೋನ್ಸ್ ಅವರನ್ನು ವಜಾ ಮಾಡಲಾಗಿದೆ ಎಂದು ನ್ಯಾಯಾಲಯವು ತೀರ್ಮಾನಿಸಿದೆ. ಪರಿಣಾಮವಾಗಿ, ಕಂಪನಿಗೆ ಭಾರಿ ದಂಡವನ್ನು ವಿಧಿಸಲಾಯಿತು. ಒಂದಲ್ಲ ಎರಡು ಸಾವಿರ ಅಲ್ಲ ಒಟ್ಟು 71 ಸಾವಿರ ಪೌಂಡ್. ಅಂದರೆ ನಮ್ಮ ಕರೆನ್ಸಿಯಲ್ಲಿ ಆ ಉದ್ಯೋಗಿಗೆ ರೂ. 71 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಆ ಮೊತ್ತವನ್ನು ಕಂಪನಿಯೇ ಈಗ ಪಾವತಿಸಬೇಕಾಗಿದೆ.
ಪ್ರಮುಖ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ