ಬರ್ತ್​ಡೇ ಗಿಫ್ಟ್​ಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ, ರಿಲೇಷನ್​ಶಿಪ್​ನಲ್ಲಿದ್ದ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್

ಚಿನ್ನದ ಚೈನ್​ ಕೊಡುತ್ತೀಯಾ ಅಂತಿದ್ದೆ, ಬೆಳ್ಳಿ ಚೈನ್​ ಕೊಟ್ಟಿದ್ದೀಯಾ ಎಂದು ಕೌಸರ್ ಬೆಳ್ಳಿ ಚೈನ್​ ಗಿಫ್ಟ್​ ನೀಡಿದ್ದಕ್ಕೆ ಆಕ್ಷೇಪವ್ಯಕ್ತಪಡಿಸಿದ್ದಳು. ನನ್ನ ಮೊದಲ ಗಂಡನೂ ಹೀಗೆ, ನೀನೂ ಹಾಗೆಯೇ ಎಂದಿದ್ದಳು.

ಬರ್ತ್​ಡೇ ಗಿಫ್ಟ್​ಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ, ರಿಲೇಷನ್​ಶಿಪ್​ನಲ್ಲಿದ್ದ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್
ಹತ್ಯೆ ಮಾಡಿ ಮನೆಯಿಂದ ಓಡಿ ಹೋಗಿದ್ದ ನದೀಂ
Follow us
TV9 Web
| Updated By: ಆಯೇಷಾ ಬಾನು

Updated on:Feb 15, 2023 | 3:55 PM

ಬೆಂಗಳೂರು: ನಗರದಲ್ಲಿ ನಡೆದ ಕೌಸರ್​ ಮುಬಿನಾ ಕೊಲೆ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಬರ್ತ್​ಡೇ ಗಿಫ್ಟ್​ಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಸದ್ಯ ಪ್ರಕರಣ ಸಂಬಂಧ ಅಶೋಕನಗರ ಪೊಲೀಸರು ಆರೋಪಿ ನದೀಂ ಪಾಷಾನನ್ನು ಬಂಧಿಸಿದ್ದಾರೆ. ಮೃತ ಕೌಸರ್​ ಮುಬಿನಾ ಮತ್ತು ನದೀಂ ಪಾಷಾ ಲಿವಿಂಗ್ ರಿಲೇಷನ್​ಶಿಪ್​ನಲ್ಲಿದ್ದರು.

ಫೆಬ್ರವರಿ 12ರಂದು ಕೌಸರ್​ ಮುಬಿನಾ ಹುಟ್ಟುಹಬ್ಬವಿತ್ತು. ಫೆಬ್ರವರಿ 13ರ ಬೆಳಗ್ಗೆ ಕೌಸರ್​ ಮುಬಿನಾ ಮನೆಗೆ ನದೀಂ ಬಂದಿದ್ದ. ಮಧ್ಯಾಹ್ನ 2.30ರ ಸುಮಾರಿಗೆ ಕೌಸರ್ ಮನೆಯಿಂದ ಹೊರಡಲು ಸಿದ್ಧವಾಗಿದ್ದ. ಈ ವೇಳೆ ಗಿಫ್ಟ್​ ವಿಚಾರಕ್ಕೆ ಕೌಸರ್, ನದೀಂ ನಡುವೆ ವಾಗ್ವಾದವಾಗಿದೆ. ಚಿನ್ನದ ಚೈನ್​ ಕೊಡುತ್ತೀಯಾ ಅಂತಿದ್ದೆ, ಬೆಳ್ಳಿ ಚೈನ್​ ಕೊಟ್ಟಿದ್ದೀಯಾ ಎಂದು ಕೌಸರ್ ಬೆಳ್ಳಿ ಚೈನ್​ ಗಿಫ್ಟ್​ ನೀಡಿದ್ದಕ್ಕೆ ಆಕ್ಷೇಪವ್ಯಕ್ತಪಡಿಸಿದ್ದಳು. ನನ್ನ ಮೊದಲ ಗಂಡನೂ ಹೀಗೆ, ನೀನೂ ಹಾಗೆಯೇ ಎಂದಿದ್ದಳು. ಈ ಹಿಂದೆ ಪಡೆದಿದ್ದ 2 ಲಕ್ಷ ಹಣ ನೀಡುವಂತೆ ಕೇಳಿದ್ದಳು. ಕೌಸರ್​ ಮಾತಿನಿಂದ ಸಿಟ್ಟಿಗೆಂದ ನದೀಂ ಚಾಕುವಿನಿಂದ ಹಲ್ಲೆ ಮಾಡುವ ಬೆದರಿಕೆ ಹಾಕಿದ್ದ. ಹೊಡಿ ನೋಡೋಣ ಎಂದು ಕೌಸರ್ ಜೋರಾಗಿ ಕಿರುಚಾಡಿದ್ದು ಮಾತಿಗೆ ಮಾತು ಬೆಳೆದು ಕೌಸರ್​ ಕುತ್ತಿಗೆಗೆ ನದೀಂ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಶಾಂತಿನಗರದ ನಂಜಪ್ಪ ಸರ್ಕಲ್​ ಬಳಿ ಇರುವ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಕೌಸರ್ ಮುಬಿನಾಳನ್ನು ಕೊಂದು ಪರಾರಿಯಾಗಿದ್ದ ನದೀಂ ಪಾಷಾನನ್ನು ಬಂಧಿಸಿ ಅಶೋಕನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ರಾಮನಗರ: ಸರ್ಕಾರಿ ಸಂಸ್ಥೆಯ ಬಡಾವಣೆಯ ನಿವೇಶನಕ್ಕೆ ಸಿಗುತ್ತಿಲ್ಲ ಇ-ಖಾತೆ: ಕಣ್ವ ಬಡಾವಣೆ ನಿವೇಶನದಾರರು ಅತಂತ್ರ

ಮಲೆನಾಡಿನಲ್ಲಿ ಅಸ್ಸಾಂ ಕಾರ್ಮಿಕರ ಗೂಂಡಾಗಿರಿ

ಮಲೆನಾಡಿನಲ್ಲಿ ಅಸ್ಸಾಂ ಕಾರ್ಮಿಕರ ಗೂಂಡಾಗಿರಿ ಮುಂದುವರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರು ಸಮೀಪದ ಮಲಗಾರು ಗ್ರಾಮಸ್ಥರ ಮೇಲೆ ಅಸ್ಸಾಂ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ. ಮಲಗಾರಿನ 10ಕ್ಕೂ ಹೆಚ್ಚು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಕಾಫಿ ತೋಟದ ಕೆಲಸಕ್ಕೆ ನೂರಾರು ಅಸ್ಸಾಂ ಕಾರ್ಮಿಕರು ಬಂದಿದ್ದಾರೆ. ಕೆಲಸದ ವಿಚಾರವಾಗಿ ತೋಟದ ರೈಟರ್ ಜೊತೆ ನಡೆದ ಗಲಾಟೆ ಬಿಡಿಸಲು ಹೋಗಿದ್ದ ಗ್ರಾಮಸ್ಥರನ್ನೇ ಅಟ್ಟಾಡಿಸಿ ಥಳಿಸಲಾಗಿದೆ. ಹಲ್ಲೆಗೊಳಗಾದ ಗ್ರಾಮಸ್ಥರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪ್ರಮುಖ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:55 pm, Wed, 15 February 23