ಡಯಾಬಿಟಿಸ್​ನಲ್ಲಿ ಪಾಕಿಸ್ತಾನ ನಂ.1; ಅಲ್ಲಿ ಯಾಕಿಷ್ಟು ಮಧುಮೇಹಿಗಳು? ಭಾರತೀಯರ ಕಥೆ ಏನು? ಇಲ್ಲಿದೆ ನೋಡಿ ಪಟ್ಟಿ

ಆರ್ಥಿಕವಾಗಿ ಮುಂದುವರೆದ ದೇಶಗಳಲ್ಲಿ ಮಧುಮೇಹದ ಸಮಸ್ಯೆಯನ್ನ ಒಂದು ಕಾಯಿಲೆಯೆಂದು ಪರಿಗಣಿಸಲಾಗಿತ್ತು. ಆದರೆ ನಗರೀಕರಣ, ಆಹಾರ ಪದ್ದತಿ ಬದಲಾವಣೆ ಮತ್ತು ಚಟುವಟಿಕೆ ರಹಿತ ಜೀವನ ಶೈಲಿಯನ್ನ ಅಳವಡಿಸಿಕೊಂಡ ಪರಿಣಾಮದಿಂದ ಇಂದು ಪಾಕಿಸ್ತಾನದಲ್ಲಿ ಮಧುಮೇಹ ರೋಗಿಗಳು ಹೆಚ್ಚಾಗಿದ್ದಾರೆ.

ಡಯಾಬಿಟಿಸ್​ನಲ್ಲಿ ಪಾಕಿಸ್ತಾನ ನಂ.1; ಅಲ್ಲಿ ಯಾಕಿಷ್ಟು ಮಧುಮೇಹಿಗಳು? ಭಾರತೀಯರ ಕಥೆ ಏನು? ಇಲ್ಲಿದೆ ನೋಡಿ ಪಟ್ಟಿ
ಸಾಂದರ್ಭಿಕ ಚಿತ್ರ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 17, 2023 | 3:27 PM

ಆರ್ಥಿಕವಾಗಿ ಮುಂದುವರೆದ ದೇಶಗಳಲ್ಲಿ ಮಧುಮೇಹ(diabetes) ದ ಸಮಸ್ಯೆಯನ್ನ ಒಂದು ಕಾಯಿಲೆಯೆಂದು ಪರಿಗಣಿಸಲಾಗಿತ್ತು. ಆದರೆ ನಗರೀಕರಣ, ಆಹಾರ ಪದ್ದತಿ ಬದಲಾವಣೆ ಮತ್ತು ಚಟುವಟಿಕೆ ರಹಿತ ಜೀವನ ಶೈಲಿಯನ್ನ ಅಳವಡಿಸಿಕೊಂಡ ಪರಿಣಾಮದಿಂದ ಇಂದು ಪಾಕಿಸ್ತಾನದಲ್ಲಿ ಮಧುಮೇಹ ರೋಗಿಗಳು ಹೆಚ್ಚಾಗಿದ್ದಾರೆ. ಪಾಕಿಸ್ತಾನದಲ್ಲಿ, ಮಧುಮೇಹ ಹೊಂದಿರುವ ವಯಸ್ಕರಲ್ಲಿ ಕಾಲು ಭಾಗಕ್ಕಿಂತ ಹೆಚ್ಚು ಜನರು ರೋಗನಿರ್ಣಯ ಮಾಡಲಾಗಿಲ್ಲ. ಹೌದು ಮಧುಮೇಹವನ್ನು ಪತ್ತೆಹಚ್ಚದಿದ್ದರೆ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸದಿದ್ದರೆ, ಇದು ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ, ಕುರುಡುತನ ಮತ್ತು ಗಂಭೀರ, ಮಾರಣಾಂತೀಕ ತೊಡಕುಗಳಾಗಿ ಪರಿಣಮಿಸಬಹುದು. ಈ ಕಾರಣದಿಂದ ಮುಂದಿನ ಜೀವನದಲ್ಲಿ ಆರೋಗ್ಯ ವೆಚ್ಚಗಳನ್ನ ಭರಿಸಬೇಕಾದ ಪರಿಸ್ಥಿತಿ ಹೆಚ್ಚಾಗುತ್ತವೆ. ಅದರಂತೆ ಪಾಕಿಸ್ತಾನವು ಮಧುಮೇಹಿಗಳನ್ನ ಹೊಂದಿದವರ ಪಟ್ಟಿಯಲ್ಲಿ 30.8 ಪ್ರತಿಶತದಿಂದ ಮೊದಲ ಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನವನ್ನ 24.9 ಪ್ರತಿಶತದಿಂದ ಕುವೈತ್ ಪಡೆದುಕೊಂಡಿದೆ.

ಭಾರತೀಯರ ಕಥೆ ಏನು?

ಭಾರತವು ಮಧುಮೇಹಿಗಳ ಪಟ್ಟಿಯಲ್ಲಿ 9.6 ಪ್ರತಿಶತದಿಂದ 62 ನೇ ಸ್ಥಾನದಲ್ಲಿದೆ. ಈ ಮೂಲಕ ಪ್ರತಿ 11 ಜನರಲ್ಲಿ ಒಬ್ಬರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು 2020 ರಲ್ಲಿ ಮಧುಮೇಹ, ಮೂತ್ರಪಿಂಡ ಕಾಯಿಲೆಯಿಂದ ಬರೊಬ್ಬರಿ 7 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಇನ್ನು 2004 ರ ಅಧ್ಯಯನದ ಪ್ರಕಾರ ಮಧುಮೇಹವು ಜೀವನ ಶೈಲಿಯ ಪರಿಣಾಮದಿಂದ ಬಂದಿದೆ. ಮಧುಮೇಹ ಹೊಂದಿದವರಲ್ಲಿ ಪಾರ್ಶ್ವವಾಯು, ಹೃದಯಾಘಾತ, ಮೂತ್ರಪಿಂಡ, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಪ್ರಮಾಣ ಹೆಚ್ಚಾಗಿದೆ. 2016 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಹೈ ಬಾಡಿ ಮಾಸ್ ಇಂಡೆಕ್ಸ್ (BMI) 36% ಮಧುಮೇಹಗಳಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಇದಲ್ಲದೆ, ಆಹಾರದ, ತಂಬಾಕು ಸೇವನೆ, ನಿಷ್ಕ್ರಿಯ ಹೊಗೆಗೆ ಔದ್ಯೋಗಿಕ ಒಡ್ಡುವಿಕೆ, ಕಡಿಮೆ ದೈಹಿಕ ಚಟುವಟಿಕೆ ಮತ್ತು ಮದ್ಯಪಾನದಂತಹ ಇತರ ಅಪಾಯಕಾರಿ ಅಂಶಗಳು ಮಧುಮೇಹಿಗಳ ಮೇಲೆ ಮಹತ್ವದ ಪಾತ್ರವನ್ನು ವಹಿಸಿವೆ.

ಇದನ್ನೂ ಓದಿ:ಮಧುಮೇಹಕ್ಕೆ ಮೆಂತ್ಯ ಬೀಜಗಳು: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಯಾವ ಪ್ರಮಾಣದಲ್ಲಿ ಮೆಂತ್ಯ ಬೀಜ ಸೇವಿಸಬೇಕು?

ಮಧುಮೇಹ ತಡೆತಟ್ಟುವಿಕೆ, ಸರ್ಕಾರದ ಕಾರ್ಯಕ್ರಮಗಳು

ಭಾರತದಲ್ಲಿ ಮಧುಮೇಹವನ್ನು ನಿಯಂತ್ರಿಸುವ ಸಲುವಾಗಿ, ಭಾರತ ಸರ್ಕಾರವು ಕ್ಯಾನ್ಸರ್, ಮಧುಮೇಹ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಪಾರ್ಶ್ವವಾಯು (NPCDCS) ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮವನ್ನು 2010 ರಲ್ಲಿ ಪ್ರಾರಂಭಿಸಿತು. ಇದು ಔಟ್ರೀಚ್ ಶಿಬಿರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇತರ ಕಾಯಿಲೆಗಳ ಜೊತೆಗೆ ಮಧುಮೇಹವನ್ನು ಮೊದಲೇ ಪತ್ತೆ ಹಚ್ಚಲು ಸ್ಕ್ರೀನಿಂಗ್ ಮಾಡಿಸಲಾಗುತ್ತಿದೆ. ರಾಷ್ಟ್ರೀಯ ಮಧುಮೇಹ ನಿಯಂತ್ರಣ ಕಾರ್ಯಕ್ರಮವನ್ನು 1987 ರಲ್ಲಿ ತಮಿಳುನಾಡು , ಜಮ್ಮು ಮತ್ತು ಕಾಶ್ಮೀರ , ಮತ್ತು ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರಾರಂಭಿಸಲಾಯಿತು.

ಇನ್ನು ಈ ಕಾರ್ಯಕ್ರಮದ ಮೂಲಕ ಹೆಚ್ಚಿನ ಅಪಾಯದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡುವುದು. ಈ ಮೂಲಕ ಹೆಚ್ಚಿನ ಅನಾರೋಗ್ಯ ಮತ್ತು ಮರಣವನ್ನು ಕಡಿಮೆ ಮಾಡುವುದು. ಜೊತೆಗ ರೋಗದಿಂದ ಉಂಟಾಗುವ ತೀವ್ರ ಮತ್ತು ದೀರ್ಘಕಾಲದ ಚಯಾಪಚಯ, ಹೃದಯರಕ್ತನಾಳದ, ಮೂತ್ರಪಿಂಡ ಮತ್ತು ಕಣ್ಣಿನ ತೊಡಕುಗಳನ್ನು ತಡೆಗಟ್ಟುವುದು. ರೋಗದಿಂದ ಅಂಗವಿಕಲರಾದವರಿಗೆ ಪುನರ್ವಸತಿ ಕಲ್ಪಿಸುವುದು ಆದರೆ, ಹಣದ ಕೊರತೆಯಿಂದಾಗಿ ಕಾರ್ಯಕ್ರಮವನ್ನು ಬೇರೆ ರಾಜ್ಯಗಳಿಗೆ ವಿಸ್ತರಿಸಲಾಗಿಲ್ಲ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ