Nigerian Cooking: ನಿರಂತರ ಬ್ರೇಕ್​​ಲೆಸ್​​ ಅಡುಗೆ: ಸೌಟು ತಿರುವುತ್ತಲೇ ಗಿನ್ನಿಸ್ ದಾಖಲೆ ನಿರ್ಮಿಸಿದ ಮಹಿಳೆ! ನಾಲ್ಕು ದಿನಗಳ ಕಾಲ ತಡೆ ಇಲ್ಲದೆಯೇ ಅಡುಗೆ ಮಾಡಿದಳು

ಮಹಿಳೆಯರ ಇಚ್ಛಾಶಕ್ತಿಯನ್ನು ತೋರಿಸಲು ಈ ಸುದೀರ್ಘ ಅಡುಗೆ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹಿಲ್ಡಾ ಬಾಸಿ ಹೇಳಿದರು. ಹೀಗೆ ತಾಸುಗಟ್ಟಲೆ ಮಾಡಿದ ತಿಂಡಿ ತಿನಿಸುಗಳನ್ನೆಲ್ಲ ಅದನ್ನು ಮಾಡುವಾಗ ನೋಡಲು ಬಂದವರಿಗೆ ಹಿಲ್ಡಾ ಬಾಸಿ ಉಚಿತವಾಗಿ ಬಡಿಸಿದರು.

Nigerian Cooking: ನಿರಂತರ ಬ್ರೇಕ್​​ಲೆಸ್​​ ಅಡುಗೆ: ಸೌಟು ತಿರುವುತ್ತಲೇ ಗಿನ್ನಿಸ್ ದಾಖಲೆ ನಿರ್ಮಿಸಿದ ಮಹಿಳೆ! ನಾಲ್ಕು ದಿನಗಳ ಕಾಲ ತಡೆ ಇಲ್ಲದೆಯೇ ಅಡುಗೆ ಮಾಡಿದಳು
ನಿರಂತರ ಬ್ರೇಕ್​​ಲೆಸ್​​ ಅಡುಗೆ
Follow us
ಸಾಧು ಶ್ರೀನಾಥ್​
|

Updated on:May 16, 2023 | 5:12 PM

ನೈಜೀರಿಯಾದ ಮಹಿಳಾ ಬಾಣಸಿಗರೊಬ್ಬರು ಸೋಮವಾರ (ಮೇ 15) 100 ಗಂಟೆಗಳ ಕಾಲ ಎಡೆಬಿಡದೆ ಅಡುಗೆ ಮಾಡುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾರೆ. ನೈಜೀರಿಯಾದ ಈ ಬಾಣಸಿಗ ಮಹಿಳೆಯು ಈ ಹಿಂದೆ ಭಾರತೀಯ ಬಾಣಸಿಗ ಲತಾ ಟಂಡನ್ (2019) ಹೊಂದಿದ್ದ 87 ಗಂಟೆ 45 ನಿಮಿಷಗಳ ದಾಖಲೆಯನ್ನು ಅಳಿಸಿಹಾಕಿದ್ದಾರೆ. ನೈಜೀರಿಯಾದ ಹಿಲ್ಡಾ ಬಾಸಿ ಎಂಬ ಮಹಿಳೆ ಕಳೆದ ಗುರುವಾರದಿಂದ ನೂರು ಗಂಟೆಗಳ ಕಾಲ ಎಡೆಬಿಡದೆ ಅಡುಗೆ ಮಾಡಿದ್ದಾರೆ.

ಲಂಡನ್ ಕಾಲಮಾನದ ಪ್ರಕಾರ.. ಕಳೆದ ಗುರುವಾರ ಮಧ್ಯಾಹ್ನ 3 ಗಂಟೆಗೆ ಅಡುಗೆ ಆರಂಭಿಸಿದ ಹಿಲ್ಡಾ ಬಾಸಿ, ಸೋಮವಾರ ರಾತ್ರಿ 7.45ಕ್ಕೆ ಅಡುಗೆ ಮುಗಿಸಿ ದಾಖಲೆ ನಿರ್ಮಿಸಿದ್ದಾರೆ. ಇಷ್ಟು ಗಂಟೆಯ ಸುದೀರ್ಘ ಅವಧಿಯಲ್ಲಿ ಅವರು ಏನು ಅಡುಗೆ ಮಾಡಿದರು? ಎಂದು ಅನೇಕರು ಅನುಮಾನಾಸ್ಪದವಾಗಿ ಕೇಳುತ್ತಿದ್ದಾರೆ. ಅವರು ನೈಜೀರಿಯಾದ ಎಲ್ಲಾ ವಿಶೇಷ ಭಕ್ಷ್ಯಗಳನ್ನು ಮಾಡಿದ್ದಾರೆ. ಅವರು ಸೂಪ್ ಮತ್ತು ಟೊಮೇಟೊ ರೈಸ್‌ನಂತಹ ಅನೇಕ ಭಕ್ಷ್ಯಗಳನ್ನು ತಯಾರಿಸಿದರು.

ಅವರು ತಲಾ 12 ಗಂಟೆಗಳ ಕಾಲ ಬ್ರೇಕ್​ ತೆಗೆದುಕೊಳ್ಳದೆ ಅಡುಗೆ ಮಾಡುತ್ತಿದ್ದರು ಮತ್ತು ಆನಂತರ ಪ್ರತಿ ಒಂದು ಗಂಟೆ ವಿಶ್ರಾಂತಿ ಪಡೆಯುತ್ತಿದ್ದರು. ಆ ಅವಧಿಯಲ್ಲಿ ಸ್ನಾನ ಮತ್ತು ವೈದ್ಯಕೀಯ ತಪಾಸಣೆಗಳನ್ನು ಅವರು ಪೂರ್ಣಗೊಳಿಸುತ್ತಿದ್ದರು. ಹಿಲ್ಡಾ ಬಾಸಿ ಹಗಲಿರುಳು ಕಷ್ಟಪಟ್ಟು ನೂರು ಗಂಟೆ ಕಾಲ ಅಡುಗೆ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಆಕೆಯ ದಾಖಲೆಯ ಪ್ರಯತ್ನವನ್ನು ವೀಕ್ಷಿಸಲು ಸಾವಿರಾರು ಜನರು ನೈಜೀರಿಯಾದ ಲೆಕ್ಕಿ ಪ್ರದೇಶಕ್ಕೆ ಆಗಮಿಸಿದ್ದರು. ಅಲ್ಲಿಗೆ ಬಂದ ಜನ ವೈವಿಧ್ಯಮಯ ಹಾಡುಗಳನ್ನು ಹಾಡುವ ಮೂಲಕ ಅವರನ್ನು ಪ್ರೋತ್ಸಾಹಿಸಿದರು. ನೂರು ಗಂಟೆ ಪೂರೈಸಿದಾಗ ಹಿಲ್ಡಾ ಬಾಸಿಗೆ ಅಭಿನಂದನೆಗಳ ಸುರಿಮಳೆಯಾಯಿತು. ಆಕೆಯ ಅಡುಗೆ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. ನೈಜೀರಿಯಾದ ಅಧ್ಯಕ್ಷ ಮುಹಮ್ಮದ್ ಬುಹಾರಿ ಕೂಡ ದಾಖಲೆ ನಿರ್ಮಿಸಿದ ನಂತರ ಹಿಲ್ಡಾ ಬಾಸಿಯನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

ಮಹಿಳೆಯರ ಇಚ್ಛಾಶಕ್ತಿಯನ್ನು ತೋರಿಸಲು ಈ ಸುದೀರ್ಘ ಅಡುಗೆ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹಿಲ್ಡಾ ಬಾಸಿ ಹೇಳಿದರು. ಆಫ್ರಿಕನ್ ಸಮಾಜದಲ್ಲಿ ಸೂಕ್ತ ಆದ್ಯತೆಯನ್ನು ಪಡೆಯದ ಮಹಿಳೆಯರೊಂದಿಗೆ ಒಗ್ಗಟ್ಟಿನಿಂದ ಈ ದಾಖಲೆಯನ್ನು ಸ್ಥಾಪಿಸಲಾಗಿದೆ ಎಂದು ಅವರು ವಿವರಿಸಿದರು. ಹೀಗೆ ತಾಸುಗಟ್ಟಲೆ ಮಾಡಿದ ತಿಂಡಿ ತಿನಿಸುಗಳನ್ನೆಲ್ಲ ಅದನ್ನು ಮಾಡುವಾಗ ನೋಡಲು ಬಂದವರಿಗೆ ಹಿಲ್ಡಾ ಬಾಸಿ ಉಚಿತವಾಗಿ ಬಡಿಸಿದರು.

Published On - 5:11 pm, Tue, 16 May 23

ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್